ಕರ್ಣ ಸೀರಿಯಲ್‌ನಲ್ಲಿ ರಮೇಶ್-ಮಾಲತಿ ಡಿವೋರ್ಸ್ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ತನ್ನ ಹೆತ್ತವರ ಕುರಿತ ಸತ್ಯದ ಜಾಡು ಹಿಡಿದಿರುವ ಕರ್ಣನಿಗೆ, ರಮೇಶ್‌ನ ನಿಜ ಸ್ವರೂಪದ ಬಗ್ಗೆ ಅನುಮಾನ ಮೂಡಿದೆ. ಹೆತ್ತಮ್ಮ ಮತ್ತು ಸಾಕಿದ ತಾಯಿಯ ನಡುವೆ ಕರ್ಣ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ?
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಮಾಲತಿ ಮತ್ತು ರಮೇಶ್ ಡಿವೋರ್ಸ್ ಪ್ರಕರಣ ನಡೆಯುತ್ತಿದೆ. ಮಾಲತಿ ಇಲ್ಲದೇ ರಮೇಶ್ಗೆ ಪೇಚಾಟ ಆಗುತ್ತಿದೆ. ಎಲ್ಲದಕ್ಕೂ ಪತ್ನಿಯ ಮೇಲೆ ಅವಲಂಬಿತ ಆಗಿರೋ ರಮೇಶ್ಗೆ ಏನು ಮಾಡುವುದಕ್ಕೂ ಕಷ್ಟ ಆಗ್ತಿದೆ. ಇದನ್ನೇ ಮನೆಯಲ್ಲಿ ಎಲ್ಲರೂ ಬಯಸಿದ್ದು.
26
ಕರ್ಣನಿಗೆ ಡೌಟ್
ಆದರೆ, ಪದೇಪದೇ ಡಿವೋರ್ಸ್ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಕರ್ಣನಿಗೆ ರಮೇಶ್ ಮೇಲೆ ಏನೋ ಡೌಟ್ ಬಂದಿದೆ. ಬಳಿಕ ಇದ್ದಕ್ಕಿದ್ದ ಹಾಗೆ ಸೀತಾಳ ಬಗ್ಗೆ ಅನುಮಾನ ಶುರುವಾಗಿದೆ. ಸೀತಾಳ ಹೆಸರು ಹೇಳುತ್ತಿದ್ದಂತೆಯೇ, ರಮೇಶ್ನಲ್ಲಿ ಆದ ಬದಲಾವಣೆ ಕಂಡ ಅವನಿಗೆ, ಪದೇ ಪದೇ ಡಿವೋರ್ಸ್ ವಿಷಯ ಮಾತನಾಡುವುದಕ್ಕೂ, ಈ ಸೀತಾಗೂ ಲಿಂಕ್ ಇದ್ಯಾ ಎಂದು ಅವನು ಜಾಡು ಹಿಡಿದು ಹೊರಟಿದ್ದಾನೆ. ಅದೇ ಸೀತಾ ಉರ್ಫ್ ಭುವನೇಶ್ವರಿ ತನ್ನ ಹೆತ್ತಮ್ಮ ಎನ್ನುವುದು ಆತನಿಗೆ ತಿಳಿದಿಲ್ಲ.
36
ರಮೇಶ್ಗೆ ತಿಳಿಯಿತು ಸತ್ಯ
ಅದೇ ಇನ್ನೊಂದೆಡೆ, ಕರ್ಣನಿಗೆ ಅಪಘಾತ ಮಾಡಿಸಿದ್ದಾನೆ ರಮೇಶ್. ಆಗ ಅವನಿಗೆ ಬರುತ್ತಿದ್ದ ಫೋನ್ ಕಾಲ್ ಮೂಲಕ, ತಾನೇ ಕರ್ಣನ ಅಪ್ಪ ಎನ್ನುವ ಸತ್ಯ ಗೊತ್ತಾಗಿದೆ. ಹಾಗಿದ್ದರೆ ಅವನ ಮುಂದಿನ ನಡೆ ಏನು ಎನ್ನುವ ಬಗ್ಗೆ ಕುತೂಹಲವಿದೆ.
ಒಂದು ವೇಳೆ ಭುವನೇಶ್ವರಿಯೇ ತನ್ನ ಅಮ್ಮ ಎನ್ನುವುದು ಕರ್ಣನಿಗೆ ತಿಳಿದರೆ, ರಮೇಶ್ ತನ್ನ ಅಪ್ಪ ಎನ್ನುವುದು ತಿಳಿಯತ್ತದೆ. ಆಗ ಮಾಲತಿ ಗತಿ?
56
ಹೆತ್ತಮ್ಮ v/s ಸಾಕಮ್ಮ
ತನ್ನ ಹೆತ್ತ ಅಮ್ಮ ಮತ್ತು ಅಪ್ಪನನ್ನು ಕರ್ಣ ಒಂದು ಮಾಡ್ತಾನಾ ಅಥವಾ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರೋ ಸಾಕು ಅಮ್ಮ ಮಾಲತಿ ಮತ್ತು ರಮೇಶ್ ಒಗ್ಗಟ್ಟಾಗಿ ಇರುವಂತೆ ಮಾಡುತ್ತಾನಾ?
66
ಮುಂದೇನು?
ಸದ್ಯ ಯಾರೂ ಊಹಿಸದ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಕರ್ಣ ಸೀರಿಯಲ್ (Karna Serial). ಮುಂದೇನು ಮುಂದೇನು ಎನ್ನುವ ಕುತೂಹಲವನ್ನು ಕೆರಳಿಸುತ್ತಾ ಸಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.