ಅದ್ಧೂರಿಯಾಗಿ ನಡೆಯಿತು ಚಂದನಾ- ಪ್ರತ್ಯಕ್ಷ್ ರಿಸೆಪ್ಶನ್ ; ಲೆಹೆಂಗಾದಲ್ಲಿ ಮಿಂಚಿದ ಚಿನ್ನು ಮರಿ

First Published | Nov 30, 2024, 4:22 PM IST

ಅದ್ಧೂರಿಯಾಗಿ ನಡೆಯಿತ್ತು ಚಂದು- ಪ್ರತ್ಯು ರಿಸೆಪ್ಶನ್. ಸಿನಿಮಾ ತಾರೆಯರು ಭಾಗಿ...ಫೋಟೋ ವೈರಲ್.....
 

'ರಾಜಾ ರಾಣಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜರ್ನಿ ಆರಂಭಿಸಿದ ಭರತನಾಟ್ಯ ಡ್ಯಾನ್ಸರ್ ಚಂದನಾ ಅನಂತಕೃಷ್ಣ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಚಂದನಾ ಇದೀಗ ಬಹುಕಾಲದ ಗೆಳೆಯ ಪ್ರತ್ಯಕ್ಷ್ ಕೈ ಹಿಡಿದು ಹೊಸ ಜೀವನ ಆರಂಭಿಸುತ್ತಿದ್ದಾರೆ. 

Tap to resize

ಹಿರಿಯ ನಟಿ ಕಾವ್ಯಾಂಜಲಿ ಮತ್ತು ದಿವಂಗತ ನಟ ಉದಯ್ ಕುಮಾರ್ ಪುತ್ರ ಪ್ರತ್ಯಕ್ಷ್‌ರನ್ನು ಚಂದನಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಈಗ ಗುರು ಹಿರಿಯ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.

ನವೆಂಬರ್ 28ರಂದು ಚಂದನಾ ಮತ್ತು ಪ್ರತ್ಯಕ್ಷ್ ಹಸೆಮಣೆ ಏರಿದ್ದರು. 29ರಂದು ಅದ್ಧೂರಿಯಾಗಿ ಆರತಕ್ಷತೆ ಹಮ್ಮಿಕೊಂಡಿದ್ದು, ಸಿನಿಮಾ ತಾರೆಯರು ಭಾಗಿಯಾಗಿದ್ದರು. 

ಕ್ರೀಂ ಬಣ್ಣದ ಡಿಸೈನರ್ ಲೆಹೆಂಗಾದಲ್ಲಿ ಚಂದನಾ ಮಿಂಚುತ್ತಿದ್ದಾರೆ, ಡಾರ್ಕ್‌ ನೀಲಿ ಬಣ್ಣದ ಸೂಟ್‌ನಲ್ಲಿ ಪ್ರತ್ಯಕ್ಷ್‌ ಕಾಣಿಸಿಕೊಂಡಿದ್ದಾರೆ. ವೇದಿಕೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಲಾಗಿದೆ.

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಜಾನವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಧಾರಾವಾಹಿಯಲ್ಲೂ ಜಾನವಿ ಹೊಸದಾಗಿ ಮದುವೆಯಾಗಿರುವ ಜೋಡಿ. 

Latest Videos

click me!