ಅಮೃತಧಾರೆಯ ಮಾನ್ಯ ಪುತ್ರನಿಗೆ ಬ್ಲಡ್ ಕ್ಯಾನ್ಸರ್… ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಶಾಂಭವಿ ವೆಂಕಟೇಶ್

First Published | Nov 8, 2024, 9:44 AM IST

ಅಮೃತಧಾರೆ ಸೀರಿಯಲ್ ನಲ್ಲಿ ಮಾನ್ಯ ಪಾತ್ರದಲ್ಲಿ ಮಿಂಚಿದ್ದ ನಟಿ ಶಾಂಭವಿ ವೆಂಕಟೇಶ್ ಅವರ ಪುಟಾಣಿ ಕಂದನಿಗೆ ಬ್ಲಡ್ ಕ್ಯಾನ್ಸರ್ ಆಗಿದ್ದು, ನಟಿ ಈ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 
 

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡ ನಟಿ ಶಾಂಭವಿ ವೆಂಕಟೇಶ್ (Shambhawi Venkatesh). ಮದುವೆಯಾಗಿ ಮಕ್ಕಳಾದ ಮೇಲೆ ನಟನೆಯಿಂದ ಕೊಂಚ ದೂರ ಉಳಿದಿದ್ದರು. ಆಗೊಮ್ಮೆ, ಈಗೊಮ್ಮೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. 
 

ನಟಿ ಶಾಂಭವಿ ಇತ್ತೀಚೆಗೆ ನಟಿಸಿದ ಧಾರಾವಾಹಿ ಅಂದ್ರೆ ಅದು ಅಮೃತಧಾರೆ. ಅಮೃತಧಾರೆಯಲ್ಲಿ ಗೌತಮ್ ದಿವಾನ್ ರನ್ನು ಲವ್ ಮಾಡುವ ಮಾನ್ಯ ಪಾತ್ರದ ಮೂಲಕ ಕಾಣಿಸಿಕೊಂಡಿದ್ದರು. ಧಾರಾವಾಹಿಯಲ್ಲಿ ಆ ಪಾತ್ರವನ್ನು ಈಗಾಗಲೇ ಅಂತ್ಯ ಮಾಡಲಾಗಿದೆ.   
 

Tap to resize

ಸದ್ಯ ಗಂಡ ಹಾಗೂ ಇಬ್ಬರು ಅವಳಿ ಮಕ್ಕಳ ಜೊತೆಗೆ ಮುದ್ದಾದ ಸಂಸಾರ ಸಾಗಿಸುತ್ತಿದ್ದ ಶಾಂಭವಿ ಅವರ ಜೀವನದಲ್ಲಿ ಭಾರಿ ದೊಡ್ಡ ಆಘಾತ ಎದುರಾಗಿದೆ. ನಟಿ ಶಾಂಭವಿ ಅವರಿಗೆ ದುರ್ಗಾ ಮತ್ತು ದುಷ್ಯಂತ್ ಎನ್ನುವ ಎರಡು ಪುಟ್ಟ ಕಂದಮ್ಮಗಳಿವೆ. ಇದೀಗ ಮಗ ದುಷ್ಯಂತ್ ಗೆ ಮಾರಣಾಂತಿಕ ಕಾಯಿಲೆ ಬಂದಿರುವ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಭಾವುಕ ಪೋಸ್ಟ್ ಹಂಚಿಕೊಂಡಿರುವ ನಟಿ ಶಾಂಭವಿ ‘ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ "3rd ಸ್ಟೇಜ್ ಬ್ಲಡ್ ಕ್ಯಾನ್ಸರ್" (3rd stage blood cancer) ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ "ಇದು ಕ್ಯಾನ್ಸರ್ ಆಗಿರದೆ ಇರಲಿ" ಅಂತಾ ಪ್ರಾರ್ಥಿಸ್ತಾ ಇದ್ವಿ. 
 

ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% ಕ್ಯೂರೇಬಲ್ ಅಂತಾ ಡಾಕ್ಟರ್ ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ.
 

 "ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ" ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ. ಕೀಮೋಥೆರಪಿಯ (chemotherapy)  ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ ಥೆರಪಿಯ ಮೊದಲ ದಿನದಂದು ಕ್ಲಿಕ್ಕಿಸಿದ ಶಾಟ್ಸ್ ಇದು ಎಂದು ಮಗನ ಜೊತೆಗಿನ ಫೋಟೊ ಹಾಗೂ ವಿಡಿಯೋ ಶೇರ್ ಮಾಡಿದ್ದಾರೆ. 

ಮೂರು ವರ್ಷದ ಪುಟ್ಟ ಕಂದನಿಗೆ ಬ್ಲಡ್ ಕ್ಯಾನ್ಸರ್ ಬಂದಿರೋದು ನೋಡಿ ಅಭಿಮಾನಿಗಳು ಸಹ ಭಾವುಕರಾಗಿದ್ದು, ಆದಷ್ಟು ಬೇಗ ಪುಟ್ಟ ಕಂದಮ್ಮ ಆರೋಗ್ಯವಾಗಿ ಬರಲಿ ಎಂದು ಹಾರೈಸಿದ್ದಾರೆ. ಮಗುವಿನ ನಗು ಯಾವಾಗ್ಲೂ ಮಾಸದೇ ಇರಲಿ, ಈ ನಗು ಮುಖದಲ್ಲಿ ಎಂದಿಗೂ ಇರಲಿ ಎಂದು ಹರಸಿದ್ದಾರೆ. 
 

Latest Videos

click me!