ತುಳಸಿಗೆ ಸಾಥ್ ಕೊಡಲು ಗ್ಯ್ರಾಂಡ್ ಎಂಟ್ರಿ ಕೊಟ್ಟ ದತ್ತ ತಾತ... ವೀಕ್ಷಕರು ಫುಲ್‌ಖುಶ್

First Published | Jan 3, 2025, 1:13 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ನಿಂದ ಇಷ್ಟು ದಿನ ಮಿಸ್ ಆಗಿದ್ದ ದತ್ತ ತಾತ ಇದೀಗ ಸೀರಿಯಲ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ತುಳಸಿಗೆ ಸಾಥ್ ನೀಡೋಕೆ ಮಾವ ಇರದಿದ್ದರೆ ಹೇಗೆ ಅಲ್ವಾ? 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಶ್ರೀರಸ್ತು ಶುಭಮಸ್ತುವಿನಲ್ಲಿ (Srirastu Shubhamastu), ಸದ್ಯ ಮನೆಯಲ್ಲಿ ಸಂತೋಷ, ನೆಮ್ಮದಿಯಿಂದ ಕೂಡಿದೆ. ಮನೆ ಮಗಳ ಮದುವೆಗೆ ಮನೆಯ ಎಲ್ಲಾ ಸದಸ್ಯರು ಒಂದಾಗಿ ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದಾರೆ. 
 

ಮತ್ತೊಂದೆಡೆ ಶಾರ್ವರಿ ಮಾಡುತ್ತಿರುವ ಪ್ಲ್ಯಾನ್ ಗಳೆಲ್ಲಾ ಉಲ್ಟಾ ಹೊಡೆದು, ಅದು ಆಕೆಗೆ ಮುಳುವಾಗುತ್ತಿದೆ. ತುಳಸಿ ಮಗ ಸಮರ್ಥ್ ನನ್ನು ಕೊಲ್ಲುವ ಪ್ಲ್ಯಾನ್ ಹಾಕಿದ್ದಾಗ, ಅವಿ ಮತ್ತು ಅಭಿ ಇಬ್ಬರೂ ಸೇರಿ ಸಮರ್ಥ್ ಜೊತೆ ನಿಂತು ಹೋರಾಡಿ ರೌಡಿಗಳನ್ನು ಓಡಿಸುವ ಮೂಲಕ, ಅಭಿ, ಅವಿ ಹಾಗೂ ಸಮರ್ಥ್ ಮೂರು ಜನ ಒಂದಾಗಿದ್ದರು. 
 

Tap to resize

ಇನ್ನೊಂದೆಡೆ ತುಳಸಿ ವಿರುದ್ಧ ಅವಿಯನ್ನು ಎತ್ತಿ ಕಟ್ಟುವ ಶಾರ್ವರಿಯ ಆಲೋಚನೆಗಳು ಸಹ ನೀರು ಪಾಲಾದವು. ತನ್ನ ಕಷ್ಟದಲ್ಲಿ ಜೊತೆಯಾಗಿ ನಿಂತು ಸಹಕರಿಸಿದ ತುಳಸಿಯನ್ನು ಅಮ್ಮ ಎಂದು ಅವಿ ಕೂಡ ಒಪ್ಪಿಯಾಗಿದೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಒಂದಾಗಿ ಡಬಲ್ ಸಂತೋಷ ತುಂಬಿದೆ. 
 

ಮನೆಯವರೆಲ್ಲಾ ಒಂದಾಗಿರೋದು ನೋಡಿ ಶಾರ್ವರಿಯ ಮೈ ಉರಿಯುತ್ತಿದೆ. ಹೇಗಾದರು ಮಾಡಿ ಎಲ್ಲರನ್ನೂ ದೂರ ದೂರ ಮಾಡಿ, ಮನೆಯ ನೆಮ್ಮದಿ ಹಾಳು ಮಾಡುವ ಯೋಜನೆ ಹಾಕಿಕೊಂಡಿದ್ದ ಶಾರ್ವರಿಗೆ ಈಗ ಮುಖಭಂಗವಾಗಿ, ಅದನ್ನು ತೋರಿಸಿಕೊಳ್ಳಲಾಗದೆ, ತುಳಸಿಯ ಮುಂದೆ ನಿಂತು ಆಕೆಯ ಎದುರು ತನ್ನ ದರ್ಪ ತೋರಿಸುತ್ತಿದ್ದಾಳೆ ಶಾರ್ವರಿ. 
 

ಶಾರ್ವರಿ (Sharwari)ತುಳಸಿ ಬಳಿ ಬಂದು, ನಿನ್ನನ್ನು ನೀನು ಏನ್ ಅಂದುಕೊಂಡಿದ್ಯಾ? ಈ ಮನೆಯವರನ್ನೆಲ್ಲಾ ನಿನ್ನ ಎದುರು ಎತ್ತಿ ಕಟ್ಲಾ ಅಂತ ಸವಾಲು ಹಾಕ್ತಾಳೆ. ಅದಕ್ಕೆ ತುಳಸಿ, ಭಯ ಅನ್ನೋದು ಬಾಯಲ್ಲಿ ಏನೇನೋ ಹೇಳಿಸುತ್ತೆ ಎನ್ನುತ್ತಾಳೆ. ಇದರಿಂದ ಕೋಪಗೊಂಡ ಶಾರ್ವರಿ ಈ ಮನೆಯಲ್ಲಿ ಎಲ್ಲರೂ ನನ್ನ ಜೊತೆ ನಿಂತಾಗ, ನಿನ್ನ ಜೊತೆ ಯಾರೂ ಇರಲ್ಲ ಎನ್ನುತ್ತಾಳೆ. 
 

ಶಾರ್ವರಿ ಹೀಗೆ ಹೇಳೋವಷ್ಟರಲ್ಲಿ ದತ್ತ ತಾತನ ಗ್ರ್ಯಾಂಡ್ ಎಂಟ್ರಿಯಾಗುತ್ತೆ (grand entry). ತುಳಸಿ ಜೊತೆ ನಾನು ಯಾವಾಗ್ಲೂ ಇರ್ತಿನಿ ಎನ್ನುತ್ತಾ ದತ್ತನ ಎಂಟ್ರಿ ಕೊಡುತ್ತಾರೆ. ಮಾವನನ್ನು ನೋಡಿ ಸೊಸೆ ತುಳಸಿ ಖುಷಿ ಪಟ್ಟರೆ, ದಿಡೀರ್ ಆಗಿ ಎಂಟ್ರಿ ಕೊಟ್ಟ ದತ್ತನನ್ನು ನೋಡಿ ಶಾರ್ವರಿ ಶಾಕ್ ಆಗ್ತಾಳೆ. 
 

ಅಂದ ಹಾಗೆ ದತ್ತ ತಾತನ ಗ್ರ್ಯಾಂಡ್ ಎಂಟ್ರಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಬರೋಬ್ಬರಿ 3 ತಿಂಗಳ ಬಳಿಕ ದತ್ತ ತಾತನ ಎಂಟ್ರಿಯಾಗಿದೆ. ಸೀರಿಯಲ್ ನಲ್ಲಿ ತೀರ್ಥಯಾತ್ರೆಗೆ ಹೋಗೋದಾಗಿ ಹೇಳಿ ಹೋಗಿದ್ದ ದತ್ತಣ್ಣ, ನಿಜವಾಗಿಯೂ ಹೋಗಿದ್ದು ಅಮೇರಿಕಾಗೆ. 
 

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದತ್ತಣ್ಣ ಖ್ಯಾತಿಯ ವೆಂಕಟ್ ರಾವ್ (Venkat Rao), ತಮ್ಮ ಮಗನ ಮನೆಯಲ್ಲಿ ಸ್ವಲ್ಪ ಸಮಯ ಕಾಲ ಕಳೆಯೋದಕ್ಕಾಗಿ ಯುಎಸ್ ಗೆ ತಮ್ಮ ಪತ್ನಿಯೊಂದಿಗೆ ತೆರಳಿದ್ದರು. ಇದೀಗ ಅಲ್ಲಿಂದ ಮರಳಿ ಬಂದಿದ್ದು, ಮತ್ತೆ ಸೀರಿಯಲ್ ಗೆ ಕಂ ಬ್ಯಾಕ್ ಮಾಡಿದ್ದಾರೆ. ಇವತ್ತಿನ ಪ್ರೊಮೋದಲ್ಲಿ ದತ್ತನ ಗ್ಯಾಂಡ್ ಎಂಟ್ರಿ ನೋಡಿ, ಜನ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು, ವೆಲಕಂ ತಾತ ಎಂದಿದ್ದಾರೆ. 
 

Latest Videos

click me!