Published : Apr 08, 2025, 09:20 PM ISTUpdated : Apr 08, 2025, 09:23 PM IST
Lakshmi Nivasa Serial: ಜಾಹ್ನವಿಯನ್ನು ಕಳೆದುಕೊಂಡ ಜಯಂತ್ ಒಂಟಿಯಾಗಿದ್ದಾನೆ. ಜಾನು ನೆನಪುಗಳಲ್ಲಿ ಮುಳುಗಿರುವ ಜಯಂತ್ ನೋವನ್ನು ಕಂಡು ವೀಕ್ಷಕರು ಮರುಗಿದ್ದಾರೆ. ಜಾನು ಸಾವಿನಿಂದ ಲಕ್ಷ್ಮೀ ದುಃಖಿತರಾಗಿದ್ದಾರೆ.
ಜಾಹ್ನವಿಯನ್ನು ಕಳೆದುಕೊಂಡಿರುವ ಜಯಂತ್ ಮತ್ತೆ ಒಂಟಿಯಾಗಿದ್ದಾನೆ. ಜಾನು ಬಂದ ಬಳಿಕ ಜಯಂತ್ ಜೀವನವೇ ಸಂಪೂರ್ಣ ಬದಲಾಗಿತ್ತು. ಇದೀಗ ಒಂಟಿಯಾಗಿರುವ ಜಯಂತ್, ಮೊಬೈಲ್‌ನಲ್ಲಿರುವ ಜಾನು ಹೇಳಿದ ಹಾಡನ್ನು ಕೇಳುತ್ತಿದ್ದಾನೆ. ಜಯಂತ್ ಸೈಕೋ ಆದರೂ ಪತ್ನಿ ಚಿನ್ನುಮರಿಯನ್ನು ತುಂಬಾನೇ ಪ್ರೀತಿಸುತ್ತಿದ್ದನು. ಜಯಂತ್ ನೋವು ಕಂಡು ವೀಕ್ಷಕರು ಸಹ ಮರುಗಿದ್ದಾರೆ.
25
ಚೆನ್ನೈನಿಂದ ನರಸಿಂಹನ ಜೊತೆಯಲ್ಲಿ ಜಾನು ಬರುತ್ತಿದ್ದಾಳೆ. ಇಂದಿನ ಸಂಚಿಕೆಯಲ್ಲಿ ಜಾನು ಮತ್ತು ವಿಶ್ವ ಮುಖಾಮುಖಿ ಆಗ್ತಾರೆ ಎಂದು ವೀಕ್ಷಕರು ಕಾಯುತ್ತಿದ್ದರು. ಆದ್ರೆ ಇಂದಿನ ಸಂಚಿಕೆಯಲ್ಲಿ ಜಾನುವಿನ ಯಾವುದೇ ಸೀನ್ ಪ್ರಸಾರವಾಗದ್ದಕ್ಕೆ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಈ ಮೂಲಕ ನಿರ್ದೇಶಕರು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ
35
ಮನೆಯಿಂದ ಹೊರಬಂದ
ಜಾನು ಸಾವಿನ ಸುದ್ದಿ ಹೇಳಲು ಬಂದಿದ್ದ ಜಯಂತ್, ಲಕ್ಷ್ಮೀ ನಿವಾಸದಲ್ಲಿಯೇ ಉಳಿದುಕೊಂಡಿದ್ದನು. ಆದ್ರೆ ಕನಸಿನಲ್ಲಿ ಜಾನು ಬರುತ್ತಿರೋದನ್ನು ಕಂಡು ಜಯಂತ್ ತನ್ನ ಮನೆಗೆ ಹಿಂದಿರುಗಲು ಹೊರಟಿದ್ದನು. ಈ ವೇಳೆ ನನ್ನಿಂದಾಗಿಯೇ ಜಾನು ಪ್ರಾಣ ಹೋಯ್ತು. ನಿಮ್ಮ ಬಳಿಯಲ್ಲಿದಿದ್ದರೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಿ. ಶ್ರೀಲಂಕಾಗೆ ಕರೆದುಕೊಂಡು ಹೋಗಿ ತಪ್ಪು ಮಾಡಿದೆ ಎಂದು ಮಾವ ಶ್ರೀನಿವಾಸ್ ಮುಂದೆ ಜಯಂತ್ ಕಣ್ಣೀರು ಹಾಕಿದ್ದಾನೆ.
45
ಇತ್ತ ಜಾನುವಿನ ಆಟಿಕೆ ಸಾಮಾನುಗಳು, ಅಂಗಿ, ಕಾಲ್ಗಜ್ಜೆ, ಬಳೆಗಳನ್ನು ಮುಂದಿಟ್ಟುಕೊಂಡು ಲಕ್ಷ್ಮೀ ಕಣ್ಣೀರು ಹಾಕುತ್ತಿದ್ದಾಳೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಲಕ್ಷ್ಮೀ ಗಂಡನ ಮುಂದೆ ಜಾನು ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ನಮಗಿಂತ ಮೊದಲೇ ಜಾನು ಹೋದಳು. ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕು ಎಂದು ಶ್ರೀನಿವಾಸ್ ಸಹ ಕಣ್ಣೀರು ಹಾಕಿದ್ದಾನೆ.
55
ವೆಂಕಿ ಕಾಣೆಯಾಗಿರೋದರಿಂದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ಆದ್ರೆ ಜೈಲಿನಲ್ಲಿರೋ ವೆಂಕಿ ಇರೋದು ಚೆಲುವಿಗೆ ಗೊತ್ತಾಗಲಿಲ್ಲ. ಅತ್ತೆಯ ಹಾರ್ಟ್ ಆಪರೇಷನ್‌ಗೆ ಹಣ ಹೊಂದಿಸಲು ಮಾಡದೇ ಇರೋದು ತಪ್ಪನ್ನು ಒಪ್ಪಿಕೊಂಡು ವೆಂಕಿ ಜೈಲುಪಾಲಾಗಿದ್ದಾನೆ. ಅತ್ತೆ-ಮಾವನಿಗೆ ವಿಷಯ ಹೇಳೋಣ ಅಂದ್ರೆ ಇಬ್ಬರು ಜಾನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆದ್ರೆ ಮಗಳು ಸತ್ತರೂ ವೆಂಕಿ ಮನೆಗೆ ಬರದಿರೋದು ಶ್ರೀನಿವಾಸ್ ಮತ್ತು ಲಕ್ಷ್ಮೀ ಗಮನಕ್ಕೆ ಬಂದಿಲ್ಲವಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.