6 ವರ್ಷಕ್ಕೇ 6 ಲಕ್ಷದ ಕಾರು ಖರೀದಿಸಿದ ಲಕ್ಷ್ಮಿ ನಿವಾಸದ ಈ ನಟಿಗೀಗ ಇನ್‌ಸ್ಟಾದಲ್ಲಿ 2 ಮಿಲಿಯನ್ ಫಾಲೋಯರ್ಸ್!

First Published | Nov 18, 2024, 4:43 PM IST

ಇತ್ತೀಚೆಗಷ್ಟೆ ಕಾರು ಖರೀದಿಸುವ ಮೂಲಕ ಭಾರಿ ಸುದ್ದಿಯಾಗಿದ್ದ ಲಕ್ಷ್ಮೀ ನಿವಾಸ ಧಾರಾವಾಹಿಯ ಬಾಲನಟಿ ನಿಶಿತಾ, ಇದೀಗ ಯೂಟ್ಯೂಬ್ ನಲ್ಲಿ 2 ಮಿಲಿಯನ್ ಸಬ್’ಸ್ಕ್ರೈಬರ್ಸ್ ಪಡೆದ ಸಂಭ್ರಮದಲ್ಲಿದ್ದಾರೆ. 
 

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಭಾವನಾ ದತ್ತು ಪುತ್ರಿಯಾಗಿ ನಟಿಸುತ್ತಿರುವ ಮುದ್ದು ಮಗು ಖುಷಿ, ಇತ್ತೀಚೆಗಷ್ಟೇ 6 ನೇ ವರ್ಷದಲ್ಲಿ 6 ಲಕ್ಷ ಮೌಲ್ಯದ ಕಾರು ಖರೀದಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಮತ್ತೊಂದು ವಿಷ್ಯದಿಂದ ಸುದ್ದಿಯಲ್ಲಿದ್ದಾರೆ ಈ ಬಾಲೆ.

ಹೌದು ಖುಷಿ ಪಾತ್ರದಲ್ಲಿ ನಟಿಸುತ್ತಿರುವ ಆರು ವರ್ಷದ ನಿಶಿತಾ ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ. ಯೂಟ್ಯೂಬ್, ಇನ್’ಸ್ಟಾಗ್ರಾಂ, ಫೇಸ್ ಬುಕ್ ಪೇಜ್ ಗಳನ್ನು ಹೊಂದಿರುವ ಈ ಬಾಲೆಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಕೂಡ ಇದ್ದಾರೆ. 
 

Tap to resize

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ವಿವಿಧ ರೀಲ್ಸ್, ಶಾರ್ಟ್ಸ್ ವಿಡಿಯೋ ಮೂಲಕ ಜನಕ್ಕೆ ಮನರಂಜನೆ ನೀಡುತ್ತಲಿರುತ್ತಾರೆ ನಿಶಿತಾ. ಹೆಚ್ಚಾಗಿ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ, ಜೊತೆಗೆ ಫೋಟೊ ಶೂಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

ನಿಶಿತಾ ಅವರ ಸೋಶಿಯಲ್ ಮೀಡಿಯಾ ಪೇಜ್ ಗಳನ್ನು ಅವರ ತಾಯಿ ಪ್ರಿಯಾ ಅವರು ಹ್ಯಾಂಡಲ್ ಮಾಡುತ್ತಿದ್ದು, ಇದೀಗ ನಿಶಿತಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇನ್’ಸ್ಟಾದಲ್ಲಿ ಇಲ್ಲಿವರೆಗೆ ಸುಮಾರು 392 ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ. 
 

ಇನ್ನು ಯೂಟ್ಯೂಬ್ ವಾಹಿನಿಯಲ್ಲೂ ಬರೋಬ್ಬರಿ 23 ಲಕ್ಷ ಸಬ್ ಸ್ಕ್ರೈಬರ್ಸ್ ಗಳನ್ನು (subscribers) ಹೊಂದಿದ್ದಾರೆ. ಅಂದರೆ ಸುಮಾರು 2 ಮಿಲಿಯನ್ ಜನ ಯೂಟ್ಯೂಬ್ ನಲ್ಲಿ ಇವರನ್ನು ಹಿಂಬಾಲಿಸುತ್ತಿದ್ದಾರೆ, ಅಷ್ಟೇ ಅಲ್ಲ ನಿಶಿತಾ ಸುಮಾರು 700 ಕ್ಕೂ ಅಧಿಕ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿದ್ದಾರೆ. 
 

ಇದೀಗ ನಿಶಿತಾ ತಮ್ಮ ಮಿಲಿಯನ್ ಫಾಲೋವರ್ಸ್, ಸಬ್ಸ್ಕ್ರೈಬರ್ಸ್ ಪಡೆದ ಸಂಭ್ರಮವನ್ನು ದೊಡ್ಡದಾಗಿ ಪಾರ್ಟಿ ಮಾಡಿ ಸಂಭ್ರಮಿಸಿದ್ದು, ನಿಶಿತಾ, ಎಲ್ಲಾ ಸೋಶಿಯಲ್ ಮೀಡಿಯಾ ಐಕಾನ್ ಇರುವಂತಹ ಕೇಕ್ ಕತ್ತರಿಸಿ ಖುಷಿಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ಸೆಲೆಬ್ರಿಟಿಗಳು ಸಹ ಭಾಗಿಯಾಗಿದ್ದರು. 
 

ಲಕ್ಷ್ಮೀ ನಿವಾಸ ಧಾರವಾಹಿಯ ಸಿದ್ದೇ ಗೌಡ ಖ್ಯಾತಿಯ ಧನಂಜಯ್ (Dhananjay), ಸೋನು ಶ್ರೀನಿವಾಸ್ ಗೌಡ, ಸೇರಿ ಒಂದಿಷ್ಟು ಯೂಟ್ಯೂಬರ್ಸ್, ಕಂಟೆಂಟ್ ಕ್ರಿಯೇಟರ್ಸ್ ಆಗಮಿಸಿದ್ದರು. ಧನಂಜಯ್ ತಮ್ಮ ಪ್ರೀತಿಯ ಮುದ್ದಮ್ಮನಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 
 

Latest Videos

click me!