Karna Serial: ತಾನು ಪ್ರೀತಿಸಿದ ಹುಡುಗ ಬೇರೊಬ್ಬಳ ತೆಕ್ಕೆಯಲ್ಲಿ; ನಿತ್ಯಾಳ ಮನದಲ್ಲಿ ಯುದ್ಧ? ತಂಗಿಗೆ ಅಕ್ಕನೇ ವಿಲನ್​

Published : May 19, 2026, 08:34 PM IST

ಕರ್ಣ ಮತ್ತು ನಿಧಿ ಮದುವೆಯಾಗುತ್ತಿದ್ದು, ಇದಕ್ಕಾಗಿ ನಿತ್ಯಾ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ. ಆದರೆ ಕರ್ಣನ ಮೇಲೆ ಪ್ರೀತಿಯಿರುವ ನಿತ್ಯಾ, ತನ್ನ ಪ್ರೇಮಿಯನ್ನು ತಂಗಿಯೊಂದಿಗೆ ನೋಡಿ ಸಹಿಸಲಾಗದೆ ವಿಲನ್ ಆಗಿ ಬದಲಾಗುತ್ತಾಳಾ ಎಂಬ ಕುತೂಹಲ ಸದ್ಯದ ಕಥೆಯಾಗಿದೆ.

PREV
15
ರೋಚಕ ಟ್ವಿಸ್ಟ್​

ಸದ್ಯ ಕರ್ಣ ಸೀರಿಯಲ್​ನಲ್ಲಿ (Karna Serial) ರೋಚಕ ಟ್ವಿಸ್ಟ್​ ಸಿಕ್ಕಿದೆ. ಕರ್ಣ ಮತ್ತು ನಿಧಿಯ ಮದುವೆಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಅಂತೂ ಭರ್ಜರಿ ಗುಡ್​ನ್ಯೂಸ್​​ ಸಿಕ್ಕಿದೆ. ಅಕ್ಕನಿಗಾಗಿ ತಂಗಿ, ತಂಗಿಗಾಗಿ ಅಕ್ಕ ತಮ್ಮ ಪ್ರೀತಿಯನ್ನು ತ್ಯಾಗ ಮಾಡಲು ನೋಡಿ ಕೊನೆಗೂ ಅಸಲಿ ಪ್ರೇಮಿಗಳು ಒಂದಾಗಿದ್ದಾರೆ. ಆ ಹಂತದಲ್ಲಿ ನಿಧಿ ತಂಗಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ.

25
ಕರ್ಣನ ಮೇಲೆ ಪ್ರೀತಿ

ಆದರೆ, ಆಕೆಯ ಮನಸ್ಸಿನಲ್ಲಿ ಕರ್ಣನ ಮೇಲೆ ಅದಮ್ಯ ಪ್ರೀತಿ ಇದೆ. ಅದನ್ನುತುಂಬಿದವ ಖುದ್ದು ರಮೇಶ್​. ನಿನಗೋಸ್ಕರ ಅಲ್ಲದಿದ್ದರೂ, ಮಗುವಿನ ಬಗ್ಗೆ ಯೋಚಿಸು, ಕರ್ಣನೇ ನಿನಗೆ ಬೆಸ್ಟ್​. ತಂಗಿಯ ಬಗ್ಗೆ ಯೋಚಿಸಬೇಡ ಎಂದೆಲ್ಲಾ ತಲೆತುಂಬಿದ್ದ.ಆದರೆ, ನಿತ್ಯಾ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಕರ್ಣನನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದ ನಿತ್ಯಾ, ತಂಗಿ ಮತ್ತು ಕರ್ಣನ ಪ್ರೀತಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿದ್ಲು.

35
ಪ್ರೀತಿ ಮರೆಯೋದು ಸುಲಭನಾ?

ಹಾಗೆಂದು ಆ ಪ್ರೀತಿ ಹೋಗತ್ತಾ? ಮದುವೆಯಾದ ಮೇಲೆ ಕಥೆಯಂತೂ ಮುಗಿದಿಲ್ಲ. ಈಗ ಇನ್ನೊಂದು ಹಂತ ಶುರುವಾಗೋದಂತೂ ಗ್ಯಾರೆಂಟಿ. ಹಾಗೆಂದು ತೇಜಸ್​ ವಾಪಸ್​ ಬಂದು ಎಲ್ಲಾ ಸರಿಹೋಗತ್ತೆ ಎಂದರೆ ಸೀರಿಯಲ್​ ಮುಗಿಯಲ್ಲ. ಹಾಗಿದ್ರೆ ಮುಂದೇನು?

45
ಕರ್ಣನ ಮೇಲೆ ಲವ್​

ನಿತ್ಯಾಳಿಗೆ ಕರ್ಣನ ಮೇಲೆ ಲವ್​ ಆಗಿದೆ. ಆ ಕ್ಷಣದಲ್ಲಿ ತಂಗಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿರುವ ನಿತ್ಯಾಗೆ ಅವರಿಬ್ಬರೂ ಲವ್​ ಮಾಡ್ತಿರೋದನ್ನು ಖಂಡಿತವಾಗಿಯೂ ನೋಡಲು ಆಗುವುದಿಲ್ಲ. ಏಕೆಂದರೆ ಒಂದು ಆಕೆಯ ಪ್ರೀತಿ, ಇನ್ನೊಂದು ಮಗುವಿಗಾಗಿ ಹಂಬಲ. ಅಷ್ಟಕ್ಕೂ ಮಗುವಿನ ಕೈಹಿಡಿಯುವುದಾಗಿ ಕರ್ಣ ಹೇಳಿದ್ದ. ಅಪ್ಪ ತಾನೇ ಎನ್ನುವ ಅರ್ಥದಲ್ಲಿ ಮಾತನಾಡಿ ನಿತ್ಯಾಳ ಮನಸ್ಸಿನಲ್ಲಿ ಒಂದರ್ಥದಲ್ಲಿ ಪ್ರೀತಿ ಮೂಡುವ ಹಾಗೆಯೂ ಮಾಡಿದ್ದ.

55
ಬೇರೆಯವರ ತೆಕ್ಕೆಯಲ್ಲಿ

ಇಷ್ಟೆಲ್ಲಾ ಆದ ಮೇಲೆ ನಿತ್ಯಾ ತನ್ನ ಕಣ್ಣೆದುರೇ ತನ್ನ ಪ್ರೇಮಿ ಬೇರೊಬ್ಬಳ ತೆಕ್ಕೆಯಲ್ಲಿ ಇರುವುದನ್ನು ನೋಡಿಯಾಳೇ? ಸೈಕಾಲಾಜಿ ಪ್ರಕಾರ ಹೋದರೂ ಇದು ನಿತ್ಯಾಳಂಥ ಹೆಣ್ಣಿಗೆ ತುಂಬಾ ಕಷ್ಟದ ಮಾತೇ. ಅಷ್ಟಕ್ಕೂ ಸೀರಿಯಲ್​ನಲ್ಲಿ ಒಬ್ಬಳು ವಿಲನ್​ ಬೇಕೇ ಬೇಕು. ಸದ್ಯ ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ಬೇರೆ ಲೇಡಿ ವಿಲನ್​ಗಳು ಇಲ್ಲ. ಹಾಗಿದ್ರೆ ನಿತ್ಯಾಳೇ ವಿಲನ್ ಆಗ್ತಾಳಾ ಎನ್ನುವ ಅನುಮಾನವೂ ಇದೆ. ಆದರೆ ಹಾಗಾಗದಿರಲಿ ಎನ್ನುವುದು ನಿತ್ಯಾಳ ಫ್ಯಾನ್ಸ್​ ಮನವಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories