ಕಡಲ ತೀರದಲ್ಲಿ ʼಬ್ರಹ್ಮಗಂಟುʼ ನಟಿ; ಬೋಲ್ಡ್‌ ಪಾಠ ಮಾಡಿದ ಆರತಿ ಪಡುಬಿದ್ರಿ ಫೋಟೋಗಳಿವು!

Published : Apr 10, 2025, 09:28 AM ISTUpdated : Apr 10, 2025, 01:11 PM IST

‘ಬ್ರಹ್ಮಗಂಟುʼ ಧಾರಾವಾಹಿ ನಟಿ ಆರತಿ ಪಡುಬಿದ್ರಿ ಅವರು ಕಡಲತೀರದಲ್ಲಿ ಒಂದಷ್ಟು ಸುಂದರ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೃತ್ತಿಯಲ್ಲಿ ಡಾಕ್ಟರ್‌ ಆಗಿರೋ ಆರತಿ ಪಡುಬಿದ್ರಿ ಅವರೀಗ ಆಕ್ಟರ್‌ ಆಗಿದ್ದು, ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. 

PREV
17
ಕಡಲ ತೀರದಲ್ಲಿ ʼಬ್ರಹ್ಮಗಂಟುʼ ನಟಿ; ಬೋಲ್ಡ್‌ ಪಾಠ ಮಾಡಿದ ಆರತಿ ಪಡುಬಿದ್ರಿ ಫೋಟೋಗಳಿವು!

ಆರತಿ ಪಡುಬಿದ್ರಿ ಅವರು ವೃತ್ತಿಯಲ್ಲಿ ಡಾಕ್ಟರ್‌ ಆಗಿದ್ದರು. ಆದರೆ ನಟನೆಯ ಮೇಲಿನ ಒಲವಿನಿಂದ ಅವರು ಈ ರಂಗಕ್ಕೆ ಕಾಲಿಟ್ಟರು.
 

27

ಆರತಿ ಪಡುಬಿದ್ರಿ ಅವರು ʼಹೂಮಳೆʼ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಹೀರೋ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಕಂಪ್ಲೀಟ್‌ ಟ್ರೆಡಿಷನಲ್‌ ಪಾತ್ರ ಆಗಿತ್ತು.
 

37

ಆರತಿ ಪಡುಬಿದ್ರಿ ಅವರು ಆ ನಂತರ ಕಲರ್ಸ್‌ ಕನ್ನಡ ವಾಹಿನಿಯ ʼಡ್ಯಾನ್ಸಿಂಗ್‌ ಚಾಂಪಿಯನ್ʼ‌ ಶೋನಲ್ಲಿ ಭಾಗವಹಿಸಿ, ಉತ್ತಮ ಡ್ಯಾನ್ಸ್‌ ಮಾಡಿದ್ದರು. ಇದನ್ನು ನೋಡಿದ ಜಡ್ಜ್‌ ಮೆಚ್ಚುಗೆ ಸೂಚಿಸಿದ್ದರು.

47

'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಡುಬಿದ್ರಿ ಅವರು ಆರತಿ ಪಾತ್ರಕ್ಕೆ ಜೀವ ತುಂಬಿದ್ದರು. ಆರಂಭದಲ್ಲಿ ಆರತಿ ಪಾತ್ರ ಮಾಡುತ್ತಿದ್ದ ಅಶ್ವಿನಿ, ಆಮೇಲೆ ಗಗನಾ ಅವರು ಈ ಪಾತ್ರದಿಂದ ಹೊರಗಡೆ ಬಂದ್ಮೇಲೆ ಆರತಿ ಪಡುಬಿದ್ರಿ ಅಂತ ಈ ಪಾತ್ರಕ್ಕೆ ಜೀವ ತುಂಬಿದ್ದರು. 
 

57

ಆರತಿ ಪಡುಬಿದ್ರಿ ಅವರು ಈಗ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಸಂಜನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಪಕ್ಕಾ ನೆಗೆಟಿವ್‌ ಶೇಡ್‌ ಪಾತ್ರ. ಮನೆಯ ಹೆಣ್ಣು ಮಗಳು ಹೇಗೆ ಇರಬಾರದೋ ಅನ್ನೋ ರೀತಿಯ ಪಾತ್ರವಿದು.

67

ಕುಡಿದು ತೂರಾಡಿ, ಓರ್ವ ಒಳ್ಳೆಯ ಮನಸ್ಸಿರುವ ಹುಡುಗನಿಗೆ ಒಂದಲ್ಲ ಒಂದು ತೊಂದರೆ ಕೊಡ್ತಿರುವ ಪಾತ್ರ ಇದಾಗಿದೆ. ಮುಂದೆ ಈ ಪಾತ್ರ ಹೇಗೆ ಸಾಗಲಿದೆ ಎಂದು ಕಾದು ನೋಡಬೇಕಾಗಿದೆ. 
 

77

ಕನ್ನಡ ನಟಿ ಆರತಿ ಪಡುಬಿದ್ರಿ ಅವರು ಟ್ರೆಡಿಷನಲ್‌ ಹಾಗೂ ವೆಸ್ಟರ್ನ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಅಷ್ಟೇ ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

Read more Photos on
click me!

Recommended Stories