BBK 12: ಆ ಪೋಲಿ ಬಡ್ಡೆತವು ನನ್ನ ಹೆಸರು ಹಾಳುಮಾಡಿದ್ರು; ಕೊನೆಗೂ ಬೇಸರ ಹೊರಹಾಕಿದ Gilli Nata

Published : Nov 05, 2025, 04:39 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಹೆಸರು ಭಾರೀ ಸೌಂಡ್‌ ಮಾಡ್ತಿದೆ. ಇದೇನು ಹೆಸರಿನ ಮುಂದೆ ಗಿಲ್ಲಿ ಅಂತ ಇದೆ, ಯಾಕೆ ಎಂದು ಕೆಲವರಿಗೆ ಸಂದೇಹ ಇರಬಹುದು. ಈಗ ಕಾವ್ಯ ಶೈವ ಅವರು ಗಿಲ್ಲಿ ನಟನ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, ಆಸಕ್ತಿಕರ ವಿಷಯವೊಂದು ರಿವೀಲ್‌ ಆಗಿದೆ. 

PREV
15
ಮಂಡ್ಯದ ನಟರಾಜ್‌

ನಟರಾಜ್‌ ಅವರು ಮಂಡ್ಯದವರು, ಅಲ್ಲಿಯೇ ಹುಡುಗರ ಜೊತೆ ಗಿಲ್ಲಿ ಆಡುತ್ತಿದ್ದರು. ಹೀಗಾಗಿ ಗಿಲ್ಲಿ ಎಂದು ಕರೆಯುತ್ತಿದ್ದರಂತೆ. ಈಗ ಗಿಲ್ಲಿ ನಟ ಹೆಸರು ಕರ್ನಾಟಕದಾದ್ಯಂತ ಫೇಮಸ್‌ ಆಗಿದೆ.

25
ಕಾಮಿಡಿ ವಿಡಿಯೋಗಳು

ಗಿಲ್ಲಿ ನಟ ಅವರು ಹತ್ತನೇ ತರಗತಿ ಓದಿದ್ದು, ಆಮೇಲೆ ಐಟಿಐ ಮಾಡಿದ್ದರು. ಆಮೇಲೆ ಓದಲಿಲ್ಲ. ನಲ್ಲಿಮೂಳೆ ಸೇರಿದಂತೆ ಕನ್ನಡದಲ್ಲಿ ಕೆಲ ವೆಬ್‌ ಸಿರೀಸ್‌ಗಳನ್ನು ಮಾಡಿದ್ದರು. ಅವೆಲ್ಲವೂ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿತ್ತು. ಇದರಿಂದಲೇ ಫೇಮಸ್‌ ಆದರು.

35
ಯಶ್‌ ಡೈಲಾಗ್‌ ರಿಪೀಟ್‌ ಮಾಡಿದ್ರು

ಗಿಲ್ಲಿ ನಟ ಅವರಿಗೆ ಕಾವ್ಯ ಶೈವ ಅವರು, “ನಿನಗೆ ಯಾಕೆ ಎಲ್ಲರೂ ಗಿಲ್ಲಿ ಅಂತ ಕರೆಯುತ್ತಾರೆ?” ಎಂದು ಪ್ರಶ್ನೆ ಮಾಡಿದ್ದರು. ಆಗ ಗಿಲ್ಲಿ ನೀಡಿದ ಉತ್ತರವೂ, ಕಿರಾತಕ ಸಿನಿಮಾದಲ್ಲಿ ಯಶ್‌ ಡೈಲಾಗ್‌ ಎರಡೂ ಸೇಮ್‌ ಇದೆ. ಇದೀಗ ವೈರಲ್‌ ಆಗ್ತಿದೆ.

45
ಆ ಪೋಲಿಗಳು ಹೆಸರು ಇಟ್ಟರು

“ನನ್ನ ಹೆಸರು ನಟರಾಜ್‌ ಅಂತ. ನನ್ನ ಜೊತೆಗಿದ್ದ ಪೋಲಿ ಬಡ್ಡೆತಾವು ಗಿಲ್ಲಿ ಗಿಲ್ಲಿ ಅಂತ ಕರೆದು ನನ್ನ ಹೆಸರು ಹಾಳು ಮಾಡಿದ್ದಾರೆ” ಎಂದು ಗಿಲ್ಲಿ ನಟ ಹೇಳಿದ್ದಾರೆ. ಆಗ ಕಾವ್ಯ “ನಾನು ಇನ್ಮುಂದೆ ನಿನ್ನನ್ನು ನಟರಾಜ್‌ ಅಂತ ಕರೆಯುತ್ತೇನೆ” ಎಂದಿದ್ದಾರೆ. ಆಗ ಗಿಲ್ಲಿ, “ಸುಮ್ನಿರು, ನಾಚಿಕೆ ಆಗುವುದು” ಎಂದು ಹೇಳಿದ್ದಾರೆ.

55
ಫುಲ್‌ ವೈರಲ್‌ ಆಗ್ತಿರೋ ವಿಡಿಯೋ

ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಈ ವಿಡಿಯೋ ಕ್ಲಿಪ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಗಿಲ್ಲಿ ನಟನ ಆಟ ಎಲ್ಲರಿಗೂ ಇಷ್ಟ ಆಗಿದ್ದು, ಗಿಲ್ಲಿಗೋಸ್ಕರ ಆಟ ಆಡುತ್ತಿದ್ದೇವೆ ಎಂದು ಹೇಳುತ್ತಿದ್ದೇವೆ ಎನ್ನುವವರ ಸಂಖ್ಯೆ ಹೆಚ್ಚಾಗಿದೆ.

Read more Photos on
click me!

Recommended Stories