ಜೀ ಕನ್ನಡ ವಾಹಿನಿಯಲ್ಲಿ ಜನಪ್ರಿಯ ಸತ್ಯ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಸಾಗರ್ ಉರ್ಫ್ ಅಮೂಲ್ ಬೇಬಿ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಡಿಸೆಂಬರ್ 4ರಂದು ನಟ ಸಾಗರ್ ಬಿಳಿಗೌಡ ಮತ್ತು ಪತ್ನಿ ಸಿರಿ ತಮ್ಮ ಮುದ್ದಿನ ಮಗಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ಏಪ್ರಿಲ್ 7,2024ರಂದು ಸಿರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಮಗಳಿಗೆ 9 ತಿಂಗಳು ತುಂಬುತ್ತಿದ್ದಂತೆ ನಾಮಕರಣ ಮಾಡಿ 'ಪ್ರಹರ್ಶ' ಎಂದು ಹೆಸರಿಟ್ಟಿದ್ದಾರೆ.
'ಹ್ಯಾಪಿ 9 ತಿಂಗಳು ನಮ್ಮ ಮನೆಯ ಪುಟ್ಟ ಪರಿ. ಆಕೆಯನ್ನು ನಾವು ಪ್ರಹರ್ಶ ಎಂದು ಹೆಸರಿಟ್ಟಿದ್ದೀವಿ ಎಂದು ಸಿರಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನೀಲಿ ಬಣ್ಣ ಇಂಡೋ ವೆಸ್ಟ್ರನ್ ಔಟ್‌ಫಿಟ್‌ನಲ್ಲಿ ಸಾಗರ್ ಕಾಣಿಸಿಕೊಂಡಿದ್ದಾರೆ, ಹಸಿರು ಮತ್ತು ನೀಲಿ ಬಣ್ಣದ ರೇಶ್ಮೆ ಸೀರಿಯಲ್ಲಿ ಪತ್ನಿ ಸಿರಿ ಮಿಂಚಿದ್ದಾರೆ. ಮಗಳಿಗೆ ಹಸಿರು ಬಣ್ಣದ ರೇಶ್ಮೆ ಫ್ರಾಕ್ ಹಾಕಿದ್ದಾರೆ.
ಪ್ರಹರ್ಶ ಎಂಬ ಹೆಸರು ತುಂಬಾನೇ ಅಪರೂಪ. ಖುಷಿಯಾಗಿರುವ ಹುಡುಗಿ, ಸಂತಸ ತರುವ ವ್ಯಕ್ತಿ, ಸದಾ ಸಂಭ್ರಮಿಸುವ ವ್ಯಕ್ತಿ ಎಂಬ ಅರ್ಥ ಕೊಡುತ್ತದೆ. ಆದರೆ ಸಂಸ್ಕೃತದಲ್ಲಿ ಪ್ರಹರ್ಶ ಅಂದರೆ ಸಮಯ.
ಸಾಗರ್ ಬಿಳಿಗೌಡ ಮತ್ತು ಸಿರಿ 2023ರ ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸಿರಿ ಕೂಡ ಮಾಡಲ್ ಆಗಿದ್ದು ಕೆಲವು ಸೀರಿಯಲ್ ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.