ನಮ್ಮನೆ ಯುವರಾಣಿಯ ಅಹಲ್ಯ ನಾಯಕಿಯಾಗಿ ಹೊಸ ಸೀರಿಯಲ್‌ ಮೂಲಕ ಕಂ ಬ್ಯಾಕ್

ನಮ್ಮನೆ ಯುವರಾಣಿ ಸೀರಿಯಲ್ ನಟಿ ಕಾವ್ಯಾ ಮಹಾದೇವ್ ಇದೀಗ ಸ್ಟಾರ್ ಸುವರ್ಣದ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಗೆ ಚಂದು ಗೌಡ ನಾಯಕನಾಗಿ ನಟಿಸುತ್ತಿದ್ದಾರೆ. 
 

Kavya Mahadev come back with new serial in Star Suvarna pav

ನಟಿ ಕಾವ್ಯಾ ಮಹಾದೇವ್ (Kavya Mahadev) ನೆನಪಿದ್ದಾರೆ ಅಲ್ವಾ? ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ವಿಲನ್ ಅಹಲ್ಯಾ ಪಾತ್ರದ ಮೂಲಕ ಬಣ್ಣ ಹಚ್ಚಿದ ನಟಿ ಕಾವ್ಯಾ, ಇದೀಗ ಹಲವು ವರ್ಷಗಳ ನಂತರ ಹೊಸ ಸೀರಿಯಲ್ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ. 
 

ನಮ್ಮನೆ ಯುವರಾಣಿ (Nammane Yuvarani) ಸೀರಿಯಲ್ ಬಳಿಕ, ಕಾವ್ಯಾ ನಟನೆಯಿಂದ ದೂರ ಇದ್ದರು. ಆದರೆ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದರು. ಗಂಡ ಕುಮಾರ್ ಜೊತೆ ರಾಜಾ ರಾಣಿ ಶೋನಲ್ಲಿ ಸ್ಪರ್ಧಿಸಿ, ಕಾರ್ಯಕ್ರಮದ ವಿನ್ನರ್ ಕೂಡ ಆಗಿದ್ದರು. ನಂತರ ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಕಳೆದ ಕೆಲವು ಸಮಯದಿಂದ ಕಾವ್ಯಾ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಳ್ಳುತ್ತಿದ್ದರು. 
 


ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ‘ಸ್ನೇಹದ ಕಡಲಲ್ಲಿ’ (Snehada Kadalalli) ಧಾರಾವಾಹಿಯಲ್ಲಿ ಕಾವ್ಯಾ ಮಹಾದೇವ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಸೀರಿಯಲ್ ಪ್ರೊಮೋ ಬಿಡುಗಡೆಯಾಗಿದ್ದು, ಜನರಿಗೆ ಕಥೆ ಇಷ್ಟವಾಗಿದೆ. ವಿಭಿನ್ನ ಕಥೆಯ ಮೂಲಕ ಕಾವ್ಯಾ ಬಹಳ ವರ್ಷಗಳ ನಂತ್ರ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 
 

ಜೋರಾಗಿ ಮಳೆ ಬರುತ್ತಿರುತ್ತೆ, ಪೊಲೀಸ್ ಸ್ಟೇಷನ್ ಒಳಗೆ ಮದುಮಗಳು ಕುಳಿತುಕೊಂಡಿರುತ್ತಾಳೆ. ಪೊಲೀಸ್ ಅವಳನ್ನು ಮಾತನಾಡಿಸುತ್ತಾ, ಏನಮ್ಮಾ ಇಷ್ಟೊತ್ತಿಗೆ, ಮದ್ವೆ ಮನೆಯಿಂದ ನೇರವಾಗಿ ಓಡಿ ಬಂದಿರೋ ಆಗಿದೆ. ಮದ್ವೆ ಇಷ್ಟ ಇರ್ಲಿಲ್ವಾ? ಅಥವಾ ಹುಡುಗ ಇಷ್ಟ ಆಗ್ಲಿಲ್ವಾ? ಅಥವಾ ಲವ್ವಾ ಎಂದು ಕೇಳುತ್ತಾರೆ. ಆದರೆ ಅವಳ ಕುತ್ತಿಗೆಯಲ್ಲಿ ತಾಳಿ ಇರುತ್ತೆ. 
 

ಮದುವೆ ಬಗ್ಗೆ ಸಾವಿರ ಕನಸು ಕಟ್ಟಿಕೊಂಡ ಹುಡುಗಿ ಅವಳು, ಮದುವೆಯಾದ ಮೇಲೆ ಪ್ರೀತಿ, ಸಂಸಾರ, ಸ್ನೇಹದ ಕನಸು ಕಟ್ಟಿಕೊಂಡಿದ್ದಳು. ಆದರೆ ಮದುವೆಯಾದ ಹುಡುಗ ಮಾತ್ರ ಆಕೆಗೆ ಫಸ್ಟ್ ದಿನವೇ ದೊಡ್ಡ ಶಾಕ್ ಕೊಡ್ತಾನೆ. ಫಸ್ಟ್ ನೈಟ್ ಗೆ ತನ್ನ ಗರ್ಲ್ ಫ್ರೆಂಡನ್ನು ಆಹ್ವಾನಿಸಿರೋದಾಗಿ ಹೇಳುತ್ತಾನೆ. ಇದನ್ನು ಕೇಳಿ ಹುಡುಗಿ ಶಾಕ್ ಆಗ್ತಾಳೆ. ಮದುವೆ ಅನ್ನೋದು ಕೆಟ್ಟ ಕನಸು ಆಗುತ್ತೆ ಅನ್ನೋದನ್ನು ಯೋಚನೆ ಮಾಡಿರದ ಹುಡುಗಿ, ತನಗೆ ನೋವು ಮಾಡಿದ ಗಂಡನ ವಿರುದ್ಧ ಕೇಸ್ ಕೊಡಲು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತ್ತಾಳೆ. 
 

ಆದರೆ ಪೊಲೀಸರು ಕಂಪ್ಲೇಂಟ್ ತೆಗೆದುಕೊಳ್ಳುವ ಬದಲು, ಮದುವೆ ಅಂದ ಮೇಲೆ ಸ್ವಲ್ಪ ಹೆಚ್ಚು ಕಮ್ಮಿ ಆಗುತ್ತೆ, ಸುಮ್ನೆ ಅಡ್ಜಸ್ಟ್ ಮಾಡ್ಕೊಂಡು ಮನೆಗೆ ಹೋಗಮ್ಮ ಎನ್ನುತ್ತಾ ಆಕೆಯನ್ನು ಮನೆಗೆ ಕಳುಹಿಸುತ್ತಾರೆ. ಜೋರಾಗಿ ಬೀಳುತ್ತಿರುವ ಮಳೆಗೆ ನನ್ನೊಳಗಿನ ಭರವಸೆಗಳು ಕೊಚ್ಚಿ ಹೋಗುತ್ತಿವೆ ಎಂದು, ಮಳೆಯಲ್ಲಿ ಹೊರಗೆ ಕಾಲಿಡುವಾಗ, ಆಕೆಯ ನೆರವಿಗೆ ಇಬ್ಬ ಬರುತ್ತಾನೆ. ಈ ನವ ವಧುವಿನ ಪಾತ್ರದಲ್ಲಿ ಕಾವ್ಯಾ ಮಹಾದೇವ್ ನಟಿಸುತ್ತಿದ್ದಾರೆ. 
 

ಆಕೆಗೆ ನೆರವಿಗೆ ಬರುವ ಸ್ನೇಹಿತನಾಗಿ ಚಂದು ಗೌಡ (Chandu Gowda) ನಟಿಸುತ್ತಿದ್ದಾರೆ, ಪೊಲೀಸ್ ನೀನೇನಾ ಅವಳ ಗಂಡ ಎಂದಾಗ, ಆತ ಅಲ್ಲ, ನಾನು ಅವಳ ವೆಲ್ ವಿಶರ್, ಇನ್ನು ಮುಂದೆ ನಿಮ್ಮ ಜೀವನದಲ್ಲಿ ಏನೇ ಆದರೂ ನಿಮ್ಮ ಜೊತೆ ನಾನಿರುತ್ತೇನೆ ಎನ್ನುತ್ತಾ, ಆಕೆಗೆ ಕೊಡೆ ಹಿಡಿಯುತ್ತಾ, ಜೊತೆಯಾಗಿ ಸಾಗುತ್ತಾರೆ. 
 

ಇದೊಂದು ಸುಂದರವಾದ ಸ್ನೇಹದ ಕಥೆಯಾಗಿದ್ದು, ಹಾಗಾಗಿಯೇ ಸೀರಿಯಲ್ ಹೆಸರು ಸ್ನೇಹದ ಕಡಲಲ್ಲಿ ಅಂತಿದೆ. ಇದು ತೆಲುಗಿನ ನಿನ್ನು ಕೋರಿ ಸೀರಿಯಲ್ ರಿಮೇಕ್ ಎಂದು ಹೇಳಲಾಗುತ್ತಿದೆ. ಸೀರಿಯಲ್ ಯಾವಾಗ ಶುರುವಾಗಲಿದೆ ತಿಳಿದಿಲ್ಲ. ಆದರೆ ಇವರಿಬ್ಬರನ್ನು ಮತ್ತೆ ಕನ್ನಡ ಕಿರುತೆರೆಯಲ್ಲಿ ಜೊತೆಯಾಗಿ ನೋಡಿ ಜನ ಇಷ್ಟಪಟ್ಟಿದ್ದಾರೆ. 
 

Latest Videos

vuukle one pixel image
click me!