ಸೀರಿಯಲ್‌ ಸಿಕ್ಕಿದ್ಮೇಲೆ ರಜತ್‌ ತಾಯಿನಾಡಿನಲ್ಲಿ ಭವ್ಯಾ ಗೌಡ; ಒಪನ್‌ ಆಗಿ ಜಗಳ ಆಡ್ಕೊಂಡ ಅಕ್ಕ-ತಂಗಿ!

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಖ್ಯಾತಿಯ ಭವ್ಯಾ ಗೌಡ ಅವರು ಬ್ಯಾಂಕಾಕ್‌ಗೆ ಹಾರಿದ್ದಾರೆ. ಇತ್ತೀಚೆಗೆ ಅವರು ʼಕರ್ಣʼ ಧಾರಾವಾಹಿಯಲ್ಲಿ ನಟಿಸುತ್ತಿರೋದು ಪಕ್ಕಾ ಆಗಿತ್ತು. ಈಗ ಅವರು ವಿದೇಶಕ್ಕೆ ಹಾರಿದ್ದಾರೆ.

karna serial actress bhavya gowda in thailand

ʼಬಿಗ್‌ ಬಾಸ್ʼ‌ ಮನೆಯಲ್ಲಿದ್ದಾಗ ರಜತ್‌ ಅವರು ಹೊಸ ವರ್ಷದ ಆಚರಣೆಗೆ ವಿದೇಶಕ್ಕೆ ಹೋಗಬೇಕು ಎಂದುಕೊಂಡಿದ್ದೆವು ಎಂದು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದರು. ಅದನ್ನೇ ಸುದೀಪ್‌ ಅವರು ಪರೋಕ್ಷವಾಗಿ ಥೈಲ್ಯಾಂಡ್‌ ಬದಲಿಗೆ ತಾಯಿನಾಡು ಎಂದು ಕರೆದಿದ್ದರು.
 

karna serial actress bhavya gowda in thailand

ಈಗ ಇದೇ ತಾಯಿನಾಡಿಗೆ ಭವ್ಯಾ ಗೌಡ ಅವರು ಹೋಗಿದ್ದಾರೆ. ರಜತ್‌ ಹೋಗಬೇಕಾಗಿದ್ದ ಸ್ಥಳಕ್ಕೆ ಭವ್ಯಾ ಗೌಡ ಅವರು ಹೋಗಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 
 


ಭವ್ಯಾ ಗೌಡ ಅವರು ಕಿರಣ್‌ ರಾಜ್‌ ನಟನೆಯ ʼಕರ್ಣʼ ಧಾರಾವಾಹಿಯಲ್ಲಿ ನಟಿಸಿದ್ದು, ಪ್ರೋಮೋ ಶೂಟ್‌ನಲ್ಲಿ ಭಾಗಿಯಾಗಿರೋ ವಿಡಿಯೋ ವೈರಲ್‌ ಆಗ್ತಿದೆ.

ಭವ್ಯಾ ಗೌಡ ಸೇರಿದಂತೆ ನಮ್ರತಾ ಗೌಡ ಕೂಡ ಈ ಸೀರಿಯಲ್‌ನಲ್ಲಿ ನಟಿಸುತ್ತಿದ್ದು, ಆದಷ್ಟು ಬೇಗ ಈ ಧಾರಾವಾಹಿ ಪ್ರಸಾರ ಆಗಲಿದೆಯಂತೆ. 
 

ಅಂದಹಾಗೆ ಕನ್ನಡ ನಟಿ ಭವ್ಯಾ ಗೌಡ ಅವರು ಬ್ಯಾಂಕಾಕ್‌ ಟ್ರಿಪ್‌ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಅಂದಹಾಗೆ ಭವ್ಯಾ ಗೌಡ ಅವರ ಪೋಸ್ಟ್‌ಗೆ ಅಕ್ಕ ದಿವ್ಯಾ ಗೌಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ನೋಡಿ ಭವ್ಯಾ ಅವರು “ನಾನು ನಿನ್ನನ್ನು ಮಿಸ್‌ ಮಾಡಿಕೊಳ್ತಿಲ್ಲ” ಎಂದು ಹೇಳಿದ್ದಾರೆ.
 

ಭವ್ಯಾ ಗೌಡ ಅವರು ಮಾತು ಕೇಳಿ ದಿವ್ಯಾ ಗೌಡ ಅವರು, “ನಾನು ಕೂಡ ನಿನ್ನನ್ನು ಮಿಸ್‌ ಮಾಡಿಕೊಳ್ತಿಲ್ಲ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅಕ್ಕ-ತಂಗಿ ಇಬ್ಬರೂ ಸೋಶಿಯಲ್‌ ಮೀಡಿಯಾದಲ್ಲಿ ಕಾಲೆಳೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಭವ್ಯಾ ಗೌಡ ಅವರು ಧಾರಾವಾಹಿ, ರಿಯಾಲಿಟಿ ಶೋಗಳಿಂದ ಬ್ರೇಕ್‌ ಪಡೆದು, ಫ್ಯಾಮಿಲಿಯಿಂದ ದೂರ ಇದ್ದು ಪಾರ್ಟಿ ಮಾಡ್ತಿದ್ದಾರೆ. 

ಕನ್ನಡ ನಟಿ ಭವ್ಯಾ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಇದಕ್ಕಾಗಿ ಕರ್ಣ ಧಾರಾವಾಹಿ ಪ್ರಸಾರ ಆಗೋವರೆಗೂ ಕಾಯಬೇಕು. 

Latest Videos

vuukle one pixel image
click me!