ಲಕ್ಷ್ಮೀ ಬಾರಮ್ಮ ಚೆಲುವೆಯರ ನ್ಯೂ ಇಯರ್ ಪಾರ್ಟಿ ಹೆಂಗಿತ್ತು ನೋಡಿ

First Published | Jan 3, 2025, 4:45 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಹಾಗೂ ಸುಪ್ರೀತಾ ಪಾತ್ರದಲ್ಲಿ ನಟಿಸುತ್ತಿರುವ ಲಾವಣ್ಯ ಹೀರೇಮಠ್ ಹಾಗೂ ರಜನಿ ಭಿರಾತ್ ಜೊತೆಯಾಗಿ ನ್ಯೂ ಇಯರ್ ಪಾರ್ಟಿ ಮಾಡಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ(Lakshmi Baramma) ಧಾರಾವಾಹಿಯಲ್ಲಿ ವಿಧಿ ಹಾಗೂ ಸುಪ್ರೀತಾ ಪಾತ್ರಧಾರಿ ಬಗ್ಗೆ ನಿಮಗೆ ಗೊತ್ತೆ ಇದೆ ಅಲ್ವಾ? ಸೀರಿಯಲ್ ನಲ್ಲೂ ತುಂಬಾನೆ ಸ್ಟೈಲಿಶ್ ಪಾತ್ರಗಳು ಇವೆರಡು. ನಿಜ ಜೀವನದಲ್ಲೂ ಅಷ್ಟೇ ತುಂಬಾನೇ ಸ್ಟೈಲಿಶ್ ಜೊತೆಗೆ ಇಬ್ಬರೂ ಸ್ನೇಹಿತರೂ ಕೂಡ ಹೌದು. 
 

ವಿಧಿ ಪಾತ್ರದಲ್ಲಿ ನಟಿಸುತ್ತಿರುವ ಲಾವಣ್ಯ ಹೀರೇಮಠ್ (Lavanya Hiremath) ಹಾಗೂ ಸುಪ್ರೀತಾ ಪಾತ್ರಧಾರಿ ನಟಿ ರಜನಿ ಭಿರಾತ್ ಹೆಚ್ಚಾಗಿ ಜೊತೆಯಾಗಿ ರೀಲ್ಸ್ ಮಾಡುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ನ್ಯೂ ಇಯರ್ ಕೂಡ ಜೊತೆಯಾಗಿ ಎಂಜಾಯ್ ಮಾಡಿದ್ದಾರೆ. 
 

Tap to resize

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾವಣ್ಯ ಹೀರೇಮಠ್, ತಮ್ಮ ಪತಿ ಆಕಾಶ್ ಆಚಾರ್ಯ, ರಜನಿ (Rajani Bhirati) ಹಾಗೂ ಅವರ ಪತಿ, ಮತ್ತಿತರ ಸ್ನೇಹಿತರ ಜೊತೆ ಸೇರಿ ಸಖತ್ ಆಗಿ ಪಾರ್ಟಿ ಮಾಡಿದ್ದಾರೆ. ಇವರ ಜೊತೆ ನೀತು ವನಜಾಕ್ಷಿ ಕೂಡ ಇದ್ದರು. ಲಾವಣ್ಯ ಈ ಫೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದಾರೆ. 
 

ಸೀರಿಯಲ್ ನಲ್ಲೂ ಸ್ಟೈಲಿಶ್ ಅವತಾರದಲ್ಲೇ ಕಾಣಿಸಿಕೊಳ್ಳುವ ಲಾವಣ್ಯ ಮತ್ತು ರಜನಿ, ನ್ಯೂ ಇಯರ್ ಪಾರ್ಟಿಯಲ್ಲಿ ಅಷ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇಬ್ಬರು ಜೊತೆಯಾಗಿ ಪೋಸ್ ಕೂಡ ಕೊಟ್ಟಿದ್ದಾರೆ. ಇಬ್ಬರ ಬೋಲ್ಡ್ ಲುಕ್ (bold look) ಸದ್ದು ಮಾಡ್ತಿದೆ. 
 

ರಜನಿಯವರು ಕೆಂಪು ಬಣ್ಣದ ಗ್ಲಿಟರಿಂಗ್ ಶಾರ್ಟ್ ಡ್ರೆಸ್ಸಲ್ಲಿ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರೆ, ಲಾವಣ್ಯ ಹಳದಿ ಬಣ್ಣದ ಶಾರ್ಟ್ ಡ್ರೆಸ್ ಜೊತೆಗೆ, ಬ್ಲ್ಯಾಕ್ ಬಣ್ಣದ ಓವರ್ ಕೋಟ್ ಧರಿಸಿದ್ದಾರೆ. 
 

ಲಾವಣ್ಯ ತಮ್ಮ ಪತಿ ಜೊತೆಗಿನ ಫೋಟೊ, ರಜನಿ ಜೊತೆಗಿನ ಫೋಟೊ ಹಾಗೂ ಡ್ಯಾನ್ಸ್ ಮಾಡುವ ವಿಡೀಯೋ, ಜೊತೆಗೆ ನೀತು ವನಜಾಕ್ಷಿ (Nithu Vanajakshi)ಜೊತೆ ಎಂಜಾಯ್ ಮಾಡುತ್ತಿರುವ ಫೋಟೊ, ಹಾಗೂ ಸ್ನೇಹಿತರೆಲ್ಲಾ ಜೊತೆಯಾಗಿ ತೆಗೆದಿರುವಂತಹ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

Latest Videos

click me!