ನನ್ನನ್ನು Dim ಮಾಡೋಕೆ ಪ್ರಯತ್ನಿಸಿದ್ರು, ನಾನೇ Highlight ಆದೆ... Kavya Gowda ತಿರುಗೇಟು ಕೊಟ್ಟಿದ್ಯಾರಿಗೆ?

Published : Feb 02, 2026, 05:05 PM IST

Kavya Gowda: ಕುಟುಂಬದ ಆಸ್ತಿ ಕೇಸ್ ಮೂಲಕ ಸದ್ದು ಮಾಡಿದ ನಟಿ ಕಾವ್ಯಾ ಗೌಡ ಅವರು, ಇದೀಗ ಎಲ್ಲಾ ಟ್ರೋಲ್ ಬಳಿಕ ಸೋಶಿಯಲ್ ಮೀಡೀಯಾದಲ್ಲಿ ಮತ್ತೆ ತಮ್ಮ ಮಾಲ್ಡೀವ್ಸ್ ವೆಕೇಶನ್ ಫೋಟೊಗಳನ್ನು ಶೇರ್ ಮಾಡಿದ್ದು, ಅದರ ಜೊತೆಗೆ ಯಾರಿಗೋ ತಿರುಗೇಟು ಕೊಟ್ಟಂತಿದೆ.

PREV
16
ಕಾವ್ಯಾ ಗೌಡ

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಇತ್ತೀಚೆಗೆ ಸುದ್ದಿಯಲ್ಲಿರೋದೆ ತಮ್ಮ ಮನೆಯ ಗಲಾಟೆಯಿಂದ. ಕಾವ್ಯಾ ಗೌಡ ಪತಿ ಸೋಮಶೇಖರ್ ಅವರ ಅಣ್ಣ ಮತ್ತು ಅತ್ತಿಗೆ ಜೊತೆ ಜಗಳ, ವಿವಾದ, ದಾಳಿ, ಪ್ರತಿದಾಳಿ ಮೂಲಕ ಕಾವ್ಯಾ ಗೌಡ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.

26
ವಿವಾದ ಏನು?

ಕಾವ್ಯಾ ಗೌಡ ಮತ್ತು ಸೋಮಶೇಖರ್ ಅವರು ಅಣ್ಣ ನಂದೀಶ್ ಮತ್ತು ಪ್ರೇಮಾ ಮೇಲೆ ದಾಳಿ ಮಾಡಿರೋದಾಗಿ ಪ್ರೇಮಾ ಅವರು ದೂರು ನೀಡಿದ್ದರೆ, ಪ್ರೇಮಾ ಮತ್ತು ಅವರ ತಂದೆ ನನ್ನ ಮೇಲೆ ಮತ್ತು ನನ್ನ ಅಕ್ಕನ ಮೇಲೆ ದಾಳಿ ಮಾಡಿದ್ದಾರೆ ಎಂದು ಕಾವ್ಯಾ ಗೌಡ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದರು. ಈ ಜಗಳ ಆಸ್ತಿ ವಿಚಾರಕ್ಕೆ ಶುರುವಾಗಿದ್ದು, ನಂದೀಶ್ ಮತ್ತು ಪ್ರೇಮಾರನ್ನು ಮನೆಯಿಂದ ಹೊರ ಹಾಕಲು ಕಾವ್ಯಾ ಗೌಡ ಪ್ಲ್ಯಾನ್ ಮಾಡುತ್ತಿರುವುದಾಗಿ ಸುದ್ದಿಯಾಗಿತ್ತು.

36
ಟ್ರೋಲ್ ಗೆ ಒಳಗಾದ ಕಾವ್ಯಾ ಗೌಡ

ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಕಾವ್ಯಾ ಗೌಡರನ್ನು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ತೋರಿಸಲು ಹಲವರು ಶುರು ಮಾಡಿದ್ದರು. ದುಡ್ಡಿಗಾಗಿ ಸೋಮಶೇಖರ್ ಅವರನ್ನು ಮದುವೆಯಾಗಿರುವುದಾಗಿಯೂ, ಇದನ್ನು ಅವರ ಲಕ್ಸುರಿ ಜೀವನ ಶೈಲಿ ನೋಡಿದರೇನೇ ಗೊತ್ತಾಗುತ್ತದೆ. ಇದರಲ್ಲಿ ತಪ್ಪು ಕಾವ್ಯಾ ಗೌಡ ಮತ್ತು ಸೋಮಶೇಖರ್ ಅವರದೇ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡಲು ಶುರು ಮಾಡಿದ್ದರು.

46
ನಾನು ಮೌನವಾಗಿದ್ದೇನೆ ಅಂದ್ರೆ ಭಯದಿಂದಲ್ಲ

ನಾನು ಮೌನವಾಗಿದ್ದೇನೆ ಅಂದರೆ ಭಯದಿಂದಲ್ಲ ಕಾಲದ ಮೇಲಿನ ನಂಬಿಕೆಯಿಂದ ಇಂದು ಅಲ್ಲದಿದ್ದರೂ ನಾಳೆ ಕಾಲವೇ ಸತ್ಯವನ್ನು ಹೊರತರುತ್ತದೆ ಇಂದು ನನ್ನ ಮಾತು ಕೇಳಿಸದಿದ್ದರೂ ಪರವಾಗಿಲ್ಲ ನಾಳೆ ಕಾಲವೇ ನನ್ನ ಪರವಾಗಿ ಮಾತನಾಡುತ್ತದೆ ನೋವು ಸಹಿಸಿಕೊಂಡೆ ಮೌನ ಆಯ್ಕೆ ಮಾಡಿಕೊಂಡೆ ಕಾರಣ ಕಾಲಕ್ಕೆ ನ್ಯಾಯ ಕೊಡಲು ಸಮಯ ಬೇಕು ಕಾಲ ಕಷ್ಟ ಕೊಟ್ಟರು ಭಯ ಇಲ್ಲ ಇಂದು ನನ್ನ ನೋವು ಅರ್ಥವಾಗದಿದ್ದರೂ ನಾಳೆ ಕಾಲವೇ ಎಲ್ಲವನ್ನು ಹೇಳುತ್ತದೆ ಮಹಾಕಾಳೇಶ್ವರನ ನನ್ನ ಜೊತೆ ಇದ್ದಾನೆ ಓಂ ಸಾಯಿ ರಾಮ್ ಎಂದು ಎಲ್ಲಾ ಟ್ರೋಲ್ ಗಳಿಗೆ ಕಾವ್ಯಾ ಗೌಡ ಖಡಕ್ ಆಗಿ ಉತ್ತರಿಸಿದ್ದರು.

56
ಮಾಲ್ಡೀವ್ಸ್ ಫೋಟೊ ಶೇರ್ ಮಾಡಿದ ಕಾವ್ಯಾ

ಇದೀಗ ಕಾವ್ಯಾ ಗೌಡ, ತನಗೆ ಬೆಂಬಲ ಸೂಚಿಸಿದವರಿಗೆ ಧನ್ಯವಾದವನ್ನು ತಿಳಿಸುತ್ತಾ, ಮಾಲ್ಡೀವ್ಸ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ನನ್ನನ್ನು ಮಂದಗೊಳಿಸಲು ಪ್ರಯತ್ನಿಸಿದರು, ಕೊನೆಗೆ ನಾನೇ ಹೈಲೈಟ್ ಆದೆ... ಯಾವ ನೆರಳು ಕೂಡ ನನ್ನನ್ನು ಮಂದಗೊಳಿಸುವಷ್ಟು ಬಲವಾಗಿಲ್ಲ (Tried to dim me, ended up highlighting me...No shadow is strong enough to dull my shin) ಎಂದು ಖಡಕ್ ಆಗಿ ಬರೆದುಕೊಂಡಿದ್ದಾರೆ.

66
ಮಗಳ ಬರ್ತ್ ಡೇ ಆಚರಿಸಲು ಮಾಲ್ಡೀವ್ಸ್’ಗೆ ಹಾರಿದ್ದ ನಟಿ

ಇತ್ತೀಚೆಗೆ ಕಾವ್ಯಾ ಗೌಡ ಅವರು ತಮ್ಮ ಮಗಳು ಸಿಯಾ ಸೋಮಶೇಖರ್ ಅವರ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಮಾಲ್ಡೀವ್ಸ್ ಗೆ ಹಾರಿದ್ದರು. ಅಲ್ಲಿ ದ್ವೀಪದಲ್ಲಿ ಗ್ರ್ಯಾಂಡ್ ಆಗಿ ಬರ್ತ್ ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲಿಂದ ಬಂದ ಕೆಲವೇ ದಿನದಲ್ಲಿ ಮನೆಯಲ್ಲಿ ವಿವಾದ ಉಂಟಾಗಿ, ಅದು ಬೀದಿಗೆ ಬಂದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories