ಟ್ರಾನ್ಸ್ಪರೆಂಟ್ ಸೀರೇಲಿ ಬ್ಯೂಟಿ ಮೇಘಾ ಶೆಟ್ಟಿ…. ಚಾಕಲೇಟ್ ಥರ ಕಾಣಿಸ್ತಿಲ್ವಾ? ಕೇಳಿದ ನಟಿ…

Published : Jul 08, 2024, 05:37 PM IST

ಜೊತೆಜೊತೆಯಲಿ ಸೀರಿಯಲ್ ನಲ್ಲಿ ಮಿಂಚಿ, ಸದ್ಯ ಚಂದನವನದಲ್ಲಿ ಸದ್ದು ಮಾಡುತ್ತಿರುವ ಬ್ಯೂಟಿ ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಶೇರ್ ಮಾಡಿದ್ದು, ಇವರ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.   

PREV
18
ಟ್ರಾನ್ಸ್ಪರೆಂಟ್ ಸೀರೇಲಿ ಬ್ಯೂಟಿ ಮೇಘಾ ಶೆಟ್ಟಿ…. ಚಾಕಲೇಟ್ ಥರ ಕಾಣಿಸ್ತಿಲ್ವಾ? ಕೇಳಿದ ನಟಿ…

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿ ಮನೆ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಮೇಘಾ ಶೆಟ್ಟಿ (Megha Shetty), ಸದ್ಯಕ್ಕಂತೂ ಸ್ಯಾಂಡಲ್ ವುಡ್ ನಲ್ಲಿ, ಜಾಹೀರಾತುಗಳಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. 
 

28

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಹೆಚ್ಚಾಗಿ ತಮ್ಮ ಫಿಟ್ನೆಸ್ ವಿಡಿಯೋಗಳನ್ನು (fitness video), ಫೋಟೋ ಶೂಟ್ ಗಳನ್ನು, ಸಿನಿಮಾ ಸುದ್ದಿಗಳನ್ನು ನೀಡುವ ಮೂಲಕ ಯಾವಾಗ್ಲೂ ನೆಟ್ಟಿಗರ ಜೊತೆ ಕನೆಕ್ಟ್ ಆಗ್ತಿರ್ತಾರೆ ನಟಿ. ಇತ್ತೀಚಿಗೆ ಇವರ ವರ್ಕೌಟ್ ವಿಡಿಯೋ ಸಖತ್ ವೈರಲ್ ಆಗಿತ್ತು. 
 

38

ತನ್ನ ಸೌಂದರ್ಯ ಮತ್ತು ಫಿಟ್ನೆಸ್ ಗೆ ಸಿಕ್ಕಾಪಟ್ಟೆ ಇಂಪಾರ್ಟನ್ಸ್ ಕೊಡುವ ಈ ಮಿಲ್ಕಿ ಬ್ಯೂಟಿ ಮೇಘಾ ಶೆಟ್ಟಿ ಜಿಮ್ ನಲ್ಲಿ ವಿವಿಧ ರೀತಿಯ ವರ್ಕೌಟ್ ಮಾಡುವ ವಿಡೀಯೋಗಳನ್ನು ಶೇರ್ ಮಾಡಿದ್ದರು. ಸೋಶಿಯಲ್ ಮೀಡೀಯಾದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಗಳನ್ನು ಹೊಂದಿರುವ ಮೇಘಾ ಶೆಟ್ಟಿಯ ಈ ವಿಡಿಯೋ ನೋಡಿ ಅಭಿಮಾನಿಗಳು ತುಂಬಾನೆ ಖುಷಿಯಾಗಿದ್ದರು. 
 

48

ಸೀರೆಯಲ್ಲಿ, ಮಾಡರ್ನ್ ಡ್ರೆಸ್ ನಲ್ಲಿ ಫೋಟೋ ಶೂಟ್ (photoshoot)ಮಾಡಿ ಗಮನ ಸೆಳೆಯುವ ನಟಿ ಇದೀಗ ಮತ್ತೊಮ್ಮೆ ಸೀರೆಯಲ್ಲಿ ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು ಕಂದು ಬಣ್ಣದ ಟ್ರಾನ್ಸಪರೆಂಟ್ ಸೀರೆಯುಟ್ಟು ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ಇವರ ಅಂದ, ಚೆಂದ, ಬಿನ್ನಾಣಕ್ಕೆ ಅಭಿಮಾನಿಗಳು ಸೋತಿದ್ದಾರೆ. 
 

58

ಒಂದಷ್ಟು ಸುಂದರವಾದ ಫೋಟೋಗಳನ್ನು ಶೇರ್ ಮಾಡಿರುವ ಮೇಘಾ ಶೆಟ್ಟಿ Did anyone say “chocolate “ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅವರು ಹೇಳಿರೋ ಹಾಗೆನೇ ಬ್ರೌನ್ ಬಣ್ಣದ ಸೀರೆಯಲ್ಲಿ ನಟಿ ಥೇಟ್ ಚಾಕಲೇಟ್ ಥರನೇ ಸ್ವೀಟ್ ಆಗಿ ಕಾಣಿಸಿಕೊಂಡಿದ್ದಾರೆ. ಜನ ಹಾಟೆಸ್ಟ್ ಲುಕ್, ನೋಡಲು ಎರಡು ಕಣ್ಣು ಸಾಲದು ಎಂದು ಕಾಮೆಂಟ್ ಮಾಡಿದ್ದಾರೆ. 
 

68

ಅಷ್ಟೇ ಅಲ್ಲ ಚಾಕಲೇಟ್ ಅಂದ್ರೆ ನಮಿಗಿಷ್ಟ, ಚೋಕೊಲಾವ, ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಮೇಘಾ ಶೆಟ್ಟಿ ಕೂಡ ದರ್ಶನ್ ತೂಗುದೀಪ ಅವರಿಗೆ ಕ್ಲೋಸ್ ಆಗಿರೋದ್ರಿಂದ ದರ್ಶನ್ ಹೆಸರು ಸೇರಿಸಿ ಕೂಡ ಕಾಮೆಂಟ್ ಮಾಡ್ತಿದ್ದಾರೆ ಜನ. ಜೈಲಿಗೆ ನೀವು ಹೋಗಿಲ್ವಾ ನಿಮ್ಮ ಫ್ರೆಂಡ್ಸ್ ನೋಡೋದಕ್ಕೆ ಎಂದು ಒಬ್ರು ಹೇಳಿದ್ರೆ, ಇನ್ನೊಬ್ರು ಕೆಟ್ಟ ಕಾಮೆಂಟ್ ಮಾಡ್ಬೇಕು ಅಂದ್ಕೊಂಡೆ ಆದ್ರೆ ಶೆಡ್ ನೆನಪಾಗಿ ಸುಮ್ನಾದೆ ಅಂತ ದರ್ಶನ್ ಘಟನೆಯನ್ನು ನೆನಪಿಸಿ ಕಾಮೆಂಟ್ ಮಾಡಿದ್ದಾರೆ. ಮೇಘಾ ಶೆಟ್ಟಿ ಯಾವತ್ತೂ ಕೆಟ್ಟ ಕಾಮೆಂಟ್ ಗಳಿಗೆ ಕ್ಯಾರೆ ಅನ್ನೋದೆ ಇಲ್ಲ. ಈವಾಗ್ಲೂ ಅವರು ಸುಮ್ಮನೆಯೆ ಇದ್ದಾರೆ. 
 

78

ಕನ್ನಡದ ಕಿರುತೆರೆಯಿಂದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ (golden star ganesh) ಜೊತೆ 'ತ್ರಿಬಲ್ ರೈಡಿಂಗ್', ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' , ಧನ್ವೀರ್ ಜೊತೆ 'ಕೈವ ' ಸಿನಿಮಾದಲ್ಲಿ ನಟಿಸಿದ್ದು, ಸದ್ಯ 'ಆಪರೇಷನ್ ಲಂಡನ್ ಕೆಫೆ' ಶೂಟಿಂಗ್‌ನ ನಲ್ಲಿ ಬ್ಯುಸಿ ಆಗಿದ್ದಾರೆ.
 

88

ಅಷ್ಟೇ ಅಲ್ಲದೇ ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾ ಹಾಗೂ ವಿನಯ್ ರಾಜ್ ಕುಮಾರ್ ಅವರ ಮುಂದಿನ ಗ್ರಾಮಾಯಣ ಸಿನಿಮಾಗೂ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ಜೊತೆ ಜಾಹೀರಾತುಗಳಲ್ಲೂ ಮಿಂಚುತ್ತಿರುವ ನಟಿ, ಈ ಹಿಂದೆ ಸ್ಟಾರ್ ನಟ ಮಾಧವನ್ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories