ವಿದೇಶದಲ್ಲೂ ನಿಷಿದ್ಧವಾದ ಕೆಲಸವನ್ನು ಮಾಡಿದ ಬಿಗ್‌ ಬಾಸ್ Sonu Srinivas Gowda; ಜನರಿಂದ ಆಕ್ರೋಶ!

Published : May 19, 2026, 04:50 PM IST

Bigg Boss Sonu Srinivas Gowda: ಬಿಗ್‌ ಬಾಸ್‌ ಕನ್ನಡ ಒಟಿಟಿ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ಇತ್ತೀಚೆಗೆ ಅವರು ಒಂದಲ್ಲ ಒಂದು ವಿದೇಶಿ ಪ್ರವಾಸಗಳನ್ನು ಮಾಡುತ್ತಿರುತ್ತಾರೆ. ಅಲ್ಲಿ ಅವರ ನಡೆಗೆ ಬೇಸರ ವ್ಯಕ್ತವಾಗಿದೆ. 

PREV
14
ಸೋನು ಗೌಡ ಕ್ಯಾರೆ ಎನ್ನಲ್ಲ

Bigg Boss Sonu Srinivas Gowda:‌ ಈಗಾಗಲೇ ಖಾಸಗಿ ವಿಡಿಯೋ ಮೂಲಕ ಸೋನು ಗೌಡ ಅವರು ದೊಡ್ಡ ವಿವಾದಕ್ಕೆ ಗುರಿಯಾಗಿದ್ದರು. ಕನ್ನಡದಲ್ಲಿ ಅತಿ ಹೆಚ್ಚು ಟ್ರೋಲ್‌ ಆಗಿರುವ ಸೋನು ಗೌಡ ಈಗ ಯಾರಿಗೂ ಕ್ಯಾರೆ ಎನ್ನದೆ, ಯುಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದಾರೆ. ಅಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತ, ಬೋಲ್ಡ್‌ ಡ್ರೆಸ್‌ ಪ್ರದರ್ಶನ ಮಾಡೋದುಂಟು.

24
ಸಿಗರೇಟ್‌ ಬೇಕು

ಸೋನು ಶ್ರೀನಿವಾಸ್‌ ಗೌಡ ಅವರು ಮಾಲ್ಡೀವ್ಸ್‌ಗೆ ಹೋದಾಗ ಅಲ್ಲಿ ಸಿಗರೇಟ್‌ ಸೇದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೂ ಕೂಡ ಅವರು ಸಿಗರೇಟ್‌ ಬೇಕು ಎಂದು ಒಪನ್‌ ಆಗಿ ಹೇಳಿದ್ದುಂಟು. ಈಗ ಮಾಲ್ಡೀವ್ಸ್‌ಗೆ ಹೋಗಿ ಸಿಗರೇಟ್‌ ಸೇದಿದ ವಿಷಯವನ್ನು ಅವರು ಹೇಳಿದ್ದರು.

34
ವಿದೇಶದಲ್ಲಿ ದುಬಾರಿ ರೇಟ್‌

ಭಾರತದಲ್ಲಿ ಒಂದು ಪ್ಯಾಕ್‌ಗೆ 400 ರೂಪಾಯಿ ಕೊಡುತ್ತಿದ್ದ ಸೋನು ಗೌಡ ಅವರು, ಮಾಲ್ಡೀವ್ಸ್‌ನಲ್ಲಿ 2400 ರೂಪಾಯಿ ಕೊಟ್ಟಿದ್ದರಂತೆ. ಇದನ್ನು ಅವರು ಹೇಳಿಕೊಂಡಿದ್ದಾರೆ. ಸ್ಟೈಲ್‌ಗೋಸ್ಕರ ನಾನು ಸಿಗರೇಟ್‌ ಸೇದುವೆ ಎಂದು ಕೂಡ ಹೇಳಿದ್ದಾರೆ.

44
ಜನರಿಂದ ನಿಂದನೆ

ಈ ಹಿಂದೆ ಸೋನು ಗೌಡ ಅವರು ಮದ್ಯ ಸೇವನೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿತ್ತು. ಇದನ್ನು ಸೋನು ಗೌಡ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಯುಟ್ಯೂಬ್‌ ಚಾನೆಲ್‌ನಲ್ಲಿ ಸೋನು ಗೌಡ ಅವರ ಸಿಗರೇಟ್‌ ಸ್ಟೋರಿ ನೋಡಿದವರು, ನೆಗೆಟಿವ್‌ ಆಗಿ ಮಾತನಾಡುತ್ತಿದ್ದಾರೆ. ಈ ರೀತಿ ಮಾಡೋದು ತಪ್ಪು, ಸಿಗರೇಟ್‌ ಸೇದಬೇಡ, ಇದನ್ನೆಲ್ಲ ಪ್ರಚಾರ ಮಾಡಬೇಡ ಎಂದೆಲ್ಲ ಬೈಯ್ಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories