Manasa Manohar: ಮಗು ಜೊತೆ ತವರಿನಿಂದ ಬಂದ ಬಾಣಂತಿ ಮಾನಸ ಮನೋಹರ್’ಗೆ ಅತ್ತೆ-ಮಾವನಿಂದ ಅದ್ಧೂರಿ ಸ್ವಾಗತ

Published : Sep 24, 2026, 12:47 PM IST

ಲಕ್ಷ್ಮೀ ನಿವಾಸ ನಟಿ ಮಾನಸ ಮನೋಹರ್ ಅವರು ಕೆಲವು ತಿಂಗಳ ಹಿಂದೆ ತಾಯಿಯಾಗಿದ್ದು, ಇದೀಗ ತಾಯಿ ಮನೆಯಿಂದ ಬಾಣಂತನ ಮುಗಿಸಿ, ವಾಪಾಸ್ ಆಗುತ್ತಿರುವ ನಟಿಗೆ ಅತ್ತೆ ಮನೆಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದ್ದು, ನಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
17
ನಟಿ ಮಾನಸ ಮನೋಹರ್

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಗಮನ ಸೆಳೆದ ನಟಿ ಮಾನಸ ಮನೋಹರ್ ಮೇ ತಿಂಗಳಲ್ಲಿ ಗಂಡು ಮಗುವಿಗೆ ತಾಯಿಯಾಗಿದ್ದರು. ಇತ್ತೀಚೆಗೆ ಮಗುವಿನ ನಾಮಕರಣ ಸಮಾರಂಭವನ್ನು ಸಹ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದರು ಮಾನಸ ಮನೋಹರ್.

27
ಅತ್ತೆ ಮನೆಯಲ್ಲಿ ಭರ್ಜರಿ ಸ್ವಾಗತ

ಮಗುವಾದ ಬಳಿಕ ಬಾಣಂತವನ್ನು ತವರು ಮನೆಯಲ್ಲಿ ಮಾಡಿಕೊಂಡಿದ್ದ ನಟಿ, ಇದೀಗ ಬಾಣಂತನ ಮುಗಿಸಿ ಅತ್ತೆ ಮನೆಗೆ ವಾಪಾಸ್ ಆಗಿದ್ದು, ಮಗುವಿನ ಜೊತೆ ಮನೆಗೆ ಹಿಂದಿರುಗಿರುವ ನಟಿಯನ್ನು ಅತ್ತೆ ಮತ್ತು ಮಾವ ಅದ್ದೂರಿಯಾಗಿ ಸ್ವಾಗತಿಸಿದ್ದು, ಈ ಸಂಭ್ರಮದ ವಿಡೀಯೋ, ಫೋಟೊಗಳನ್ನು ನಟಿ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ.

37
ತಮಟೆ ಸದ್ದಿನ ಜೊತೆ ಮೊಮ್ಮಗನಿಗೆ ಸ್ವಾಗತ

ಮೊಮ್ಮಗನನ್ನು ಮನೆಗೆ ಸ್ವಾಗತಿಸಲು ಮಾನಸ ಅತ್ತೆ ಮಾವ, ತಮಟೆ ಹೊಡೆಸಿದ್ದು, ಮೊಮ್ಮಗ ಇವತ್ತು ಮೊದಲ ಬಾರಿ ಬರುವಾಗ ಎಷ್ಟೊಂದು ಖುಷೀಯಾಗಿತ್ತೋ, ಅವನು ಯಾವಾಗ್ಲೂ ಹೀಗೇ ಖುಷಿಯಾಗಿರಬೇಕು, ನಮ್ಮ ಸೊಸೆ ಮತ್ತು ಮೊಮ್ಮಗ ಮತ್ತೆ ನಮ್ಮ ಮನೆಗೆ ಬಂದಿದ್ದು, ತುಂಬಾನೆ ಸಂತೋಷವಾಗಿದೆ ಎಂದಿದ್ದಾರೆ.

47
ಮಾನಸ ಮನೋಹರ್ ಭಾವುಕ

ಸೋಶಿಯಲ್ ಮೀಡಿಯಾದಲ್ಲಿ ವಿಡೀಯೋ ಶೇರ್ ಮಾಡಿಕೊಂಡಿರುವ ಮಾನಸ ‘ನಾನು ಮತ್ತು ನನ್ನ ಮುದ್ದಿನ ಪುಟ್ಟ 'Bee' (ಬೀ) ಮನೆಗೆ ಮರಳಿದಾಗ ನಮಗೆ ಹೀಗೆ ಸ್ವಾಗತ ಸಿಕ್ಕಿತು. ನಾನು ಜಗತ್ತಿನ ಅತ್ಯುತ್ತಮ ಕುಟುಂಬಗಳ ಭಾಗವಾಗಿರುವ ಭಾಗ್ಯವನ್ನು ಪಡೆದಿದ್ದೇನೆ: ನಾನು ಹುಟ್ಟಿದ ಕುಟುಂಬ ಮತ್ತು ಈಗ ನಾನು ಸೇರಿರುವ ಕುಟುಂಬ.

57
ಮಗ ಆ ದೇವರು ಕೊಟ್ಟ ದೊಡ್ಡ ಉಡುಗೊರೆ

ಹಾಗೆಯೇ 'Bee' ನಮ್ಮೆಲ್ಲರಿಗೂ ದೇವರು ನೀಡಿದ ಒಂದು ವಿಶೇಷ ಉಡುಗೊರೆ; ಹುಟ್ಟಿದ ಕ್ಷಣದಿಂದಲೇ ಇಷ್ಟೊಂದು ಪ್ರೀತಿ-ಆದರಗಳನ್ನು ಪಡೆಯುತ್ತಿರುವ ಅವನು ನಿಜಕ್ಕೂ ಅದೃಷ್ಟಶಾಲಿ. ಅವನು ನನ್ನಮ್ಮನ ಪಾಲಿಗೆ ಇಡೀ ಪ್ರಪಂಚವೇ ಆಗಿದ್ದಾನೆ ಮತ್ತು ನನ್ನ ಅತ್ತೆ-ಮಾವಂದಿರ ಪಾಲಿಗೆ ಕಿರೀಟದ ರತ್ನದಂತಿದ್ದಾನೆ… ಅವನೊಬ್ಬ ನಿಜಕ್ಕೂ ಅದೃಷ್ಟವಂತ ಜೀವಿ! ಎಂದಿದ್ದಾರೆ.

67
ಅತ್ಯುತ್ತಮವಾದುದನ್ನು ಪಡೆದ ನಾವೇ ಧನ್ಯ

ಅಲ್ಲದೆ, ಈ ಜಗತ್ತೇ ಕಂಡ ಅತ್ಯುತ್ತಮ ಮಗುವೂ ಹೌದು; ಒಬ್ಬ ತಾಯಿಯಾಗಿ ನಾನಿದನ್ನು ಹೆಮ್ಮೆಯಿಂದ ಹೇಳಬಲ್ಲೆ… ನನ್ನ ಮಗನನ್ನು ವರ್ಣಿಸಲು ಪದಗಳೇ ಸಾಲದು; ಪ್ರೀತಮ್ ಮತ್ತು ನಾನು ಪ್ರತಿಯೊಂದು ರೀತಿಯಲ್ಲೂ ಅತ್ಯುತ್ತಮವಾದದ್ದನ್ನು ಪಡೆದು ಧನ್ಯರಾಗಿದ್ದೇವೆ ಎಂದು ತಮ್ಮ ತಾಯ್ತನದ ಸಂಭ್ರಮವನ್ನು ಬರಹಗಳಲ್ಲಿ ವ್ಯಕ್ತಪಡಿಸಿದ್ದಾರೆ ನಟಿ.

77
ನಟಿ ಅಂಜಲಿ ಸುಧಾಕರ್ ಭಾಗಿ

ಮಾನಸ ಮನೋಹರ್ ಜೊತೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಅತ್ತೆಯಾಗಿ ನಟಿಸಿದ್ದ ನಟಿ ಅಂಜಲಿ ಸುಧಾಕರ್ ಕೂಡ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನಟಿ ಶುಭಾಶಯ ತಿಳಿಸಿದ್ದಾರೆ. 2024ರ ನವಂಬರ್ ತಿಂಗಳಲ್ಲಿ ಮಾನಸ ಮನೋಹರ್ ಬ್ಯುಸಿನೆಸ್ ಮ್ಯಾನ್ ಆಗಿರುವ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ಅವರ ಎರಡನೇ ವಿವಾಹವಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories