ಜಯಂತ್ ಪಾಲಿಗೆ ಬೆಳಕಾಗಿ ಬಂದ ಹುಡುಗ; ಚಿಗೊರೆಡದ ಆಸೆ, ಶಾಂತಮ್ಮ ಕಂಗಾಲು!

Published : Apr 15, 2025, 08:27 AM ISTUpdated : Apr 15, 2025, 08:29 AM IST

Lakshmi Nivasa Serial: ಜಾಹ್ನವಿಯನ್ನು ಕಳೆದುಕೊಂಡ ಜಯಂತ್ ಹುಚ್ಚನಾಗಿದ್ದು, ಬಾಲ್ಯದ ಆರೈಕೆ ಮಾಡಿದ ಶಾಂತಮ್ಮಳನ್ನು ಕರೆತಂದಿದ್ದಾನೆ. ಜಾನು ಸತ್ತಿಲ್ಲ ಎಂಬ ನಂಬಿಕೆ ಜಯಂತ್‌ಗೆ ಇದ್ದು, ಆಕೆಯ ಇರುವಿಕೆಯ ಅನುಭವವಾಗಿದೆ. ಕಾಲ್ಗೆಜ್ಜೆ ಸಿಕ್ಕಿದ್ದು, ಹುಡುಗನ ಮಾತು ಆ ನಂಬಿಕೆಯನ್ನು ಹೆಚ್ಚಿಸಿದೆ.

PREV
16
ಜಯಂತ್ ಪಾಲಿಗೆ ಬೆಳಕಾಗಿ ಬಂದ ಹುಡುಗ; ಚಿಗೊರೆಡದ ಆಸೆ, ಶಾಂತಮ್ಮ ಕಂಗಾಲು!

ಜಾಹ್ನವಿಯನ್ನು ಕಳೆದುಕೊಂಡಿರುವ ಜಯಂತ್ ಅಕ್ಷರಶಃ ಹುಚ್ಚನಾಗಿದ್ದಾನೆ. ತಾನು ಒಂಟಿಯಾಗಿರೋದರಿಂದ ಬಾಲ್ಯದಲ್ಲಿ ತನ್ನನ್ನು ಆರೈಕೆ ಮಾಡಿದ್ದ ಶಾಂತಮ್ಮಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಯಂತ್ ಓರ್ವ ಸೈಕೋ ಅಂತ ಗೊತ್ತಿದ್ರೂ ಆರ್ಥಿಕ ಪರಿಸ್ಥಿತಿಗೆ ಕಟ್ಟುಬಿದ್ದು ಶಾಂತಮ್ಮ ಬಂದಿದ್ದಳು. 

26

ಚಿನ್ನುಮರಿ ಸತ್ತಿಲ್ಲ ಅನ್ನೋದು ಜಯಂತ್ ಬಲವಾದ ನಂಬಿಕೆಯಾಗಿದೆ. ತನ್ನ ಚಿನ್ನುಮರಿ ಮತ್ತೆ ಬರುತ್ತಾಳೆ ಮತ್ತು ನನ್ನೊಂದಿಗೆ ಇರುತ್ತಾಳೆ ಎಂದು ಜಯಂತ್ ನಂಬಿಕೊಂಡಿದ್ದಾನೆ. ಮಧ್ಯರಾತ್ರಿ ಲಕ್ಷ್ಮೀ ನಿವಾಸಕ್ಕೆ ಬಂದಾಗಲೂ ಜಾನು ಇರುವಿಕೆಯ ಅನುಭವ ಜಯಂತ್‌ಗೆ ಆಗಿದೆ. ಹಾಲು-ತುಪ್ಪ ಕಾರ್ಯಕ್ರಮದ ಎಡೆಯಲ್ಲಿನ ಆಹಾರ ಖಾಲಿಯಾಗಿರೋದು ಜಯಂತ್ ಅನುಮಾನಕ್ಕೆ ಕಾರಣವಾಗಿತ್ತು.

36

ಲಕ್ಷ್ಮೀ ನಿವಾಸಕ್ಕೆ ಬಂದಿದ್ದ ಜಾನು, ಪೋಷಕರನ್ನು ನೋಡಿದ್ದಳು. ನಂತರ ಅಜ್ಜಿಯನ್ನು ಭೇಟಿಯಾಗಿ ತನ್ನೆಲ್ಲಾ ಕಥೆಯನ್ನು ಹೇಳಿಕೊಂಡು ಅಲ್ಲಿಂದ ಹೋಗಿದ್ದಳು. ಈ ವೇಳೆ ಜಾನು ಧರಿಸಿದ ಕಾಲ್ಗೆಜ್ಜೆ ಅಜ್ಜಿಯ ಕೋಣೆಯಲ್ಲಿಯೇ ಬಿದ್ದಿತ್ತು. ಈ ಕಾಲ್ಗೆಜ್ಜೆ ಜಯಂತ್‌ಗೆ ಸಿಕ್ಕಿದ್ದು, ತನ್ನ ಚಿನ್ನುಮರಿ ಸತ್ತಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾನೆ. 

46

ಮಧ್ಯರಾತ್ರಿಯಾಗಿದ್ದರಿಂದ ಜಯಂತ್ ಮಾವನ ಮನೆಯಲ್ಲಿ ಮಲಗಿದ್ದನು. ಬೆಳಗ್ಗೆ ಹೊರಡುವಾಗ ಲಕ್ಷ್ಮೀ ನಿವಾಸದ ಪಕ್ಕದ್ಮನೆ ಹುಡುಗ, ಜಯಂತ್ ಅಂಕಲ್... ಜಾನು ಅಕ್ಕ ಎಲ್ಲಿ ಎಂದು ಕೇಳುತ್ತಾನೆ. ಇದಕ್ಕೆ ದುಃಖದಿಂದ ಜಾನು ತನ್ನೊಂದಿಗೆ ಇಲ್ಲ ಎಂಬ ವಿಷಯವನ್ನು ಹೇಳಿದ್ದಾನೆ. 

56

ಜಯಂತ್ ಮಾತಿಗೆ ಆ ಹುಡುಗ ನಗುತ್ತಾ, ನಾನು ನಿನ್ನೆ ರಾತ್ರಿಯಷ್ಟೇ ಜಾನು ಅಕ್ಕಳನ್ನ ನೋಡಿದ್ದೆ. ನನಗೆ ಚಾಕ್ಲೆಟ್ ನೀಡಿ ಚೆನ್ನಾಗಿ ಓದಬೇಕು ಎಂದು ಹೇಳಿದ್ದಾಳೆ. ಸುಳ್ಳು ಹೇಳಬೇಡಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಜಯಂತ್, ಚಿನ್ನುಮರಿ ಬದುಕಿರೋದನ್ನು ಖಚಿತಪಡಿಸಿಕೊಂಡಿದ್ದಾನೆ. ಇತ್ತ ಆ ಹುಡುಗನ ಮಾತು ಕೇಳಿ  ಕಾರ್‌ನಲ್ಲಿ ಕುಳಿತಿದ್ದ ಶಾಂತಮ್ಮ ಕಂಗಾಲು ಆಗಿದ್ದಾಳೆ. 

66
Lakshmi Nivasa

ಅಜ್ಜಿಗೆ ಬಂತು ಪ್ರಜ್ಞೆ

ಅಜ್ಜಿಯೂ ಸಹ ತನಗೆ ಪ್ರಜ್ಞೆ ಬಂದರೂ ಜಯಂತ್‌ ಭಯದಿಂದ ನಾಟಕ ಮಾಡುತ್ತಿದ್ದೇನೆ. ಆದ್ರೆ  ನನಗೆ ಹುಷಾರು ಆಗಿಲ್ಲ ಅಂತ ಮಗ ತುಂಬಾ ಹಣ ಖರ್ಚು ಮಾಡುತ್ತಿದ್ದಾನೆ. ಅದನ್ನು ನೋಡಿ ನನಗೆ ನೋವು ಆಗುತ್ತಿದೆ ಎಂದು ಅಜ್ಜಿ ಕಣ್ಣೀರು ಹಾಕಿದ್ದಾಳೆ. ಇದಕ್ಕೆ ಏನಾದ್ರೂ ಒಂದು ವ್ಯವಸ್ಥೆ ಮಾಡೋಣ. ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು. ಜಯಂತ್ ಎಲ್ಲೆಲ್ಲಿ ಕ್ಯಾಮೆರಾ ಇರಿಸುತ್ತಾರೆ ಎಂದು ಗೊತ್ತಿರಲ್ಲ. ನಾನು ಹೇಳುವರೆಗೂ ಪ್ರಜ್ಞೆ ಇಲ್ಲದಂತಿರು ಎಂದು ಜಾನು ಹೇಳಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories