ಬಿಗ್‌ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ಕನಸಿನ ಮನೆ ಹೇಗಿದೆ ಗೊತ್ತಾ? ಫೋಟೋಗಳಲ್ಲಿ ನೋಡಿ

First Published | May 21, 2024, 3:25 PM IST

ಕನ್ನಡತಿ, ಕಿರುತರೆ ನಟಿ ಬಿಗ್‌ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ಕನಸಿನ ಮನೆಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ತಮ್ಮ ಸುಂದರ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಗೃಹಪ್ರವೇಶದ ಫೋಟೋಗಳನ್ನುಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶೋಭಾ ಶೆಟ್ಟಿ ಕನಸು ನನಸು ಆಗಿದೆ ಎಂದು ಬರೆದುಕೊಂಡಿದ್ದಾರೆ. ಹೊಸ ಜೀವನ, ಹೊಸ ಮನೆ ಮತ್ತು ಹೊಸ ಆರಂಭ ಎಂದು ಶೋಭಾ ಶೆಟ್ಟಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. 

ತೆಲಗು ಬಿಗ್‌ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ತೆಲಗು ರಿಯಾಲಿಟಿ ಶೋ ಆಗಿದ್ದರೂ ಸಿಕ್ಕ ಸಮಯದಲ್ಲಿ ಕನ್ನಡ ಮಾತನಾಡೋದನ್ನು ಶೋಭಾ ಶೆಟ್ಟಿ ಮರೆಯುತ್ತಿರಲಿಲ್ಲ.  ಬಿಗ್‌ಬಾಸ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೋಭಾ ಶೆಟ್ಟಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

Tap to resize

ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಶೋಭಾ ಶೆಟ್ಟಿ, ಹೊಸ ಹೊಸ ಫೋಟೋಗಳನ್ನುಅಪ್ಲೋಡ್ ಮಾಡಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಆರು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಶೋಭಾ ಶೆಟ್ಟಿ ಹೊಂದಿದ್ದಾರೆ.

ಸುಮನ್ ಟಿವಿಯಲ್ಲಿ ಕಾಫಿ ವಿಥ್ ಶೋಭಾ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ವಿಶೇಷ ಸಂದರ್ಶನ ನಡೆಸಲಾಗುತ್ತದೆ. ಈ ಶೋ ಸಹ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಧಾರಾವಾಹಿಯ ಮೋನಿಯಾ ಹೆಸರಿನಿಂದಲೇ ತೆಲಗು ಪ್ರದೇಶದಲ್ಲಿ ಫೇಮಸ್ ಆಗಿದ್ದಾರೆ.

ಜನವರಿಯಲ್ಲಿ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ ಜೊತೆ ಶೋಭಾ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಾನೇ ಅವರಿಗೆ ಮೊದಲು ಪ್ರಪೋಸ್ ಮಾಡಿದ್ದೆ ಎಂದು ಶೋಭಾ ಶೆಟ್ಟಿ ಹೇಳಿಕೊಂಡಿದ್ದಾರೆ. ಇದೀಗ ಹೊಸ ಮನೆಯ ಖುಷಿಯಲ್ಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿಯ ತನು ಪಾತ್ರದಲ್ಲಿ ಶೋಭಾ ಶೆಟ್ಟಿ ನಟಿಸಿದ್ದರು. ನಂತರ ರುಕ್ಕು ಎಂಬ ಧಾರಾವಾಹಿಯಲ್ಲಿಯೂ ಶೋಭಾ ನಟಿಸಿದ್ದರು. ಕೆಲವೇ ದಿನಗಳಲ್ಲಿ ರುಕ್ಕು ಧಾರಾವಾಹಿಯಿಂದ ಹೊರ ಬಂದ ಶೋಭಾ ಶೆಟ್ಟಿ ಅವರನ್ನು ತೆಲಗು ಕಿರುತರೆ ಕೈ ಬೀಸಿ ಕರೆದಿತ್ತು. ಅಗ್ನಿಸಾಕ್ಷಿ ಧಾರಾವಾಗಿ 6 ವರ್ಷ ಪ್ರಸಾರವಾಗಿತ್ತು.

ತೆಲುಗಿನ 'ಕಾರ್ತಿಕ ದೀಪಂ' ಸೀರಿಯಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ಶೋಭಾ ಶೆಟ್ಟಿ ಅವರನ್ನು ಬಿಗ್‌ಬಾಸ್‌ಗೆ ಆಯ್ಕೆ ಮಾಡಲಾಗಿತ್ತು. ಬಿಗ್‌ಬಾಸ್‌ನಲ್ಲಿ ತಮ್ಮ ಡೇರಿಂಗ್‌ನಿಂದಲೇ ಇಡೀ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು.

Latest Videos

click me!