ಒಂದೇ ದಿನಕ್ಕೆ 'ಸೀತೆ'ಯಾದ ಸೋನು ಗೌಡ.. ಮಲ್ಲಿಗೆ ಮುಡಿದ ಹಳ್ಳಿ ಹುಡುಗಿ ಯಾರೀ ಬೆಡಗಿ ಎಂದ ನೆಟ್ಟಿಗರು!

Published : Dec 03, 2025, 05:32 PM IST

ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್​ಗಳ ಮೂಲಕ ಸಖತ್​ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್​ ಗೌಡ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

PREV
18
ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿ

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್ ಮನೆಗೆ​ ಹೋಗಿದ್ದಾಗಲೂ ಸಖತ್​ ಸುದ್ದಿಯಲ್ಲಿದ್ದರು ಸೋನು ಗೌಡ.

28
ಟ್ರೆಡಿಷನಲ್ ಲುಕ್‌ನಲ್ಲಿ ಸೋನು

ಇದೀಗ ಸೋನು ಶ್ರೀನಿವಾಸ್ ಗೌಡ ಲಂಗ ದಾವಣಿ ತೊಟ್ಟು ಮಿಂಚಿದ್ದಾರೆ. ಹೌದು! ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್​ಗಳ ಮೂಲಕ ಸಖತ್​ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್​ ಗೌಡ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

38
ನೆಟ್ಟಿಗರಿಗೆ ಶಾಕ್

ಇತ್ತೀಚೆಗೆ ಬಿಕಿನಿ ಹಾಗೂ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋನು ಶ್ರೀನಿವಾಸ್ ಗೌಡ ದಿಢೀರ್ ಅಂತ ಲಂಗ ದಾವಣಿ ತೊಟ್ಟು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ. ಜೊತೆಗೆ ಪೋಸ್ಟ್‌ಗೆ 'ಆ ಒಂದು ದಿನದ ಸೀತಾ ಫೋಟೋಗಳು' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

48
ಹಳ್ಳಿ ಹುಡುಗಿಯಂತೆ ಮಿಂಚಿದ ಸೋನು

ಸೋನು ಲಂಗ ದಾವಣಿ ಹಾಗೂ ಸೀರೆಯಲ್ಲಿ ಮಿಂಚಿರುವ ವಿವಿಧ ಫೋಟೋಗಳನ್ನು ಹಂಚಿಕೊಂಡಿದ್ದು, ಕೈಗೆ ಬಳೆ ತೊಟ್ಟು, ತಲೆಗೆ ಮಲ್ಲಿಗೆ ಹೂ ಮುಡಿದಿದ್ದಾರೆ. ಜೊತೆಗೆ ಹಣೆಗೆ ಚಿಕ್ಕದಾದ ಬಿಂದಿ ಇಟ್ಟುಕೊಂಡಿದ್ದು, ಥೇಟ್ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ.

58
ನೆಟ್ಟಿಗರಿಂದ ತರೇಹವಾರಿ ಕಮೆಂಟ್‌ಗಳು

ಇದೇ ಫೋಟೋಸ್​ ನೋಡಿದ ನೆಟ್ಟಿಗರು, ಹಳ್ಳಿ ಹುಡುಗಿ ಯಾರೀ ಬೆಡಗಿ, ನೋಡಿ ಶಾಕ್ ಅಯ್ತು ನಿಮ್ಮನ್ನ ಅಕ್ಕ ಸೂಪರ್, ಈ ತರ ಇದ್ರೆ ನಿಮಗೆ ಯಾರು ಕೆಟ್ಟ ಕಾಮೆಂಟ್ ಹಾಕ್ತಾರೆ ಹೇಳ್ರಿ, ಸಿಂಪಲ್ ಆಗಿ ಇದ್ರು ನಿನ್ ಬ್ಯೂಟಿ ಸೂಪರ್ ಸೇರಿದಂತೆ ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

68
ಮೊನ್ನೆಯಷ್ಟೇ ಶಾಕ್​ ಕೊಟ್ಟಿದ್ದರು

ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಅಂತ ಹೇಳಿ ಶಾಕ್​ ಕೊಟ್ಟಿದ್ದರು. ಆದರೆ ಹುಡುಗ ಯಾರು ಅಂತ ಅವರು ರಿವೀಲ್ ಮಾಡಿರಲಿಲ್ಲ. ಕುಟುಂಬಸ್ಥರು ನಿಶ್ಚಿಯಿಸಿದ ಅರೇಂಜ್ ಮ್ಯಾರೇಜ್ ಇದಾಗಿದೆ ಎಂದಿದ್ದರು.

78
ಇನ್​ಸ್ಟಾಗ್ರಾಮ್​​ನಲ್ಲಿ 11 ಲಕ್ಷ ಫಾಲೋವರ್ಸ್

ಸೋಶಿಯಲ್ ಮೀಡಿಯಾದಲ್ಲಿ ಸೋನು ಆಗಾಗ ಟ್ರೋಲ್ ಆಗುತ್ತಾರೆ. ಕೆಟ್ಟ ಕಮೆಂಟ್ ಮಾಡೋರಿಗೆ ಸೋನು ಗೌಡ ಇತ್ತೀಚೆಗೆ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಸೋನು ಗೌಡಗೆ ಇನ್​ಸ್ಟಾಗ್ರಾಮ್​​ನಲ್ಲಿ 11 ಲಕ್ಷ ಫಾಲೋವರ್ಸ್ ಇದ್ದಾರೆ.

88
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ

ರೀಲ್ಸ್ ರಾಣಿ, ಬಿಗ್ ಬಾಸ್ ಕನ್ನಡದ ಒಟಿಟಿ ಸೀಸನ್ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಈ ಸೋನು ಸಾಕಷ್ಟು ಸಲ ಟ್ರೋಲ್ ಸಹ ಆಗಿದ್ದಾರೆ.

Read more Photos on
click me!

Recommended Stories