ಲಕ್ಷ್ಮೀ ನಿವಾಸದಲ್ಲಿ ತನ್ನ ಪಾತ್ರದಿಂದಲೇ ವೀಕ್ಷಕರಿಂದ ಬೈಸಿಕೊಳ್ಳುವ ಜುಗ್ಗ ಸಂತೋಷ್ ರಿಯಲ್ ಲೈಫಲ್ಲೂ ಹಿಂಗೆನಾ?

First Published | Aug 29, 2024, 3:42 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಗಳ ಹಿರಿಯ ಪುತ್ರನಾಗಿ ನಟಿಸುವ ಮೂಲಕ ತಮ್ಮ ವರ್ತನೆಯಿಂದ, ಜುಗ್ಗತನದಿಂದ ವೀಕ್ಷಕರಿಗೆ ಕೋಪ ಬರುವಂತೆ ಮಾಡಿರೋ ಸಂತೋಷ್ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಾಗೂ ಹೆಚ್ಚು ವೀಕ್ಷಕರನ್ನು ತಲುಪಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ಶ್ರೀನಿವಾಸರ ಒಂದೊಂದು ಮಕ್ಕಳ ಗುಣ-ಸ್ವಭಾವ ಒಂದೊಂದು ತರ, ಅದರಲ್ಲೂ ಹಿರಿಯ ಮಗ ಸಂತೋಷನ ಪಾತ್ರವನ್ನೂ ವೀಕ್ಷಕರಿಗೆ ಸಿಕ್ಕಾಪಟ್ಟೆ ಕೋಪ ತರಿಸುತ್ತೆ. ಪ್ರತಿದಿನ ಸಂತೋಷ್ ಗೆ ವೀಕ್ಷಕರಿಗೆ ಬೈಗುಳಗಳ ಮಂಗಳಾರತಿ ಗ್ಯಾರಂಟಿ. 
 

ತನ್ನ ಸಿಡುಕು ಸ್ವಭಾವ, ದುಡುಕು ಬುದ್ದಿ, ಜೊತೆಗೆ ಸಿಕ್ಕಾಪಟ್ಟೆ ಕಂಜ್ಯೂಸ್, ಜುಗ್ಗ ಸಂತೋಷ್. ಯಾವಾಗ್ಲೂ ತಾನು ತನ್ನ ಹೆಂಡ್ತಿ, ಮಗು ಅಷ್ಟರ ಬಗ್ಗೆ ಮಾತ್ರ ಯೋಚನೆ ಮಾಡೊ ಬುದ್ದಿ. ಹಿರಿಯ ಮಗನಾಗಿ ಅಪ್ಪನಿಗೆ ನೆರವಾಗಿ, ಮನೆಗೆ ಒಳ್ಳೆಯ ಮಗನಾಗಿ ಇರುವ ಯೋಚನೆಯೇ ಇಲ್ಲದೇ, ಎಲ್ಲವನ್ನೂ ತನಗಾಗಿ ಕೂಡಿಟ್ಟು, ಅಪ್ಪ ಸೇರಿ ಮನೆಮಂದಿಗೆಲ್ಲಾ ಸದಾ ಕೊಂಕು ನುಡಿಯುವ ಜುಗ್ಗ ಸಂತೋಷ್. 
 

Tap to resize

ವೀಕ್ಷಕರು ಸಂತೋಷ್ ಪಾತ್ರವನ್ನ ನೋಡಿದ ಕೂಡ್ಲೆ ಬೈತಿದ್ದಾರೆ ಅಂದ್ರೆ, ಅದಕ್ಕೆ ಕಾರಣ ಆ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸುತ್ತಿರುವ ಮಧು ಹೆಗಡೆ. ದಶಕಗಳಿಂದ ಕನ್ನಡ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಕಾರ್ಯ ನಿರ್ವಹಿಸಿರುವ ಮಧು ಹೆಗಡೆ (Madhu Hegde) ಮಾಡುವಂತಹ ಎಲ್ಲಾ ಪಾತ್ರಗಳು ಸಹ ಲೀಲಾಜಾಲವಾಗಿ ಮಾಡುವಂತಹ ಅದ್ಭುತ ಕಲಾವಿದೆ. 
 

ಶಿವಮೊಗ್ಗ ಜಿಲ್ಲೆ, ಹೊಸನಗರದವರಾದ ಮಧು ಹೆಗಡೆ ಕಿರುತೆರೆಗೆ ಅಪರಿಚಿತರು ಅಲ್ವೇ ಅಲ್ಲ. ಹಲವು ವರ್ಷಗಳಿಂದ ತಮ್ಮ ಅಭಿನಯದ ಮೂಲಕ ರಂಜಿಸುತ್ತಿರುವ ಮಧು ಹೆಗಡೆ ನೀನಾಸಂ ಸಂಸ್ಥೆಯಲ್ಲಿ ಅಭಿನಯ ಕಲಿತವರು. ಮೌನರಾಗ  (Mouna Raga) ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 
 

ನಂತರ ಅನೇಕ ಧಾರಾವಾಹಿಗಳಲ್ಲಿ, ನಾಯಕನಾಗಿ, ಪೋಷಕ ನಟನಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.  'ಮಳೆಬಿಲ್ಲು', 'ಗುಪ್ತಗಾಮಿನಿ', 'ಮನ್ವಂತರ', 'ಗೆಜ್ಜೆಪೂಜೆ', 'ಜೋಗುಳ', 'ಪಲ್ಲವಿ ಅನುಪಲ್ಲವಿ' ಮಧು ಹೆಗಡೆ ನಟಿಸಿರೋ ಕೆಲವು ಪ್ರಮುಖ ಧಾರಾವಾಹಿಗಳು. 
 

ಸ್ಯಾಂಡಲ್’ವುಡ್ ನಲ್ಲೂ ಮಧು ಹೆಗಡೆ ಗುರುತಿಸಿಕೊಂಡಿದ್ದಾರೆ.  ಈ ಬಂಧನ, ನಾಯಿ ನೆರಳು, ಕವಚ, ಮಿ.ಗರಗಸ, ಮೂರು ಗುಟ್ಟು, ಒಂದು ಸುಳ್ಳು ಒಂದು ನಿಜ, ನಮ್ ನಾಣಿ ಮದ್ವೆ, ಪ್ರಾಯಶಃ ಸೇರಿದಂತೆ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

ಅಭಿನಯದ ಜೊತೆಗೆ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರೋ ಮಧು ಹೆಗಡೆಗೆ ಒಂದಂಕೆ ಕಾಡು ಎನ್ನುವ ಚಿತ್ರದ ಸಂಗೀತ ನಿರ್ದೇಶನ ಕೂಡ ಮಾಡಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಅಲ್ಲೂ ಮಧು ಹೆಗಡೆ ಆಕ್ಟರ್ ಬೈ ಚಾಯ್ಸ್, ಮ್ಯೂಸಿಕ್ ಡೈರೆಕ್ಟರ್ (music director) ಬೈ ಪ್ಯಾಷನ್ ಎಂದು ಬರೆದುಕೊಂಡಿದ್ದಾರೆ. 
 

ಇನ್ನು ಇವರ ಪರ್ಸನಲ್ ಲೈಫ್ ಬಗ್ಗೆ ಹೇಳೋದಾದರೆ ಮಧು ಹೆಗಡೆ ಪತ್ನಿ ಕೂಡ ನಟಿ. ಇವರ ಪತ್ನಿ ನಮ್ರತಾ ಶರ್ಮಾ (Namratha Sharma), ಈ ಹಿಂದೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿದ್ದರು. ಸದ್ಯ ಇವರು ತಮ್ಮದೇ ಆದ ಬ್ಯುಸಿನೆಸ್ ಆರಂಭಿಸಿದ್ದಾರೆ. ಇನ್ನು ಲಕ್ಷ್ಮೀ ನಿವಾಸದಲ್ಲಿ ಇರುವಂತೆ ಇರುವಂತೆ ಜುಗ್ಗ ಗಂಡ ಅಲ್ವಂತೆ ಮಧು, ಇವರು ರಿಯಲ್ ಲೈಫಲ್ಲಿ ಹಣ ಖರ್ಚು ಮಾಡೋವಾಗ ಯೋಚನೆ ಮಾಡೋದೆ ಇಲ್ವಂತೆ. 
 

Latest Videos

click me!