ಜಯಂತ್‌ನ ಸೈಕೋ ಅವತಾರ ಕಂಡು ಬೆಚ್ಚಿಬಿದ್ದ ಶಾಂತಮ್ಮ; ಲಕ್ಷ್ಮೀ ನಿವಾಸಕ್ಕೆ ಬಂದು ಶಾಕ್ ಕೊಟ್ಟ ಜಾನು!

Published : Apr 10, 2025, 09:21 PM IST

Lakshmi Nivasa Serial Update: ಜಯಂತ್, ಒಂಟಿಯಾಗಿ ಶಾಂತಮ್ಮನನ್ನು ಕರೆತರುತ್ತಾನೆ. ಜಾನುಗಾಗಿ ವಿಶ್ವ ಚಡಪಡಿಸುತ್ತಿದ್ದಾನೆ. ಜಾನುಗೆ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಯುತ್ತಿದೆ.

PREV
17
ಜಯಂತ್‌ನ ಸೈಕೋ ಅವತಾರ ಕಂಡು ಬೆಚ್ಚಿಬಿದ್ದ ಶಾಂತಮ್ಮ; ಲಕ್ಷ್ಮೀ ನಿವಾಸಕ್ಕೆ ಬಂದು ಶಾಕ್ ಕೊಟ್ಟ ಜಾನು!

ಜಾನು ಇಲ್ಲದೇ ಒಂಟಿಯಾಗಿದ್ದ ಜಯಂತ್ ತನ್ನನ್ನು ಬಾಲ್ಯದಲ್ಲಿ ಆರೈಕೆ ಮಾಡಿದ್ದ ಶಾಂತಮ್ಮಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಯಂತ್ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ಶಾಂತಮ್ಮ, ಆತನೊಂದಿಗೆ ಬರಲು ಹಿಂದೇಟು ಹಾಕಿದ್ದಳು. ಆದ್ರೆ ಜಯಂತ್ ಕೈತುಂಬಾ ಹಣ ನೀಡಿದ್ದರಿಂದ ಗಂಡನ ಒತ್ತಾಯದಿಂದ ಶಾಂತಮ್ಮ ಸೈಕೋ ಜೊತೆ ಬರುವಂತಾಯ್ತು.

27

ಶಾಂತಮ್ಮ ಮನೆಗೆ ಬರುತ್ತಿದ್ದಂತೆ ಜಯಂತ್ ತನ್ನ ಪ್ರೀತಿಯ ಕಥೆಯನ್ನು ಹೇಳಲು ಆರಂಭಿಸಿದನು. ಜಯಂತ್ ಮಾತುಗಳನ್ನು ಕೇಳಿದ ಶಾಂತಮ್ಮಗೆ, ಈತನ ಅತಿಯಾದ ಪ್ರೀತಿ ಆಕೆಗೆ ನೋವು ತಂದಿರಬಹುದು. ಇವನೇ ಆಕೆಯನ್ನು ಸಮುದ್ರಕ್ಕೆ ತಳ್ಳಿರಬಹುದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ಶಾಂತಮ್ಮ ತನ್ನ ಮಾತುಗಳಿಗೆ ಪ್ರತಿಕ್ರಿಯೆ ನೀಡದಿರೋದಕ್ಕೆ ಜಯಂತ್ ಮುಖಭಾವನೆ ಸಂಪೂರ್ಣವಾಗಿ ಬದಲಾಗುತ್ತದೆ.

37

ಚಿನ್ನುಮರಿ ಫೋಟೋಗೆ ಶಾಂತಮ್ಮ ಹಾರ ಹಾಕಲು ಮುಂದಾಗಿದ್ದಳು. ಇದರಿಂದ ಕೋಪಗೊಂಡ ಜಯಂತ್, ನನ್ನ ಪತ್ನಿ ಸತ್ತಿಲ್ಲ. ನನ್ನೊಂದಿಗೆ ಇದೇ ಮನೆಯಲ್ಲಿದ್ದಾಳೆ. ಜಾನು ಫೋಟೋಗೆ ಹಾರ ಹಾಕಬೇಡಿ ಎಂದು ಹೇಳಿದ್ದಾನೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ವರ್ತನೆಯನ್ನು ಕಂಡು ಶಾಂತಮ್ಮ ಬೆಚ್ಚಿಬಿದ್ದಿದ್ದಾಳೆ. ಈ ಹುಡುಗಿ ಸಾಯುವ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಇದ್ದು ಜಯಿಸಬೇಕಿತ್ತು ಮಗಳೇ ಎಂದು ಜಾನು ಫೋಟೋ ಮುಂದೆ ಶಾಂತಮ್ಮ ಹೇಳಿದ್ದಾಳೆ.

47
ಇನ್ನು ಮುಖಾಮಖಿಯಾಗಲಿಲ್ಲ ವಿಶ್ವ-ಜಾನು

ವಿಶ್ವನ ಜಗತ್ತಿಗೆ ಬಂದಿರುವ ಜಾನು ಸದ್ಯ ಕಾರ್ಮಿಕರ ವಸತಿಗೃಹದಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ. ಅಪಘಾತಕ್ಕೊಳಗಾಗುತ್ತಿದ್ದ ತನ್ನ ತಂದೆಯನ್ನು ಆ ಹುಡುಗಿ  ರಕ್ಷಿಸಿರೋ ವಿಷಯವನ್ನು ಮಗನಿಗೆ ತಿಳಿಸಿದ್ದಾಳೆ. ಆ ಹುಡುಗಿ ದೇವರ ರೀತಿಯಲ್ಲಿ ಬಂದು ನಿಮ್ಮ ತಂದೆಯನ್ನು ಕಾಪಾಡಿದ್ದಾಳೆ.  ಆದ್ದರಿಂದ ಆಕೆಯನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ನಾಳೆ ನಾವೆಲ್ಲರೂ ಹೋಗಿ ಆ ಹುಡುಗಿಯನ್ನು ಭೇಟಿ ಮಾಡೋಣ ಎಂದು ಲಲಿತಾ ಹೇಳಿದ್ದಾಳೆ. 

57
ಜಾನುಗಾಗಿ ಚಡಪಡಿಸುತ್ತಿರೋ ವಿಶ್ವ

ಇತ್ತ ಗೆಳತಿ  ಜಾನುಗಾಗಿ ವಿಶ್ವ ಚಡಪಡಿಸುತ್ತಿದ್ದಾನೆ. ನಾನು ಬರೆದಿಟ್ಟಿರುವ ಪತ್ರ ಜಾನುಗೆ ಸಿಕ್ಕಿದೆಯಾ ಅಥವಾ ಇಲ್ಲವಾ? ಜಾನುಗೆ ಏನಾಗಿದೆ? ಫೋನ್ ಸಹ ಕನೆಕ್ಟ್ ಆಗುತ್ತಿಲ್ಲ. ಇಷ್ಟೊತ್ತಿಗಾಗಲೇ ಜಾನು ನನಗೆ ಫೋನ್ ಮಾಡಬೇಕಿತ್ತು ಎಂದು ವಿಶ್ವ ಚಿಂತೆಯಲ್ಲಿದ್ದಾನೆ. ಆದ್ರೆ ತಮ್ಮ ಕಾರ್ಮಿಕರ  ವಸತಿಗೃಹದಲ್ಲಿಯೇ ಜಾನು ಇರೋ ವಿಷಯ ವಿಶ್ವನಿಗೆ ಗೊತ್ತಿಲ್ಲ.

67
ಜಾನುಗೆ ಹಾಲು-ತುಪ್ಪ ಬಿಡುವ ಕಾರ್ಯಕ್ರಮ

ಮಗಳ ಜಾನುಗೆ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ಮಾಡಲಾಗುತ್ತಿದೆ. ಜಾನು ಪಾರ್ಥಿವ ಶರೀರ ಸಿಗದ  ಹಿನ್ನೆಲೆ ಶಾಸ್ತ್ರಿಗಳ ಸಲಹೆ ಮೇರೆಗೆ ಹಾಲು-ತುಪ್ಪ ಕಾರ್ಯಕ್ರಮವನ್ನು ಮಾಡಲು ಲಕ್ಷ್ಮೀ-ಶ್ರೀನಿವಾಸ್ ಮುಂದಾಗಿದ್ದಾರೆ. ಜಯಂತ್‌ಗೂ ಫೋನ್ ಮಾಡಿ ಹಾಲು-ತುಪ್ಪ ಬಿಡುವ ಕಾರ್ಯಕ್ರಮಕ್ಕೆ ಬರುವಂತೆ ಶ್ರೀನಿವಾಸ್ ಹೇಳಿದ್ದಾರೆ. ನನ್ನ ಜಾನು ಸತ್ತಿಲ್ಲ, ಆಕೆ ನನ್ನ ಸುತ್ತಲೇ ಇದ್ದಾಳೆ ಎಂದು ನನಗೆ ಅನ್ನಿಸುತ್ತಿದೆ. ಯಾಕೆ ಈ ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಜಯಂತ್ ಬೇಸರ ವ್ಯಕ್ತಪಡಿಸಿದ್ದಾನೆ.

77

ಇನ್ನು ಲಕ್ಷ್ಮೀ ನಿವಾಸಕ್ಕೆ ಜಾನು ಬಂದಿರುವ ದೃಶ್ಯವನ್ನು ಮುಂದಿನ ಸಂಚಿಕೆಯ ಪ್ರೋಮೋದಲ್ಲಿ ತೋರಿಸಲಾಗಿದೆ. ಶ್ರೀನಿವಾಸ್ ಮತ್ತು ಲಕ್ಷ್ಮೀ ಮಲಗಿರುವ ಕೋಣೆಯೊಳಗೆ ಜಾನು ಬರುತ್ತಿರೋದನ್ನು ತೋರಿಸಲಾಗಿದೆ.  ಬಹುಶಃ ಇದು ಲಕ್ಷ್ಮೀ ಕಂಡ ಕನಸು ಆಗಿರುತ್ತದೆ ಎಂದು ವೀಕ್ಷಕರು ಊಹಿಸಿದ್ದಾರೆ. ವೀಕ್ಷಕರು ಮಾತ್ರ  ಜಾನು ಮತ್ತು ವಿಶ್ವ ಮುಖಾಮುಖಿಯಾಗೋದನ್ನು ಧಾರಾವಾಹಿ ವೀಕ್ಷಕರು ಕಾಯುತ್ತಿದ್ದಾರೆ.

Read more Photos on
click me!

Recommended Stories