ರಾಜಾ ರಾಣಿ ಸೀರಿಯಲ್‌ನಲ್ಲಿ ಪಟಾಪಟಾ ಅಂತ ಮಾತನಾಡಿಕೊಂಡು ಜನರ ಮನಸ್ಸಿಗೆ ಹತ್ತಿರವಾದ ಚಂದನಾ ಅನಂತಕೃಷ್ಣ ವೈವಾಹಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಚಂದನಾ ತಮ್ಮ ಹಾಡಿನ ಮೂಲಕ ಕನ್ನಡಿಗರ ಮನಸ್ಸು ಗೆದ್ದು ಫಿನಾಲೆ ವಾರಕ್ಕೂ ಕಾಲಿಟ್ಟರು, ಅದಾದ ಮೇಲೆ ಹೂ ಮಳೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು.
ಭರತನಾಟ್ಯದ ಮೇಲೆ ಒಲವು ಹೆಚ್ಚಿನ ಕಾರಣ ಚಂದನಾ ಗಮನ ಪೂರ್ತಿ ಆಕೆಡೆನೇ ಇತ್ತು. ಆದರೆ ಈಗ ವೀಕ್ಷಕರಿಗೆ ಇಷ್ಟವಾಗುತ್ತಿರುವುದು ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಇರುವ ಜಾನು ಪಾತ್ರ.
ನವೆಂಬರ್ ತಿಂಗಳಿನಲ್ಲಿ ಚಂದನಾ ಅನಂತಕೃಷ್ಣ ಮತ್ತು ಬಹುಕಾಲದ ಗೆಳೆಯ ಪ್ರತ್ಯಕ್ಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೂರ್ನಾಲ್ಕು ದಿನಗಳ ಕಾಲ ಸಂಭ್ರಮವೋ ಸಂಭ್ರಮ.
ಚಂದನಾ ಮದುವೆಯ ವರಪೂಜೆಯಲ್ಲಿ ಅಪರೂಪದ ಕಾಂಬಿನೇಷನ್ ಸೀರೆ ಧರಿಸಿದ್ದರು. ನೇರಳ ಬಣ್ಣಕ್ಕೆ ರಾಮಾ ಗ್ರೀನ್ ಬಣ್ಣ ಇದ್ದ ಕಾರಣ ನೆಟ್ಟಿಗರ ಗಮನ ಸೆಳೆದಿದೆ.
ನಂದಿನಿ ಎಂಬುವವರು ಚಂದನಾ ಅನಂತಕೃಷ್ಣ ಮೇಕಪ್ ಮಾಡಿರುವುದು. ಕೊರಳಿಗೆ ಒಂದೆರಡು ಸರ, ಕೈ ತುಂಬಾ ಬಳೆ ಹಾಗೂ ಹೂವಿನ ಜಡೆ ಅಭಿಮಾನಿಗಳಿಗೆ ಇಷ್ಟವಾಗಿದೆ.
ಈ ಸೀರೆಯಲ್ಲಿ ಚಂದನಾ ಚಂದಿನ ಬೊಟ್ಟು ಇಟ್ಟಿದ್ದಾರೆ. ಇದು ಭರತನಾಟ್ಯದಲ್ಲೂ ಇದೆ ನಿಮ್ಮ ನೆಲೆ ಮತ್ತು ಹೆಸರು ಕೊಟ್ಟದನ್ನು ನೀವು ಮರೆತಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಚಂದನಾ ಮನೆಯಲ್ಲಿ ಮೆಹೇಂದಿ ಶಾಸ್ತ್ರ ನಡೆದಿದೆ, ಅದಾದ ಮೇಲೆ ಪಾರ್ಟಿ ಹಾಲ್‌ನಲ್ಲಿ ಸಂಗೀತ್ ನಡೆದಿದ್ದು, ಚಾಮರಾಪಟೇಯಲ್ಲಿ ಮದುವೆ ನಡೆದಿದೆ. ಆರತಕ್ಷತೆಯನ್ನು ಓಪನ್ ಗ್ರೌಂಡ್ಸ್‌ನಲ್ಲಿ ಹಮ್ಮಿಕೊಂಡಿದ್ದರು.