ಅಮ್ಮನಾಗುತ್ತಿದ್ದೇನೆಂದು ನಂಗೆ ಮಾತ್ರ ಗೊತ್ತಾದಾಗ! ಕವಿತಾ ಲುಕ್ ಹೀಗಿತ್ತು!

ಕನ್ನಡ ಕಿರುತೆರೆಯ ಚಿನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಗುಡ್‌ನ್ಯೂಸ್ ತಮಗೆ ಗೊತ್ತಾದ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಲಕ್ಷ್ಮೀ ಬಾರಮ್ಮಾ ಧಾರಾವಾಹಿ ಮೂಲಕ ಕನ್ನಡಿಗರ ಮನೆಗಳ ಮಗಳು ಆಗಿದ್ದಾರೆ. ಧಾರಾವಾಗಿ ವರ್ಷಗಳೇ ಕಳೆದರೂ ಇನ್ನು ಇನ್ನು ಅಭಿಮಾನಿಗಳು ಕವಿತಾರನ್ನು ಚಿನ್ನು ಅಂತಾನೇ ಕರೆಯುತ್ತಾರೆ.

ಗರ್ಭಿಣಿಯಾದ ಮೂರು ತಿಂಗಳವರೆಗೆ ವಿಷಯವನ್ನು ಕುಟುಂಬಸ್ಥರನ್ನು ಹೊರತುಪಡಿಸಿ ಹೊರಗಿನವರಿಗೆ ಯಾರಿಗೂ ತಿಳಿಸಲ್ಲ. ಆನಂತರವಷ್ಟೇ ಆಪ್ತರೊಂದಿಗೆ ವಿಷಯ ಶೇರ್ ಮಾಡಿಕೊಳ್ಳಲಾಗುತ್ತದೆ.


ತಾನು ಗರ್ಭಿಣಿ ಅಂತಾ ತಿಳಿದ ಖುಷಿ ಕ್ಷಣದ ಫೋಟೋವನ್ನು ಕವಿತಾ ಗೌಡ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದರು. ಅಂದು ಸಂಭ್ರಮದಲ್ಲಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನು ಕವಿತಾ ರಿವೀಲ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ.

ಲಕ್ಷ್ಮೀ ಬಾರಮ್ಮ ಬಳಿಕ ವಿದ್ಯಾ ವಿನಾಯಕ ಸೀರಿಯಲ್‌ನಲ್ಲಿಯೂ ಕವಿತಾ ಗೌಡ ನಟಿಸಿದ್ದರು. ಆದರೂ ಈ ಪಾತ್ರ ಕವಿತಾರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿರಲಿಲ್ಲ. ತೆಲುಗು, ತಮಿಳು ಧಾರಾವಾಹಿಗಳಲ್ಲಿಯೂ ಕವಿತಾ ನಟಿಸಿದ್ದಾರೆ.

ಕನ್ನಡ ಬಿಗ್‌ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿದ್ದ ಕವಿತಾ ಗೌಡ ಕೊನೆಯ ವಾರದವರೆಗೂ ಬಂದಿದ್ದರು. ಆರನೇ ಸೀಸನ್‌ನಲ್ಲಿ ರನ್ನರ್‌ ಅಪ್ ಆಗಿ ಕವಿತಾ ಹೊರ ಹೊಮ್ಮಿದ್ದರು. ನಂತರ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿಯೂ ಕವಿತಾ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕ ಲಕ್ಷ್ಮಿ ಬಾರಮ್ಮಾ ಧಾರಾವಾಹಿಯಲ್ಲಿ ಸಹ ನಟನಾಗಿದ್ದ ಚಂದನ ಗೌಡ ಅವರನ್ನೇ ಮದುವೆಯಾಗಿದ್ದರು. ಮದುವೆ ಬಳಿಕ ಕವಿತಾ ಗೌಡ, ಹೋಟೆಲ್ ಉದ್ಯಮದಲ್ಲಿ ಬ್ಯುಸಿಯಾಗಿದ್ದರು.

ನಟ ಚಂದನ್‌ ಕುಮಾರ್ ಹಾಗೂ ನಟಿ ಕವಿತಾ ಗೌಡ 14 ಮೇ 2021ರಂದು ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ. ಎರಡು ವರ್ಷದ ಬಳಿಕ, 05 ಮೇ 2024ರಂದು ತಾವು ಪೋಷಕರಾಗುತ್ತಿರುವ ವಿಷಯವನ್ನು ರಿವೀಲ್ ಮಾಡಿದ್ದರು.

ಎರಡು ವಾರಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಂನಲ್ಲಿ ಪಟ ಪಟನೇ ಅಂತ ಕಣ್ಣು ಮಿಟುಕಿಸೋ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ ಕವಿತಾರ ಬೇಬಿ ಬಂಪ್ ಕಂಡು ಅಭಿಮಾನಿಗಳು ಶುಭ ಹಾರೈಸಿದ್ದರು.

Latest Videos

click me!