ಕೊನೆಗೂ‌‌ ಲಕ್ಷ್ಮೀ ಬರೋ‌ ಮುನ್ಸೂಚನೆ ಸಿಕ್ತು... ಆದ್ರೆ ಪಾತ್ರಧಾರಿಯೇ ಬದಲಾಗಿದ್ದಾರೆ ಅನ್ನೋ ಡೌಟು ವೀಕ್ಷಕರದ್ದು

First Published | Nov 30, 2024, 5:06 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ವಾಪಾಸ್ ಬರೋ ಮುನ್ಸೂಚನೆ ಸಿಕ್ಕಿದೆ. ಆದರೆ ವೀಕ್ಷಕರಿಗೆ ಮಾತ್ರ ಇಷ್ಟು ದಿನ ಕಾಣೆಯಾಗಿದ್ದ ಲಕ್ಷ್ಮೀ ಪಾತ್ರಧಾರಿಯ ಬದಲಾವಣೆಯಾಗಲಿದೆ ಎನ್ನುವ ಸಂಶಯ ವೀಕ್ಷಕರಲ್ಲಿ ಮೂಡಿದೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕಾವೇರಿಯ ಮೋಸದ ಆಟ ಬಯಲಾಗುವಂತೆ ಕಾಣುತ್ತಿಲ್ಲ. ಜೈಲಿಗೆ ಹೋದರೂ, ಮಗನ ಮೇಲೆ ಆಣೆ ಹಾಕಿದರೂ ಸಹ ನಿಜವನ್ನು ಹೇಳುವ ಯೋಚನೆಯೇ ಮಾಡಿಲ್ಲ, ಆಕೆಗೆ ಇರೋದೆಲ್ಲ ಮಗನ ಮುಂದೆ ಯಾವತ್ತಿಗೂ ತಾನು ಕುಗ್ಗಬಾರದು ಅನ್ನೋದು ಮಾತ್ರ. 
 

ಸದ್ಯ ಕೇಸು ಕೋರ್ಟು ಮೆಟ್ಟಿಲೇರಿದ್ದು, ಅಲ್ಲಿ ಕಾವೇರಿಗೆ ಸೋಲಾಗುತ್ತಾ? ಅಥವಾ ಗೆಲುವಾಗುತ್ತಾ? ಅನ್ನೋದನ್ನ ಕಾದು ನೋಡಬೇಕು. ಒಂದು ಕಡೆ ಕಾವೇರಿ ಪರ ವಾದಿಸೋಕೆ ಜನಪ್ರಿಯ ಕ್ರಿಮಿನಲ್ ಲಾಯರ್ ಕೂಡ ಇದ್ದಾರೆ. ಲಾಯರ್ ಮುಂದೆ ಕಾವೇರಿಯ ಸತ್ಯ ಎಲ್ಲವೂ ಬಯಲಾಗಿದೆ. ಈ ಕೇಸು ಗೆದ್ದೆ ಗೆಲ್ಲುವ ಭರವಸೆಯಲ್ಲಿದ್ದಾರೆ ಲಾಯರ್ . 
 

Tap to resize

ಇದೀಗ ಕೋರ್ಟ್ ಆವರಣದಲ್ಲಿ ಸುಪ್ರೀತಾ ಮಗ ಲಕ್ಷ್ಮೀಯನ್ನು ನೋಡಿದ್ದಾನೆ. ಪ್ರೊಮೋದಲ್ಲಿ ತೋರಿಸಿದಂತೆ, ಲಕ್ಷ್ಮಿಯನ್ನು ಹಿಂದಿನಿಂದ ತೋರಿಸಿದ್ದಾರೆ. ಅಂಕಿತ್ ಲಕ್ಷ್ಮೀಯನ್ನು ನೋಡಿ ಆಕೆಯ ಮುಂದೆ ನಿಂತು ಶಾಕ್ ಆದವನ ಹಾಗೆ ವರ್ತಿಸಿದ್ದಾನೆ. ಬಳಿಕ ಇದೇ ವಿಷ್ಯವನ್ನು ವಿಧಿ ಮುಂದೆ ಸಹ ಹೇಳಿದ್ದಾನೆ ಅಂಕಿತ್. 
 

ಹಾಗಿದ್ರೆ ಲಕ್ಷ್ಮೀ ರಾವಣ ದಹನದಲ್ಲಿ ಭಸ್ಮ ಆಗಿಲ್ವಾ? ಹಾಗಾದರೆ ಆಗಿದ್ದೇನು? ಕಥೆಯಲ್ಲಿ ಇನ್ನೇನು ಟ್ವಿಸ್ಟ್ ಕಾದಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಕೀರ್ತಿ ಸತ್ತಿದ್ದಾಳೆ ಎನ್ನುತ್ತಲೇ, ಸದ್ಯ ಕೀರ್ತಿಯ ಎಂಟ್ರಿ ಕೂಡ ಆಗಿದೆ, ಆದರೆ ಕೀರ್ತಿ ಮಾತ್ರ ವಿಚಿತ್ರವಾಗಿ ಆಡುತ್ತಾ, ನನಗೆ ಕೀರ್ತಿ ಆಗಿ ಸಾಕಾಗೋಯ್ತು ಎಂದಿದ್ದಾಳೆ. ಇದರಿಂದಲೂ ವೀಕ್ಷಕರು ಕನ್ ಫ್ಯೂಸ್ ಆಗಿದ್ದಾರೆ. 
 

ಇದೀಗ ಕಥೆಯ ನಾಯಕಿಯೇ ಸೀರಿಯಲ್ ನಿಂದ ಕಾಣೆಯಾಗಿ ವಾರಗಳೇ ಕಳೆದಿದೆ. ಇನ್ನೂ ಪತ್ತೆಯಾಗಿಲ್ಲ. ಏನು ಕಥೆ ಅನ್ನೋದೆ ಗೊತ್ತಿಲ್ಲ. ಇವತ್ತಿನ ಪ್ರೊಮೋ ನೋಡಿದ್ರೆ ಅಂಕಿತ್ ಅತ್ತಿಗೆನ ನೋಡಿದೆ ಎನ್ನುತ್ತಾನೆ. ಅಂದ್ರೆ ಲಕ್ಷ್ಮೀ ಮತ್ತೆ ಎಂಟ್ರಿ ಕೊಡ್ತಿದ್ದಾಳ? ಹಾಗಿದ್ರೆ ಆಕೆ ಇಲ್ಲಿವರೆಗೆ ಯಾಕೆ ಬಂದಿರಲಿಲ್ಲ? ಇಲ್ಲಿವರೆಗೆ ಎಲ್ಲಿದ್ದಳು? ಏನು ಕಥೆ ಅನ್ನೋದು ಜನರಲ್ಲಿ ಮತ್ತಷ್ಟು ಸಂಶಯ ಹುಟ್ಟಿಸಿದೆ. 
 

ಇನ್ನು ಇದನ್ನೆಲ್ಲಾ ನೋಡಿ ಜನರು ಲಕ್ಷ್ಮೀ ವಾಪಾಸ್ ಬರ್ತಾಳೆ ಅಂತ ಖುಷಿ ಪಟ್ರೆ, ಇನ್ನೂ ಕೆಲವರು, ಬಹುಶಃ ಲಕ್ಷ್ಮೀ ಪಾತ್ರಧಾರಿಯ ಬದಲಾವಣೆಯಾಗಿರಬೇಕು, ಅದಕ್ಕೆ ಇಷ್ಟೊಂದು ತಡ ಮಾಡ್ತಿದ್ದಾರೆ ಆಕೆಯನ್ನು ತೋರಿಸೋಕೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಕೀರ್ತಿ ಸತ್ಯ ಹೇಳಲ್ಲ, ಲಕ್ಷ್ಮೀ ವಾಪಸ್ ಬರಲ್ಲ,  ಕಾವೇರಿ ಆಟ ಕೊನೆ ಆಗಲ್ಲ . ಈ ಧಾರವಾಹಿ ಮುಗಿಯಲ್ಲ ಎಂದು ಕಿಡಿ ಕಾರಿದ್ದಾರೆ. 
 

Latest Videos

click me!