ಹಳದಿ ಶಾಸ್ತ್ರದಲ್ಲಿ ಮಿಂದೆದ್ದ Karna Serial ನಿಧಿ: ನಟಿ ಭವ್ಯಾ ಗೌಡ ಕ್ಯೂಟ್​ ವಿಡಿಯೋ ವೈರಲ್​

Published : Dec 03, 2025, 01:22 PM IST

'ಕರ್ಣ' ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಅವರ ಲವ್‌ಸ್ಟೋರಿ ಮತ್ತು ಚಿಕ್ಕಮಗಳೂರಿನ ಹುಡುಗನೊಂದಿಗಿನ ಸಂಬಂಧದ ಬಗ್ಗೆ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಅವರು ಅರಿಶಿಣ ಶಾಸ್ತ್ರದಲ್ಲಿ ಭಾಗವಹಿಸಿದ ವಿಡಿಯೋ ವೈರಲ್ ಆಗಿ, ಅಭಿಮಾನಿಗಳಲ್ಲಿ ಅವರ ಮದುವೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಏನದು?

PREV
17
ನಿಧಿ ರಿಯಲ್​ ಲವ್​ಸ್ಟೋರಿ

ಕರ್ಣ ಸೀರಿಯಲ್​ (Karna Serial) ನಿಧಿ ಪಾತ್ರದಲ್ಲಿ ಮಿಂಚುತ್ತಿರೋ ಭವ್ಯಾ ಗೌಡ ಅವರ ಲವ್​ಸ್ಟೋರಿ ಬಗ್ಗೆ ಇದಾಗಲೇ ರಿವೀಲ್​ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್‌ ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದ ಭವ್ಯಾ ಅವರ ಮಾತು ಇದೀಗ ನಿಜವಾಗಿ ಕಾಣಿಸುತ್ತಿದೆ.

27
ಚಿಕ್ಕಮಗಳೂರಿನ ಹುಡುಗ

ಚಿಕ್ಕಮಗಳೂರು ಮೂಲದ ಹುಡುಗನನ್ನು ಭವ್ಯಾ ಗೌಡ ಅವರು ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಮುಕ್ತವಾಗಿ ಕಾಮೆಂಟ್‌ ಕೂಡ ಮಾಡುತ್ತಿದ್ದಾರೆ, ಇನ್ನು ಭವ್ಯಾ ಗೌಡ ಅವರು ಹುಡುಗನ ಫೋಟೋ ಸಮೇತ ಅವರೇ ಅಧಿಕೃತವಾಗಿ ರಿವೀಲ್‌ ಮಾಡೋದು ಬಾಕಿ ಇದೆ.

37
ಫೋಟೋ ರಿವೀಲ್​

ಕೆಲ ದಿನಗಳ ಹಿಂದೆ ಅವರು ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿ ಸಹೋದರನ ಮದುವೆ ಎಂದು ಕ್ಯಾಪ್ಶನ್‌ ನೀಡಿ, ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳ ಮಧ್ಯೆ ಒಂದು ಫೋಟೋಕ್ಕೆ ದೃಷ್ಟಿ ತಾಕದೆ ಇರುವಂತೆ ಮಾಡುವ ಇಮೋಜಿ ಹಾಕಿದ್ದರು, ಆಗಲೇ ಭವ್ಯಾ ಗೌಡ ಅವರ ಪ್ರಿಯಕರ ಇವರೇ ಇರಬಹುದಾ ಎಂಬ ಪ್ರಶ್ನೆ ಬಂದಿತ್ತು.

47
ವಿಡಿಯೋ ವೈರಲ್​

ಹೀಗೆ ಹುಡುಗನ ಬಗ್ಗೆ ರಿವೀಲ್​ ಆಗುತ್ತಲೇ ಅರಿಶಿಣ ಶಾಸ್ತ್ರದಲ್ಲಿ ನಟಿ ಮಿಂದೆದ್ದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ಅನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

57
ಅರಿಶಿಣದಲ್ಲಿ ಚೆಲುವು

ತಮ್ಮ ಸ್ನೇಹಿತೆಯರ ಜೊತೆಯಲ್ಲಿ ಅರಿಶಿಣ ಬಣ್ಣದ ಡ್ರೆಸ್​ ಹಾಕಿಕೊಂಡಿರುವ ನಟಿ ಅರಿಶಿಣ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾರೆ. ಇವರಿಗೂ ಅರಿಶಿಣ ಹಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದು.

67
ಯಾರ ಮದುವೆ?

ಹಾಗೆಂದು ಇದೇನು ನಟಿ ಭವ್ಯಾ ಗೌಡ ಅವರ ಮದುವೆಯ ಅರಿಶಿಣ ಶಾಸ್ತ್ರವಲ್ಲ. ಈ ಬಗ್ಗೆ ನಟಿ ಯಾವುದೇ ಶೀರ್ಷಿಕೆ ಹಾಕದೇ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದರೂ, ಇದು ಅವರ ಸ್ನೇಹಿತರೊಬ್ಬರ ಮದುವೆಯ ಅರಿಶಿಣ ಶಾಸ್ತ್ರ ಎನ್ನುವುದು ತಿಳಿದಿದೆ.

77
ತಲೆ ಕೆಡಿಸಿಕೊಂಡ ಫ್ಯಾನ್ಸ್​

ಅರಿಶಿಣ ಶಾಸ್ತ್ರದಲ್ಲಿ ಭವ್ಯಾ ಕೂಡ ಡಾನ್ಸ್​ಗೆ ಸ್ಟೆಪ್​ ಹಾಕಿದ್ದಾರೆ. ಸಕತ್​ ಕ್ಯೂಟ್​ ಆಗಿ ಕಾಣಿಸುತ್ತಿದ್ದಾರೆ. ಹಲವರು ನಟಿಯದ್ದೇ ಮದುವೆ ಎಂದು ತಿಳಿದುಕೊಂಡು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವರು ಫುಲ್​ ಕನ್​ಫ್ಯೂಸ್​ ಆಗಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories