ಹೇಗೆ ಲೆಕ್ಕಾಚಾರ ಹಾಕಿದ್ರೂ 'ಕರ್ಣ' ಧಾರಾವಾಹಿಯಲ್ಲಿ ವೀಕ್ಷಕರಿಗೆ ಅರ್ಥವಾಗ್ದೇ ಇರೋದು ಒಂದಿದೆ!

Published : Sep 27, 2025, 02:14 PM IST

Karna Kannada Serial: 'ಕರ್ಣ' ಧಾರಾವಾಹಿಯ ಟಿಆರ್‌ಪಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದ್ಯಾಕೆ ಎಂಬುದನ್ನ ಸ್ವತಃ ಜನರೇ ವಿಮರ್ಶೆ ಮಾಡುತ್ತಿದ್ದಾರೆ. ಸದ್ಯ ಧಾರಾವಾಹಿ ವೀಕ್ಷಕರಿಗೆ ಬಹುದಿನಗಳಿಂದ ಅರ್ಥವಾಗದೆ ಇರುವ ಪ್ರಶ್ನೆಯೊಂದಿದೆ. ಅದೇನು ಅಂತೀರಾ?.

PREV
16
ಅರ್ಥವಾಗದೆ ಇರುವ ಪ್ರಶ್ನೆ

'ಕರ್ಣ' ಧಾರಾವಾಹಿ ಪ್ರಸಾರವಾಗಿ ಬಹಳ ತಿಂಗಳುಗಳೇನು ಕಳೆದಿಲ್ಲ. ಆದರೂ ಭಾರೀ ಜನಮಚ್ಚುಗೆ ಪಡೆದುಕೊಂಡಿದೆ. ಟಿಆರ್‌ಪಿಯಲ್ಲೂ ಮುಂದಿದೆ. ಟಿಆರ್‌ಪಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದ್ಯಾಕೆ ಎಂಬುದನ್ನ ಸ್ವತಃ ಜನರೇ ವಿಮರ್ಶೆ ಮಾಡುತ್ತಿದ್ದಾರೆ. ಸದ್ಯ ಧಾರಾವಾಹಿ ವೀಕ್ಷಕರಿಗೆ ಬಹುದಿನಗಳಿಂದ ಅರ್ಥವಾಗದೆ ಇರುವ ಪ್ರಶ್ನೆಯೊಂದಿದೆ. ಅದೇನೂ ಅಂತ ನಿಮಗೂ ಗೊತ್ತಿದೆ.

26
ವೀಕ್ಷಕರಿಗೆ ಮತ್ತದೇ ಬೇಸರ

ಪ್ರಸ್ತುತ ಧಾರಾವಾಹಿಯಲ್ಲಿ ನಿಧಿ ಹುಟ್ಟುಹಬ್ಬ ನಡೆಯುತ್ತಿದೆ. ನಿಧಿಯ ಲವ್ವರ್ ಕಾರ್ತಿಕ್ ಎಂದು ತಪ್ಪು ತಿಳಿದುಕೊಂಡಿರುವ ನಿಧಿಯ ಅಕ್ಕ ನಿತ್ಯಾ, ಕಾರ್ತಿಕ್‌ಗೆ ಕೆಲವು ಟಿಪ್ಸ್‌ ಕೂಡ ಕೊಟ್ಟಿದ್ದಾಳೆ. ಆದರೆ ಮುಂದಿನ ಸಂಚಿಕೆಯಲ್ಲಿ ಆಗುವುದೇ ಬೇರೆ. ಅಂದರೆ ಕಾರ್ತಿಕ್‌ಗೆ ಹೇಳಿರೋ ಟಿಪ್ಸ್‌ನ ನೀಟಾಗಿ ಫಾಲೋ ಮಾಡುವ ಕರ್ಣ ನಿಧಿ ಮನೆಗೆ ಬಂದದ್ದಾಗಿದೆ. ಇದನ್ನೆಲ್ಲಾ ನೋಡಿದ ವೀಕ್ಷಕರಿಗೆ ಮತ್ತದೇ ಬೇಸರ , ಮತ್ತದೇ ಅರ್ಥವಾಗ್ದೆ ಇರೊ ಸಂಗತಿ.

36
ನೋಡ್ತಾ ಇರಿ ಕರ್ಣ..

ಅದೇನಪ್ಪಾ ಅಂದ್ರೆ ಸೀರಿಯಲ್ ಶುರುವಾದಗಿನಿಂದ ಕರ್ಣ ನಿಧಿಯನ್ನೇ ಮದುವೆಯಾಗುವ ತರಹ ತೋರಿಸುತ್ತಿದ್ದರೂ, ವೀಕ್ಷಕರು ಮಾತ್ರ ಹೊಸ ಹೊಸ ಪ್ರೊಮೊ ಬಂದಾಗಲೆಲ್ಲಾ ನಿತ್ಯಾಗೆ ಸಪೋರ್ಟ್ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ, ನೋಡ್ತಾ ಇರಿ ಕರ್ಣ ಮದ್ವೆಯಾಗುವುದೇ ನಿತ್ಯಾಳಾನ್ನ. ಅದಕ್ಕೆ ಹೀಗೆಲ್ಲಾ ಮಾಡ್ತಾ ಇರೋದು ಅಂತಿದ್ದಾರೆ.

46
ನೆಟ್ಟಿಗರಿಂದ ಕೇಳಿಬರುತ್ತಿರುವ ಮಾತು

ಅಷ್ಟೇ ಅಲ್ಲ, ಪ್ರತಿ ಬಾರಿ ಕರ್ಣ ನಿಧಿಯನ್ನ ಮೀಟ್‌ ಮಾಡುವಾಗಲೂ, ನಿತ್ಯಾ ಕರ್ಣನ ಮೇಲೆ ಕೋಪ ಮಾಡಿಕೊಂಡಾಗಲೂ ಇದೇ ಮಾತು ನೆಟ್ಟಿಗರಿಂದ ಕೇಳಿಬರುತ್ತಿದೆ. ಆದರೆ ಪ್ರತಿ ಹೊಸ ಸಂಚಿಕೆ ನೋಡಿದಾಗಲೆಲ್ಲಾ ಮತ್ತವರ ನಿಲುವು ಬದಲಾಗುತ್ತಿದೆ. ಹಾಗಾಗಿ ಅವರಿಗೆ ಕರ್ಣ ಮದುವೆಯಾಗುವುದು ಯಾರನ್ನ ಎಂಬುದೇ ಯಕ್ಷ ಪ್ರಶ್ನೆಯಾಗಿ, ಅರ್ಥವಾಗದೇ ಇರುವ ವಿಷಯವಾಗಿ ಉಳಿದಿದೆ. ಜೊತೆಗೆ ಧಾರಾವಾಹಿ ನೋಡುತ್ತಾ ನೋಡುತ್ತಾ ಇನ್ನೊಂದು ಕುತೂಹಲ ಎದುರಾಗಿದೆ.

56
ನಾಗಭರಣ ನಟನೆ ಇಷ್ಟ

ಈಗೀಗ ಕರ್ಣನ ತಂದೆ ರಮೇಶ್ ಒಳ್ಳೆಯರಾಗುತ್ತಿರುವುದು ಎಲ್ಲರಿಗೂ ಖುಷಿಯ ವಿಚಾರವಾದ್ರೂ ಅವರು ನಿಜವಾಗ್ಲೂ ಕರ್ಣನಿಗೆ ತಂದೆ ಪ್ರೀತಿ ತೋರಿಸುತ್ತಾ ಇದ್ದಾರೊ, ಡ್ರಾಮನೋ ಅರ್ಥವಾಗ್ತಿಲ್ಲ. ಒಟ್ಟಿನಲ್ಲಿ ವೀಕ್ಷಕರಿಗೆ ರಮೇಶ್ ಪಾತ್ರ ನಿರ್ವಹಿಸುತ್ತಿರುವ ನಾಗಭರಣ ನಟನೆ ತುಂಬಾ ಇಷ್ಟವಾಗ್ತಿದೆ.

66
ಅಂದಹಾಗೆ ವೀಕ್ಷಕರು ಮಾಡಿರುವ ಕಾಮೆಂಟ್ಸ್‌ಗಳೇನು?

*ನೀವು ನಿಧಿದೇ ಜಪ ಮಾಡ್ತಾ ಇದ್ರೇ TRP 9+ ಬರಬೇಕು ಅನ್ನೋದನ್ನ ಸೀರಿಯಲ್ NO.1 ಆಗ್ಬೇಕು ಅನ್ನೋದನ್ನ ಮರೆತುಬಿಡಬೇಕಾಗುತ್ತೆ.
*ಇಲ್ಲಿ ಕರ್ಣ ಗೆ ನಿಧಿ ಮೇಲೆ love ಆದ್ರೂ ನಿತ್ಯ ಜೊತೇನೆ ಮದ್ವೆನಾ?. ಗೊತ್ತಾಗ್ತಾ ಇಲ್ಲ.
*ನಿತ್ಯಾ ನಟನೆ, ಔಟ್‌ಫಿಟ್, ಲುಕ್‌ ಎಲ್ಲವೂ ಸೂಪರ್‌.
*ನಿಧಿ ಕರ್ಣ ಲವ್ ಸ್ಟೋರಿ ಮಾಡಿದ್ರೆ ಈಗ trp 2nd ಗೆ ಬಂದಿದೆ. ಇನ್ನು ಜಾಸ್ತಿ ಮಾಡಿದ್ರೆ ಲಾಸ್ಟ್‌ಗೆ ಬರೋದ್ರಲ್ಲಿ ಡೌಟ್ ಇಲ್ಲ. ಯಾರಿಗೂ ನಿಧಿ ಇಷ್ಟ ಆಗಲ್ಲ.
*ನಿಧಿ ಪ್ರೊಮೊದಲ್ಲಿ ನೋಡಿ ಎಪಿಸೋಡ್ ಯಾರೂ ನೋಡಲ್ಲ. ಕರ್ಣ-ನಿಧಿ ಲವ್‌ ಸ್ಟೋರಿ ವೀಕ್ಷಕರಿಗೆ ಇಷ್ಟವಾಗಲ್ಲ.
*ಈ ಸೀರಿಯಲ್ ನಾ 2 ಕಣ್ಣುಗಳು ನಿಧಿ ಮತ್ತು ನಿತ್ಯಾ. ದಯವಿಟ್ಟು ನಿಧಿ ಮತ್ತು ನಿತ್ಯಾ ಇಬ್ಬರನ್ನು ಸಮಾನವಾಗಿ ತೋರಿಸಿ. ತೋರಿಸಿದರೆ ಒಬ್ಬರನ್ನೇ ಜಾಸ್ತಿ ತೋರಿಸುತ್ತೀರಾ. ನಿಧಿ ಬರಿ ಅವಳನ್ನೇ ತೋರಿಸಿದೀರಾ. ಇನ್ನೂ ನಿತ್ಯಾ ನಾ ಜಾಸ್ತಿ ತೋರಿಸೇ ಇಲ್ಲಾ. ಅದುಕ್ಕೆ ಟಿಆರ್‌ಪಿ ಕಡಿಮೆ ಆಗಿ 2 ನೇ ಸ್ಥಾನಕ್ಕೆ ಬಂದು ನಿಂತಿದೆ.

Read more Photos on
click me!

Recommended Stories