ಗಿಣಿರಾಮ ಹಾಗೂ ನಿನಗಾಗಿ ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ನಟ ರಿತ್ವಿಕ್ ಮಠದ್ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದು, ಆ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆ ನಟ ಗಿಣಿರಾಮ ಹಾಗೂ ನಿನಗಾಗಿ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿ ಕನ್ನಡಿಗರ ಮನಸನ್ನು ಗೆದ್ದಿದ್ದ ನಟ ರಿತ್ವಿಕ್ ಮಠದ್ ಇದೀಗ ತಂದೆಯಾಗಿರುವ ಸಂಭ್ರಮದಲ್ಲಿದ್ದಾರೆ.
26
ರಿತ್ವಿಕ್ ಮಠದ್ ಮತ್ತು ಸುಮನ್ ದಂಪತಿಗಳು ಸ್ವಾತಂತ್ರ್ಯ ದಿನಾಚರಣೆ- ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತದಂದು ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಸುಮನ್ ಅವರು ರಿತ್ವಿಕ್ ಮಗುವನ್ನು ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
36
ರಿತ್ವಿಕ್ ಮಗುವನ್ನು ಕೈಯಲ್ಲಿ ಹಿಡಿದು ನಗುತ್ತಿದ್ದರೆ, ಫೋಟೊ ಕ್ಲಿಕ್ ಮಾಡಿರುವ ಸುಮನ್ Daddy’s little princess is here ಎಂದು ಬರೆದುಕೊಂಡಿದ್ದಾರೆ. ಈ ಜೋಡಿಗೆ ಸೆಲೆಬ್ರಿಟಿಗಳು, ಕನ್ನಡ ಕಿರುತೆರೆ ನಟ ನಟಿಯರು, ಅಭಿಮಾನಿಗಳು ಶುಭ ಕೋರಿದ್ದಾರೆ.
ಇತ್ತೀಚೆಗಷ್ಟೇ ನಟ ರಿತ್ವಿಕ್ ಮಠದ್ ತಮ್ಮ ಪತ್ನಿ ಸುಮನ್ ಅವರಿಗೆ ಅದ್ಧೂರಿಯಾಗಿ ಸೀಮಂತ ಮಾಡಿಸಿದ್ದರು. ಸೀಮಂತ ಕಾರ್ಯಕ್ರಮದಲ್ಲಿ ನಿನಗಾಗಿ ಸೀರಿಯಲ್ ಕಲಾವಿದರು ಆಗಮಿಸಿ ಶುಭಾಶಯ ಕೋರಿದ್ದರು.
56
ನಿನಗಾಗಿ ತಾರೆಯರಾದ ದಿವ್ಯ ಉರುಡುಗ, ಬಾಲ ನಟಿ ಸಿರಿ ಸಿಂಚನ ಕುಟುಂಬ, ಸುಮೋಕ್ಷ ರಾಯನ್, ರೋಹಿ ಕ್ರಿಶ್, ಬಾಲ ಪಾತ್ರ ಮಾಡ್ತಿರೋ ನಟ, ಸೇರಿ ಸೀರಿಯಲ್ ನ ಹಲವು ನಟ-ನಟಿಯರು ಆಗಮಿಸಿದ್ದರು.
66
ರಿತ್ವಿಕ್ ಮಠದ್ ಸದ್ಯ ನಿನಗಾಗಿ ಧಾರಾವಾಹಿಯಲ್ಲಿ ಜೀವಾ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ನಾಯಕಿ ರಚನಾ ಆಗಿ ನಟಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಜೀವಾ ಮೊದಲಿನ ಪತ್ನಿ ಮಾಧುರಿ ಕಥೆ ನಡೆಯುತ್ತಿದೆ. ಸಖತ್ ಇಂಟ್ರೆಸ್ಟಿಂಗ್ ಆಗಿ ಕಥೆ ಸಾಗುತ್ತಿದೆ. ಮುಂದೇನಾಗುತ್ತದೆ ಕಾದು ನೋಡಬೇಕು.