ತೆಲುಗು ಸೀರಿಯಲ್‌ಗೆ ಲಕ್ಷ್ಮೀ ಬಾರಮ್ಮ ನಟಿ ಎಂಟ್ರಿ, ಕನ್ನಡ ಮರಿಬೇಡಿ ಎಂದ ಫ್ಯಾನ್ಸ್!

Published : May 22, 2024, 11:41 AM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಭೂಮಿಕಾ ರಮೇಶ್ ಇದೀಗ ತೆಲುಗು ಸೀರಿಯಲ್ ನಲ್ಲಿ ನಟಿಸುತ್ತಿದ್ದು, ಕನ್ನಡ ಮರಿಬೇಡಿ ಎಂದು ಹೇಳ್ತಿದ್ದಾರೆ ವೀಕ್ಷಕರು.   

PREV
17
ತೆಲುಗು ಸೀರಿಯಲ್‌ಗೆ ಲಕ್ಷ್ಮೀ ಬಾರಮ್ಮ ನಟಿ ಎಂಟ್ರಿ, ಕನ್ನಡ ಮರಿಬೇಡಿ ಎಂದ ಫ್ಯಾನ್ಸ್!

ಕನ್ನಡದ ನಟ -ನಟಿಯರು ತೆಲುಗು ಅಥವಾ ತಮಿಳು, ಮಲಯಾಳಂ ಕಿರುತೆರೆಯಲ್ಲಿ ನಟಿಸೋದು ಹೊಸದೇನಲ್ಲ, ಕಳೆದ ಹಲವು ವರ್ಷಗಳಿಂದ ಕನ್ನಡದ ತಾರೆಯರು ಪರಭಾಷೆಯ ಕಿರುತೆರೆಯಲ್ಲಿ (smalscreen) ಮಿಂಚುತ್ತಿದ್ದಾರೆ, ಕೆಲವರು ಅಲ್ಲೇ ಸೆಟಲ್ ಕೂಡ ಆಗಿದ್ದಾರೆ. 
 

27

ನಿಶಾ ರವಿಕೃಷ್ಣನ್ (Nisha Ravikrishnan), ರಶ್ಮಿ ಪ್ರಭಾಕರ್, ಚಂದನ್ ಕುಮಾರ್, ರಂಜನಿ ರಾಘವನ್, ವೈಷ್ಣವಿ, ಯಶವಂತ್ ಗೌಡ, ರಘು, ಶೋಭಾ ಶೆಟ್ಟಿ ಇವರೆಲ್ಲರೂ ಕನ್ನಡದ ನಟರೇ, ಸದ್ಯ ಅನ್ಯ ದಕ್ಷಿಣ ಭಾರತೀಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇದೇ ಗುಂಪಿಗೆ ಸೇರಲಿದ್ದಾರೆ, ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ. 
 

37

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ನಾಯಕಿ ಭೂಮಿಕಾ ರಮೇಶ್ (Bhoomika Ramesh) ಇದೀಗ ತೆಲುಗು ಕಿರುತೆರೆಯಲ್ಲೂ ಕಮಾಲ್ ತೋರಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಸೀರಿಯಲ್ ಪ್ರೊಮೋ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. 
 

47

ಬಾಲ ಕಲಾವಿದೆಯಾಗಿ ತೆಲುಗು ಡ್ಯಾನ್ಸಿಂಗ್ ರಿಯಾಲಿಟಿ ಶೋ ಮೂಲಕ ಮಿಂಚಿದ್ದ, ಭೂಮಿಕಾ, ಇದೀಗ ಹೊಸದಾಗಿ ಬರುತ್ತಿರುವ 'ಮೇಘ ಸಂದೇಶಂ' ಎನ್ನುವ ತೆಲುಗು ಧಾರಾವಾಹಿಯಲ್ಲಿ ನಾಯಕಿ 'ಭೂಮಿ' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಾಯಕ ಕೂಡ ಕನ್ನಡದವರೇ ಆಗಿರೋದು ವಿಶೇಷ. ಅವರು ಬೇರಾರೂ ಅಲ್ಲ ನನ್ನರಸಿ ರಾಧೆ , ತ್ರಿಪುರ ಸುಂದರಿ ಧಾರಾವಾಹಿಗಳಲ್ಲಿನ ಮಿಂಚಿದ್ದ ಅಭಿನವ್ ವಿಶ್ವನಾಥನ್ (Abhinav Vishwanathan).
 

57

ಸದ್ಯ ಸೀರಿಯಲ್ ಪ್ರೋಮೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹುಟ್ಟಿದಾಗಲೇ ಕಸದ ಬುಟ್ಟಿ ಸೇರುವ ಮಗು ಭೂಮಿಗೆ ತಂದೆ-ತಾಯಿಯ ಪ್ರೀತಿಯೇ ಇಲ್ಲ. ಇನ್ಯಾವುದೋ ಬಡ ಕುಟುಂಬದಲ್ಲಿ ಬೆಳೆಯುತ್ತಾಳೆ. ಅತ್ತ ಆಗರ್ಭ ಶ್ರೀಮಂತ ಗಗನ್, ಅವನೂ ಪ್ರೀತಿ ವಂಚಿತನೇ. ಇಬ್ಬರನ್ನೂ ವಿಧಿ ಹೇಗೆ ಒಟ್ಟು ಸೇರಿಸುತ್ತೆ ಅನ್ನೋದು ಸೀರಿಯಲ್ ಕಥೆ. ಇದನ್ನು ಪ್ರೋಮೋ ಚೆನ್ನಾಗಿಯೇ ಕಟ್ಟಿಕೊಟ್ಟಿದೆ. 
 

67

ಕಲರ್ಸ್ ಕನ್ನಡ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ಪ್ರಸಾರವಾಗುತ್ತಿದ್ದು, ಒಳ್ಳೆಯ TRPಯೂ ಇದೆ. ಲಕ್ಷ್ಮೀ ಮತ್ತು ವೈಷ್ಣವ್ ಮಧ್ಯೆ ಪ್ರೀತಿ ಚಿಗುರೊಡೆಯುವ ಕಾಲವೂ ಬಂದಿದೆ. ಇದೆಲ್ಲದರ ಮಧ್ಯೆ ಲಕ್ಷ್ಮೀ ತೆಲುಗು ಸೀರಿಯಲ್ ನಲ್ಲಿ ನಟಿಸುತ್ತಿರುವುದು ನೋಡಿದ್ರೆ, ಇವರು ಲಕ್ಷ್ಮೀ ಬಾರಮ ಸೀರಿಯಲ್ ಬಿಡಲಿದ್ದಾರೆಯೆ? ಎರಡೂ ಕಡೆ ಮ್ಯಾನೇಜ್ ಮಾಡುವರೇ? ಎನ್ನುವ ಪ್ರಶ್ನೆ ಮೂಡಿದೆ. 
 

77

ಇನ್ನು ತೆಲುಗು ಸೀರಿಯಲ್ ನಲ್ಲಿ ಭೂಮಿಕಾ ಅವರನ್ನು ನೋಡಿದ ಜನರು ಕೂಡ ಬೇರೆ ಬೇರೆ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ನಿಮ್ಮ ಮೊದಲನೇ ಸೀರಿಯಲ್, ಕನ್ನಡ ಯಾವತ್ತೂ ಮರಿಬೇಡಿ ಅಕ್ಕ ಎಂದರೆ, ಇನ್ನು ಕೆಲವರು ಕನ್ನಡ ಇಂಡಸ್ಟ್ರಿ ಮರಿಬೇಡಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಬಿಡಬೇಡಿ ಎಂದಿದ್ದಾರೆ. ಇನ್ನು ಹೆಚ್ಚಿನ ಜನರು ಎಲ್ಲಾ ತೆಲುಗು ಸೀರಿಯಲ್ ಗಳಲ್ಲಿ ಕನ್ನಡಿಗರದ್ದೆ ಹವಾ ಎಂದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories