Karna Serial ವೀಕ್ಷಕರ ಕನಸು ನನಸಾಗೋಯ್ತು! ರಮೇಶ ಕುಂತ್ರೂ ತಪ್ಪು, ನಿಂತ್ರೂ ತಪ್ಪು: ಭಲೆ ಭಲೆ ಕರ್ಣ

Published : Jan 27, 2026, 09:28 PM IST

ವೀಕ್ಷಕರ ಆಸೆಯಂತೆ, ಕರ್ಣ ತನ್ನ ಒಳ್ಳೆಯತನದಿಂದಲೇ ಕುತಂತ್ರಿ ರಮೇಶ್‌ಗೆ ತಿರುಗೇಟು ನೀಡುತ್ತಿದ್ದಾನೆ. ರಮೇಶನ ಕಿತಾಪತಿಗಳನ್ನು ಅರಿತ ಕರ್ಣ, ಮನೆಯ ಕೆಲಸಗಳನ್ನೆಲ್ಲಾ ಅವನಿಗೇ ನೀಡಿ, ಅವನಿಗೆ ಸ್ವಲ್ಪವೂ ಬಿಡುವು ಕೊಡದೆ ಸುಸ್ತು ಮಾಡಿಸುತ್ತಿದ್ದಾನೆ. ಕರ್ಣನ ಈ ಬದಲಾವಣೆ ಮನೆಯವರಿಗೆ ಅಚ್ಚರಿ ಮೂಡಿಸಿದೆ.

PREV
16
ವೀಕ್ಷಕರಿಗೆ ಸಕತ್​ ಮಜಾ

ಕರ್ಣ ಸ್ವಲ್ಪ ನಿನ್ನ ಈ ಅತಿಯಾದ ಒಳ್ಳೆತನ ಬಿಟ್ಟುಬಿಡಪ್ಪಾ ಎಂದು ಗೋಗರೆದ ವೀಕ್ಷಕರು ಅದೆಷ್ಟೋ ಮಂದಿ. ಅಂತೂ ಕೊನೆಗೆ ವೀಕ್ಷಕರ ಕನಸು ನನಸಾಗೋಯ್ತು! ಇದೀಗ ಕರ್ಣ ಪಾರ್ಟ್​-2 ಶುರುವಾಗಿದೆ. ಅದೇ ಒಳ್ಳೆಯತನದಿಂದಲೇ ರಮೇಶ್​ಗೆ ಏಟು ಕೊಡ್ತಿರೋ ಕರ್ಣನನ್ನು ನೋಡೋದೇ ಸಕತ್​ ಮಜ ಕೊಡ್ತಿದೆ ವೀಕ್ಷಕರಿಗೆ.

26
ಕಿತಾಪತಿ ತಿಳಿದ ಕರ್ಣ

ಅಷ್ಟಕ್ಕೂ ರಮೇಶ್​ನ ಕುತಂತ್ರ ಕರ್ಣನಿಗೆ ತಿಳಿದೇ ಇರಲಿಲ್ಲ. ಆದರೆ ನಿಧಿಯ ಜೊತೆ ಲವ್​ ಮಾಡ್ತಿರೋ ಗೊತ್ತಿದ್ದರೂ, ನಿತ್ಯಾ ಜೊತೆ ಮದುವೆಯಾಗುವಂತೆ ಮಾಡಿ, ಮೂವರ ಕನಸುಗಳನ್ನು ನುಚ್ಚುನೂರು ಮಾಡಿ, ಇನ್ನಿಲ್ಲದ ಕಿತಾಪತಿ ಮಾಡ್ತಿರೋ ರಮೇಶನ ಬಗ್ಗೆ ಇದೀಗ ಕರ್ಣನಿಗೆ ತಿಳಿದಿದೆ.

36
ಅಡುಗೆ, ಕೆಲಸದ ಟಾರ್ಗೆಟ್​

ಮನೆಯಲ್ಲಿ ಎಲ್ಲಾ ಹೆಂಗಸರಿಗೂ ತಾವು ಅಡುಗೆ ಮಾಡಿ ಬಡಿಸುವ ಟಾರ್ಗೆಟ್​ ಕೊಟ್ಟಿರೋ ಕರ್ಣ, ರಮೇಶನನ್ನು ಸುಸ್ತು ಮಾಡಿಸುತ್ತಿದ್ದಾನೆ. ಅವನಿಗೆ ಕುತಂತ್ರ ಮಾಡಲು ಒಂದಿಂಚೂ ಅವಕಾಶ ನೀಡದಂತೆ, ಆ ಬಗ್ಗೆ ಒಂದು ಕ್ಷಣ ಯೋಚಿಸುವುದಕ್ಕೂ ಬಿಡದೇ ಮನೆಯ ಕೆಲಸವನ್ನೆಲ್ಲಾ ಮಾಡಿಸುತ್ತಿದ್ದಾನೆ.

46
ತಾನೂ ಕೆಲಸ

ಆತನಿಗೊಬ್ಬನಿಗೆ ಎಲ್ಲಾ ಮಾಡಿಸಿದರೆ ಗುಟ್ಟು ತಿಳಿಯುತ್ತದೆ ಎನ್ನುವ ಕಾರಣಕ್ಕೆ, ಆತನ ಜೊತೆ ತಾನೂ ಸೇರಿದಂತೆ ಮನೆಯ ಎಲ್ಲಾ ಗಂಡಸರನ್ನೂ ಕೆಲಸಕ್ಕೆ ಕರೆಸಿಕೊಂಡಿದ್ದಾನೆ. ಮನೆಯ ಹೆಂಗಸರಿಗೆ ಫುಲ್​ ರೆಸ್ಟ್​ ಕೊಟ್ಟಿದ್ದಾನೆ. ಕರ್ಣನಲ್ಲಿ ಆಗ್ತಿರೋ ಈ ಬದಲಾವಣೆ ಕಂಡು ಮನೆಯ ಹೆಂಗಸರೂ ಶಾಕ್​ ಆಗೋಗಿದ್ದಾರೆ.

56
ಅಮ್ಮನಿಗೆ ಕೈತುತ್ತು

ರಮೇಶ ಮದುವೆಯಾದಾಗಿನಿಂದಲೂ ಪತ್ನಿಗೆ ಕಿರುಕುಳ ಕೊಟ್ಟಿದ್ದು ಬಿಟ್ಟರೆ ಮತ್ತೇನೂ ಇಲ್ಲ. ಆದರೆ ಅದಕ್ಕೆ ಈಗ ಅವಕಾಶವೇ ಇಲ್ಲ. ಅಮ್ಮನಿಗೆ ಕೈತುತ್ತು ತಿನ್ನಿಸುವಂತೆ ಕರ್ಣ ಹೇಳಿದ್ದು, ರಮೇಶನೂ ತತ್ತರಿಸಿ ಹೋಗಿದ್ರೆ ಎಲ್ಲರಿಗೂ ಶಾಕ್​ ಆಗಿದೆ.

66
ಮಲಗಲೂ ಬಿಡ್ತಿಲ್ಲ

ಅಷ್ಟೇ ಅಲ್ಲದೇ ರಮೇಶ್​ನಿಗೆ ಸ್ವಲ್ಪ ಹೊತ್ತು ಮಲಗಲೂ ಬಿಡದೇ ಅವನು ಹೇಳಿದ್ದ ಮಗನಿಗಾಗಿ ಏನು ಬೇಕಾದ್ರೂ ಮಾಡ್ತೇನೆ ಎನ್ನುವ ಡೈಲಾಗ್​ ಅನ್ನೇ ಅವನಿಗೆ ತಿರುಗಿಸಿ ಎಲ್ಲಾ ಕೆಲಸ ಮಾಡಿಸಿಕೊಳ್ತಿರೋದನ್ನು ನೋಡಿ ವೀಕ್ಷಕರಿಗೆ ಹಬ್ಬವೋ ಹಬ್ಬ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories