ಕನ್ನಡತಿ ನಟಿ ಜ್ಯೋತಿ ರೈ ಅವರು 'ಕಿಲ್ಲರ್' ಸಿನಿಮಾ ಬಿಡುಗಡೆಗೂ ಮುನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್‌ನಲ್ಲಿ ಬಿದ್ದು ಗಾಯಗೊಂಡಿದ್ದಾರೆಯೇ ಅಥವಾ ಅನಾರೋಗ್ಯವೇ ಎಂಬ ಪ್ರಶ್ನೆ ಕೇಳಿಬಂದಿದೆ.
ತೆಲುಗು ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ತಮ್ಮ ನಟನೆಯಿಂದ ಛಾಪು ಮೂಡಿಸಿರುವ ನಟಿ ಜ್ಯೋತಿ ರೈ (ಜ್ಯೋತಿ ಪೂರ್ವಾಜ್) ಅವರು, ಸದ್ಯ ತಮ್ಮ ಮುಂಬರುವ 'ಕಿಲ್ಲರ್' (KilleR) ಸಿನಿಮಾದ ಬಿಡುಗಡೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಜ್ಯೋತಿ ರೈ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಫೋಟೋವೊಂದನ್ನು ಹಂಚಿಕೊಂಡಿದ್ದು, 'Getting closer and closer to the release date. We’ll announce it at the right time, considering the production houses involved in it. Meet RAI from KilleR #SuperSHE' ಎಂದು ಬರೆದುಕೊಂಡಿದ್ದಾರೆ.
26
ಆರೋಗ್ಯ ಸ್ಥಿತಿ ಬಗ್ಗೆ ಅಭಿಮಾನಿಗಳ ಆತಂಕ
ಈ ಹಿಂದೆಯೂ ಜ್ಯೋತಿ ರೈ ಅವರು ಸ್ಟಂಟ್ ಶೂಟಿಂಗ್ ಮಾಡುವಾಗ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಪುನಃ ಆಸ್ಪತ್ರೆಯಲ್ಲಿ ನೋಡುವುತ್ತಿರುವುದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ, ಅವರು ಯಾವ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಇದು ಸಿನಿಮಾ ಚಿತ್ರೀಕರಣದ ಒಂದು ಭಾಗವೇ ಅಥವಾ ಶೂಟಿಂಗ್‌ನಲ್ಲಿ ಬಿದ್ದು ಗಾಯಗೊಂಡಿದ್ದಾರೆಯೇ ಅಥವಾ ಅನಾರೋಗ್ಯವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಆಸ್ಪತ್ರೆಯಲ್ಲಿದ್ದರೂ ಮುಖದ ಮೇಲೆ ಮೇಕಪ್ ಹಾಕಿಕೊಂಡು ಪೋಸ್ ಕೊಟ್ಟಿರುವುದನ್ನು ನೋಡಿದರೆ ಇದು ಸಿನಿಮಾ ಶೂಟಿಂಗ್‌ನ ಒಂದು ಭಾಗವೇಆಗಿರಬೇಕು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
36
‘ಕಿಲ್ಲರ್’ ಚಿತ್ರದ ಬಗ್ಗೆ ಕುತೂಹಲ:
'ಕಿಲ್ಲರ್' ಸಿನಿಮಾ ಈಗಾಗಲೇ ಫೆಬ್ರವರಿ 22ರಂದು ಟೀಸರ್ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಇದೀಗ ಸಿನಿಮಾ ಬಿಡುಗಡೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಈ ಚಿತ್ರದಲ್ಲಿ ಜ್ಯೋತಿ ರೈ ಅವರು 'ರೈ' (RAI) ಎಂಬ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದ ಟೀಸರ್‌ನಲ್ಲಿ ನಟಿ ತುಂಬಾ ಹಾಟ್ ಆಗಿ ಹಾಗೂ ಸಾಂಪ್ರದಾಯಿಕವಾಗಿಯೂ ಕಾಣಿಸಿಕೊಂಡಿದ್ದಾರೆ. ಅಂದರೆ, ಆಧುನಿಕ ಉಡುಪು ಹಾಗೂ ಸೀರೆಗಳಲ್ಲಿಯೂ ಅವರ ಪಾತ್ರ ವಿಭಿನ್ನವಾಗಿ ಮೂಡಿಬರಲಿದೆ ಎಂಬುದು ಕಂಡುಬರುತ್ತಿದೆ. #SuperSHE ಎಂಬ ಹ್ಯಾಶ್‌ಟ್ಯಾಗ್ ಬಳಸಲಾಗಿರುವುದರಿಂದ, ಇದು ಮಹಿಳಾ ಪ್ರಧಾನ ಅಥವಾ ಶಕ್ತಿಶಾಲಿ ಪಾತ್ರವೆಂದು ಊಹಿಸಲಾಗಿದೆ.
56
ವೈಯಕ್ತಿಕ ಬದುಕಿನಲ್ಲಿಯೂ ಏಳು-ಬೀಳು
ಮೂಲತಃ ಕರ್ನಾಟಕದವರಾದ ಜ್ಯೋತಿ ರೈ, ತೆಲುಗು ಕಿರುತೆರೆಯಲ್ಲಿ ಯಶಸ್ಸು ಕಂಡ ನಂತರ ಈಗ ಸಿನಿಮಾ ರಂಗದಲ್ಲೂ ಸಕ್ರಿಯರಾಗಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿಯೂ ಹಲವು ಏರಿಳಿತಗಳಾಗಿವೆ. ಮೊದಲ ಮದುವೆಯಿಂದ ವಿಚ್ಛೇದನ ಪಡೆದ ನಂತರ, ತೆಲುಗು ಚಿತ್ರರಂಗದ ನಿರ್ದೇಶಕ ಪೂರ್ವಜ್ ಅವರನ್ನು ಎರಡನೇ ವಿವಾಹವಾಗಿದ್ದಾರೆ. ಇದೀಗ ಅವರಿಗೆ ಕೈತುಂಬಾ ಸಿನಿಮಾಗಳಿವೆ ಎನ್ನಲಾಗುತ್ತಿದೆ.
66
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್
ಜ್ಯೋತಿ ರೈ ಅವರು ತಮ್ಮ ಸುಂದರ ಫೋಟೋಗಳನ್ನು ಹಾಗೂ ಸಿನಿಮಾಗಳ ಅಪ್‌ಡೇಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಾ ಅಭಿಮಾನಿಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. 'ಥಿಂಕ್ ಸಿನಿಮಾ' (Think Cinema) ಅಧಿಕೃತ ಪೇಜ್‌ನಲ್ಲಿ ಸಿನಿಮಾದ ಕುರಿತಾದ ವಿಶೇಷ ಮಾಹಿತಿ, ತೆರೆಮರೆಯ ದೃಶ್ಯಗಳು ಲಭ್ಯವಿರಲಿದೆ ಎಂದು ಅವರು ತಿಳಿಸಿದ್ದಾರೆ.
ಸಿನಿಮಾ ಬಿಡುಗಡೆಗೂ ಮುನ್ನವೇ ನಟಿಯ ಆರೋಗ್ಯದ ಬಗ್ಗೆ ಸುದ್ದಿ ಹರಡಿರುವುದು ಕೊಂಚ ಆತಂಕ ಮೂಡಿಸಿದೆ. ಆದರೂ, ಅವರು ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಭರವಸೆ ನೀಡಿರುವುದರಿಂದ, ಅಭಿಮಾನಿಗಳು ಅದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.