ಈ ಸೀರಿಯಲ್‌ಗಳೇ ವಿಚಿತ್ರವಾಗಿರುತ್ತೆ, ಸತ್ಯಕ್ಕೆ ತುಂಬಾನೆ ದೂರವಾಗಿರುತ್ತೆ. ಸೀರಿಯಲ್ (serial) ಸ್ಕೂಟರಿನಲ್ಲಿ ಚಂದ್ರನ ಮೇಲೆ ಹಾರೋದನ್ನೂ ತೋರಿಸ್ತಾರೆ, ನಟಿಯರು ಕೀಟವಾಗಿ ಬದಲಾಗುವುದನ್ನು ನೋಡಿದ್ದೀವಿ. ಗಾಳಿಪಟದಲ್ಲಿ ಒಬ್ಬರು ನೇತಾಡೋದು, ಚಂದ್ರನಿಗೆ ಹಗ್ಗ ಹಾಕಿ ಎಳೆಯೋದು ಎಲ್ಲವನ್ನೂ ನೋಡಿದ್ದೀವಿ. ಸತ್ತವರು ಬದುಕಿ ಬಂದದ್ದನ್ನು ನೋಡಿದ್ದೀವಿ. ಇತ್ತೀಚಿನ ದಿನಗಳಲ್ಲಿ ಇವೆಲ್ಲ ಸಾಮಾನ್ಯ. ಈ ವಿಡಿಯೋಗಳು ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗುತ್ತವೆ. ಇಂತಹ ಲಾಜಿಕ್ ಇಲ್ಲದ ಸೀನ್ ಗಳನ್ನ ಯಾಕೆ ಕ್ರಿಯೇಟ್ ಮಾಡ್ತಾರೆ ಅನ್ನುವ ಪ್ರಶ್ನೆಯೂ ನಮ್ಮನ್ನ ಕಾಡುತ್ತೆ. ಆದರೆ ಇದಕ್ಕೆ ಕಾರಣ ಏನು ಗೊತ್ತಾ? TRP ಅಷ್ಟೇ…
ಸೀರಿಯಲ್ ಗಳಿಗೆ TRP ಎಷ್ಟೊಂದು ಮುಖ್ಯ ಅನ್ನೋದು ನಿಮಗೆ ಗೊತ್ತೆ ಇದೆ. TRP ಬಿದ್ದೋದ್ರೆ ಸೀರಿಯಲ್ ಗಳು ಹೆಚ್ಚು ಸಮಯ ಓಡೋದಕ್ಕೆ ಸಾಧ್ಯ ಇಲ್ಲ. ಇದಕ್ಕೆ ಕನ್ನಡದಲ್ಲೇ ಸಾಕಷ್ಟು ಉದಾಹರಣೆಗಳಿವೆ. ಹೆಚ್ಚು ಬಿಲ್ಡಪ್ ನೊಂದಿಗೆ ಆರಂಭವಾದ ಬೃಂದಾವನ (Brundavana) ಧಾರಾವಾಹಿ, ಭರವಸೆ ಹುಟ್ಟಿಸಿದ್ದ ಲಕ್ಷ್ಮೀ ಟಿಫನ್ ರೂಂ, ಗೃಹಪ್ರವೇಶ, ಗಂಡ -ಹೆಂಡತಿ ಧಾರಾವಾಹಿಗಳು ಒಂದು ವರ್ಷವೂ ಪ್ರಸಾರವಾಗಿರಲಿಲ್ಲ. ಇದಕ್ಕೆಲ್ಲಾ ಕಾರಣ TRP.
ಟಿವಿ ಧಾರಾವಾಹಿಗಳ TRP ಬಿದ್ದಿದೆ ಅಂದ್ರೆ ನಿರ್ಮಾಪಕರಿಗೆ ಭಾರಿ ನಷ್ಟ ಆಗೋದು ಖಚಿತ. ಅದಕ್ಕಾಗಿ ಖ್ಯಾತ ಹಿಂದಿ ಸೀರಿಯಲ್ ನಿರ್ಮಾಪಕಿಯಾದ ಏಕ್ತಾ ಕಪೂರ್ (Ekta Kapoor) ಏನು ಮಾಡ್ತಿದ್ರು, TRP ಹೇಗೆ ಹೆಚ್ಚಿಸಿಕೊಳ್ಳುತ್ತಿದ್ದರು ಎನ್ನುವ ವಿಷಯವನ್ನು ಇದೀಗ ಸೀರಿಯಲ್ ಜಗತ್ತಿನಲ್ಲಿ ಹೆಸರು ಮಾಡಿದ ಖ್ಯಾತ ನಟಿ ಶ್ವೇತಾ ತಿವಾರಿ ರಿವೀಲ್ ಮಾಡಿದ್ದಾರೆ.
ಕಸೌಟಿ ಜಿಂದಗಿ ಕೇ ಮತ್ತು ಪರ್ವರಿಶ್ ಸೇರಿ ಹಲವಾರು ಜನಪ್ರಿಯ ಸೀರಿಯಲ್ ಗಳಲ್ಲಿ ನಟಿಸಿದ್ದ ನಟಿ ಶ್ವೇತಾ ತಿವಾರಿ (Shweta Tiwari), ಸೀರಿಯಲ್ ಗಳಲ್ಲಿ ವಿಚಿತ್ರವಾದ ಲಾಜಿಕ್ ಇಲ್ಲದ ಸೀನ್ಸ್ ಪ್ರಸಾರ ಮಾಡೋದಕ್ಕೆ, ಸಡನ್ ಆಗಿ ಯಾರನ್ನೋ ಸಾಯಿಸೋದಕ್ಕೆ, ಸತ್ತವರನ್ನ ಬದುಕಿಸೋದಕ್ಕೆ ಕಾರಣ ಏನು ಅನ್ನೋದನ್ನ ತಿಳಿಸಿದ್ದಾರೆ.
ಭಾರತೀಯ ಸೀರಿಯಲ್ ಗಳಲ್ಲಿನ ಟ್ವಿಸ್ಟ್ ಬಗ್ಗೆ ಮಾತನಾಡಿದ ಶ್ವೇತಾ ತಿವಾರಿ ತಮ್ಮ ಜನಪ್ರಿಯ ಸೀರಿಯಲ್ ಕಸೌಟಿ ಜಿಂದಗಿ ಕೇಯ ಉದಾಹರಣೆ ನೀಡಿದ್ದಾರೆ. ಈ ಧಾರಾವಾಹಿ ನಿರ್ಮಾಪಕಿ ಏಕ್ತಾ ಕಪೂರ್. ಇವರು ಸಿರಿಯಲ್ ಗಳಲ್ಲಿ ಟ್ವಿಸ್ಟ್ ನೀಡೋದ್ರಲ್ಲಿ ಮೊದಲಿಗರು. ಸೀರಿಯಲ್ ನಲ್ಲಿ ಒಂದು ವಾರದ ಎಪಿಸೋಡಗಳನ್ನು ವಾರದ ಹಿಂದೆ ಶೂಟ್ ಮಾಡ್ತಾರೆ. ಕೆಲವೊಮ್ಮೆ ನಾವು ಸೆಟ್ಟಿಗೆ ಹೋದಾಗ, ಹೊಸ ಸನ್ನಿವೇಶ ಕ್ರಿಯೇಟ್ ಆಗಿರುತ್ತೆ, ನಾಳಿನ ಎಪಿಸೋಡಿಗೆ ಇವತ್ತು ಶೂಟಿಂಗ್ ನಡೆಯುತ್ತೆ. ಜೊತೆಗೆ ಕಥೆ ಕೂಡ ಬದಲಾಗಿರುತ್ತೆ. ಇದ್ದಕ್ಕಿಂದ್ದಂತೆ ನಾಯಕನನ್ನು ನಾಯಕಿಯೇ ಸಾಯಿಸುವ ದೃಶ್ಯದ ಶೂಟ್ ನಡೆಯುತ್ತಿತ್ತು. ನಾಯಕ -ನಾಯಕಿ ಅಷ್ಟೊಂದು ಪ್ರೀತಿಸ್ತ ಇದ್ದೋರು ಯಾಕೆ ಕೊಲ್ಲಬೇಕು ಎಂದು ನಿರ್ಮಾಪಕಿಯನ್ನು ಕೇಳಿದ್ರೆ ಎಲ್ಲವೂ ಜನರನ್ನ ಸೆಳೆಯೋದಕ್ಕೆ ಟಿಆರ್’ಪಿ ಹೆಚ್ಚಿಸೋದಕ್ಕೆ (increase TRP) ಎನ್ನುತ್ತಿದ್ದರಂತೆ ಏಕ್ತಾ ಕಪೂರ್.
ಕಥೆಗೆ ಸಡನ್ ಆಗಿ ಯಾರು ಅಂದುಕೊಳ್ಳದ ಟ್ವಿಸ್ಟ್ ಬರೋದಕ್ಕೆ ಕಾರಣ ಟಿಆರ್’ಪಿ., ಪ್ರತಿ ಬಾರಿ ಟಿಆರ್ಪಿ ಬಿದ್ದಾಗ ಜನಪ್ರಿಯ ನಿರ್ಮಾಪಕಿ ಏಕ್ತಾ ಕಪೂರ್ 'ಯಾರನ್ನಾದರೂ ಸಾಯಿಸಿ’ (kill someone) ಎಂದು ಹೇಳುತ್ತಿದ್ದರು. ಪ್ರತಿ ಬಾರಿ ಟಿಆರ್ಪಿ 32 ಕ್ಕಿಂತ ಕಡಿಮೆ ಇದ್ದಾಗ, ಏಕ್ತಾ 'ಟಿಆರ್ಪಿ ಗಿರ್ಗಯಿ ಕಿಸಿ ಕೋ ಮಾರೋ' ಎಂದು ಹೇಳುತ್ತಿದ್ದರಂತೆ ಅಂದ್ರೆ ಸಡನ್ ಆಗಿ ಸೀರಿಯಲ್ ನ ಒಂದು ಪಾತ್ರವನ್ನು ಸಾಯಿಸೋದರಿಂದ ಜನರಿಗೆ ಕುತೂಹಲ ಹೆಚ್ಚಾಗುತ್ತೆ, ಯಾಕೆ ಇವನ ಕೊಲೆ ಆಯ್ತು ಎಂದು, ಅದಕ್ಕಾಗಿಯಾದ್ರೂ ಹೆಚ್ಚಿನ ಜನ ಸೀರಿಯಲ್ ನೋಡೋ ಆಸಕ್ತಿ ಉಳಿಸಿಕೊಂಡಿರ್ತಾರೆ, ಇದರಿಂದ ಟಿಆರ್’ಪಿ ಕೂಡ ಹೆಚ್ಚುತ್ತದೆ ಎನ್ನುವ ನಂಬಿಕೆ ನಿರ್ಮಾಪಕರದ್ದು.
ಇನ್ನು ಸೀರಿಯಲ್ ಗಳಲ್ಲಿ ನಟಿಯರು ಮೇಕಪ್ ಸಮೇತ ಮಲಗುವ ಸೀನ್ ಗಳ ಬಗ್ಗೆಯೂ ತಿಳಿಸಿರುವ ಶ್ವೇತಾ, ಮೇಕಪ್ ಇಲ್ಲದೇ ಬಾಯಲ್ಲಿ ಜೊಲ್ಲು ಸುರಿಸಿಕೊಂಡು ಮಲಗುವ ದೃಶ್ಯವನ್ನು ಯಾರೂ ನೋಡೊದಕ್ಕೆ ಇಷ್ಟ ಪಡಲ್ಲ, ಮೇಕಪ್ ಇದ್ರೇನೆ ಜನ ನೋಡೋದು. ಹಾಗಾಗಿ ಮೇಕಪ್ ಹಾಕಿ ಮಲಗುವ ದೃಶ್ಯ ಮಾಡ್ತೀವಿ ಎಂದಿದ್ದಾರೆ. ಅಷ್ಟೇ ಅಲ್ಲ ಎರಡು ಮೂರು ಬೇರೆ ಬೇರೆ ದೃಶ್ಯಗಳು ಬ್ಯಾಕ್ ಟು ಬ್ಯಾಕ್ ಶೂಟ್ ನಡೆಯುವಾಗ, ಮೇಕಪ್ ತೆಗೆದು ಮತ್ತೆ ಮೇಕಪ್ ಹಚ್ಚುವಷ್ಟು ಸಮಯ ಇರೋದಿಲ್ಲ ಇದಕ್ಕಾಗಿ ಮೇಕಪ್ ನಲ್ಲಿಯೇ ನಾವು ಮಲಗುತ್ತಿದ್ದೆವು ಎಂದು ಸೀರಿಯಲ್ ಗಳ ಟ್ವಿಸ್ಟ್ ಟರ್ನ್, ಸೀನ್ ಗಳ ಬಗ್ಗೆ ವಿಷ್ಯ ಬಿಚ್ಚಿಟ್ಟಿದ್ದಾರೆ ಶ್ವೇತಾ ತಿವಾರಿ.