Karna Serial: ಹೀಗಾದಾಗಲೆಲ್ಲಾ ಕೆಲ ನಿರ್ದೇಶಕರು ಧಾರಾವಾಹಿಯ ದಿಕ್ಕನ್ನೇ ಬದಲಾಯಿಸಿದ್ದೂ ಉಂಟು. ಸದ್ಯ ಕರ್ಣ ಧಾರಾವಾಹಿಯಲ್ಲಿ ಅದೊಂದು ವಿಚಾರದ ಬಗ್ಗೆ ವೀಕ್ಷಕರಿಗೆ ಅರ್ಥವಾಗುತ್ತಿಲ್ಲ. ಅದೇನು? ಯಾಕೆ ಅಂತ ಮುಂದೆ ಓದಿ..
ನಮ್ಮ ಧಾರಾವಾಹಿ ವೀಕ್ಷಕರು ಬಹಳ ಬುದ್ಧಿವಂತರು. ಚಿಕ್ಕ ಚಿಕ್ಕ ವಿಚಾರವನ್ನೂ ನೋಟಿಸ್ ಮಾಡ್ತಾರೆ. ಅದನ್ನ ನಿರ್ದೇಶಕರ ಗಮನಕ್ಕೂ ತರ್ತಾರೆ. ಹೀಗಾದಾಗಲೆಲ್ಲಾ ಕೆಲ ನಿರ್ದೇಶಕರು ಧಾರಾವಾಹಿಯ ದಿಕ್ಕನ್ನೇ ಬದಲಾಯಿಸಿದ್ದು ಉಂಟು. ಸದ್ಯ ಕರ್ಣ ಧಾರಾವಾಹಿಯಲ್ಲಿ ಅದೊಂದು ವಿಚಾರದ ಬಗ್ಗೆ ವೀಕ್ಷಕರಿಗೆ ಅರ್ಥವಾಗುತ್ತಿಲ್ಲ. ಅದೇನು? ಯಾಕೆ ಅಂತ ಮುಂದೆ ಓದಿ..
26
ನಿತ್ಯಾಗೂ ಆ ಸತ್ಯ ತಿಳಿದಿದೆ
ಸದ್ಯ ತೇಜಸ್‌ನನ್ನು ಹುಡುಕಿಕೊಂಡು ಕರ್ಣ-ನಿತ್ಯಾ ಚಿಕ್ಕಮಗಳೂರಿಗೆ ಬಂದಿದ್ದಾರೆ. ಆದರೆ ತೇಜಸ್‌ನನ್ನು ಅಲ್ಲಿಂದ ಶಿಫ್ಟ್ ಮಾಡಲು ತಯಾರಿ ನಡೆಸುತ್ತಿರುವಾಗಲೇ ಈಗ ನಿತ್ಯಾಗೆ ಮತ್ತೊಂದು ಅಘಾತ ಎದುರಾಗಿದೆ. ಇಷ್ಟು ದಿನ ಈ ವಿಚಾರ ಕರ್ಣನಿಗೆ ಮಾತ್ರ ಗೊತ್ತಿತ್ತು. ಆದರೆ ಈಗ ನಿತ್ಯಾಗೂ ಆ ಸತ್ಯ ತಿಳಿದಿದೆ.
36
ಸೈಲೆಂಟಾಗಿದ್ದ ಕರ್ಣ
ಹೌದು. ಯಾವ ವಿಷಯವನ್ನು ಮುಚ್ಚಿಟ್ಟು ಕರ್ಣ ನಿತ್ಯಾಗೆ ಆರೈಕೆಯಲ್ಲಿ ತೊಡಗಿದ್ದನೋ ಅದೇ ವಿಚಾರ ಈಗ ನಿತ್ಯಾಗೂ ತಿಳಿದಿದೆ. ಮದುವೆ ಶಾಸ್ತ್ರ ಮುಗಿಯುವ ಹೊತ್ತಿಗೆ ಕರ್ಣನಿಗೆ ನಿತ್ಯಾ ಪ್ರೆಗ್ನೆಂಟ್ ಅನ್ನೋ ವಿಚಾರ ಗೊತ್ತಾಗಿರುತ್ತದೆ. ಆದರೆ ಮೊದಲೇ ಶಾಕ್‌ನಲ್ಲಿದ್ದ ನಿತ್ಯಾಗೆ ಈ ವಿಚಾರ ತಿಳಿಸುವುದು ಬೇಡವೆಂದು ಸೈಲೆಂಟಾಗಿ ಇರ್ತಾನೆ ಕರ್ಣ.
ನಿತ್ಯಾ ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದಾಗ, ಮೊನ್ನೆಯಷ್ಟೇ ಸ್ವಿಮ್ಮಿಂಗ್‌ಪೂಲ್‌ಗೆ ಬಿದ್ದಾಗ ಮಗುವಿನಂತೆ ಆರೈಕೆ ಮಾಡಿದ್ದ ಕರ್ಣ. ಆಗೆಲ್ಲಾ ನಿತ್ಯಾ, "ಯಾಕಿಷ್ಟು ಕೇರ್ ಮಾಡ್ತೀರಾ"? ಅಂದಾಗ "ನೀವು ಸ್ಟ್ರೆಸ್‌ನಲ್ಲಿದ್ದೀರಿ ಅದಕ್ಕೆ ಈ ಮಾತ್ರೆ ತೆಗೆದುಕೊಳ್ಳಿ" ಎಂದು ಸತ್ಯ ಮರೆಮಾಚುತ್ತಿದ್ದ ಕರ್ಣ.
56
ಬಯಲಾಗಿದೆ ಸತ್ಯ
ಆದರೀಗ ಸತ್ಯ ಬಯಲಾಗಿದೆ. ಕಾರ್‌ನಲ್ಲಿದ್ದ ತೇಜಸ್‌ನನ್ನು ನೋಡಿದ ಕೂಡಲೇ ತನ್ನ ಹಿಂದೆ ಬರುತ್ತಿರುವ ವಾಹನವನ್ನೂ ಗಮನಿಸದೆಯೇ ಕಾರ್ ಹಿಂದೆ ಹಿಂದೆಯೇ ಓಡಿ ಹೋಗಿದ್ದಾಳೆ ನಿತ್ಯಾ. ಆಗ ಆಕೆಯನ್ನು ಕೈ ಹಿಡಿದು ಎಳೆದಿದ್ದಾನೆ ಕರ್ಣ. ಆಗ ನಿತ್ಯಾ "ನನ್ನ ಬಗ್ಗೆ ಯಾಕೆ ನಿಮಗಿಷ್ಟು" ಕಾಳಜಿ ಅಂದಾಗ ಕರ್ಣ, "ನನಗೆ ಕಾಳಜಿ ಇರೋದು ನಿಮ್ಮ ಮೇಲಲ್ಲ ನಿಮ್ಮ ಹೊಟ್ಟೆಯಲ್ಲಿರು ಮಗು ಮೇಲೆ..." ಅಂದಿದ್ದಾನೆ. ನಿತ್ಯಾಗೆ ಶಾಕ್ ಆಗುತ್ತದೆ. ಸದ್ಯ ವೀಕ್ಷಕರಿಗೆ ಈ ಬಗ್ಗೆ ಒಂದಿಷ್ಟು ಪ್ರಶ್ನೆಗಳಿವೆ.. ಅದೇನೆಂದು ನೋಡುವುದಾದರೆ..
66
ಈ ಕುರಿತು ವೀಕ್ಷಕರ ಕಾಮೆಂಟ್ಸ್
ನಿತ್ಯಾ ಹೆಣ್ಣುಮಗಳಾಗಿ ಆಕೆಗೆ ತಾನು ಗರ್ಭಿಣಿ ಎಂಬ ವಿಚಾರ ಗೊತ್ತಿರಲಿಲ್ಲವೇ ಅಥವಾ ಗೊತ್ತಿರುವುದಕ್ಕೇ ಆಕೆ ಅಜ್ಜಿ ಬಳಿ ಬೇಗ ಮದುವೆಯಾಗಲು ಒತ್ತಾಯ ಮಾಡಿದಳೇ ಎಂಬುದು. ಈ ಕುರಿತು ವೀಕ್ಷಕರ ಕಾಮೆಂಟ್ಸ್ ಹೀಗಿದೆ ನೋಡಿ… *ಸದ್ಯ delivery ಆಗುವ ಮೊದಲು ನಿತ್ಯಾಗೆ ಗೊತ್ತಾಯಿತು ಅನ್ನೋದು ದೊಡ್ಡ ವಿಷಯ. *ನಿತ್ಯಾಗೆ ಅವಳು ಪ್ರೆಗ್ನೆಂಟ್ ಅನ್ನೋದ್ ಗೊತ್ತು, ಅದೇ ಕಾರಣಕ್ಕೆ ಅವಳು 15 ದಿನಗಳಲ್ಲಿ ಮದುವೆಯಾಗ್ಬೇಕು ಅಂತ ಅಜ್ಜಿಗೆ ಫೋರ್ಸ್ ಮಾಡಿದ್ಲು. *ನಿತ್ಯ ಗರ್ಭಿಣಿ ಆದ್ರೂ ಅವಳಿಗೆ ಗೊತ್ತಿಲ್ಲ. *ಅದೇ ಅವ್ಳ ಸ್ಥಿತಿ ಅವಳಿಗೆ ಗೊತ್ತಿಲ್ವ, ಎನ್ ಡೈರೆಕ್ಟರ್. *ಕ್ಷಮಿಸಿ ನಿತ್ಯಾ. ನಿಮಗೆ ಇದು ಗೊತ್ತಿಲ್ಲ. ನಿಜವಾಗಿಯೂ ಎಲ್ಲಾ ಮಹಿಳೆಯರಿಗೆ 45 ದಿನಗಳಲ್ಲಿ ತಿಳಿದಿತ್ತು. ಕಥೆ ಹೇಗೆ ಹೀಗಿದೆ ಎಂದು ಆಶ್ಚರ್ಯವಾಗುತ್ತದೆ.