'ಅಗ್ನಿಸಾಕ್ಷಿ'ಯ ಸೂಪರ್ ಹಿಟ್ ಜೋಡಿ ಸಿದ್ದಾರ್ಥ್-ಸನ್ನಿಧಿ ಕಿರುತೆರೆಗೆ ಜೊತೆಯಾಗಿ ಕಂ ಬ್ಯಾಕ್!

Published : Jun 04, 2026, 02:48 PM IST

ಕನ್ನಡ ಕಿರುತೆರೆಯ ಬ್ಲಾಕ್ ಬಸ್ಟರ್ ಧಾರಾವಾಹಿ ‘ಅಗ್ನಿ ಸಾಕ್ಷಿ’ಯ ಸೂಪರ್ ಹಿಟ್ ಜೋಡಿ ಸಿದ್ದಾರ್ಥ್ ಮತ್ತು ಸನ್ನಿಧಿ ಇದೀಗ ಮತ್ತೆ ಜೊತೆಯಾಗಿ ಕಿರುತೆರೆಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಇಬ್ಬರು ಒಂದೇ ಧಾರಾವಹಿಯಲ್ಲಿ ಜೊತೆಯಾಗಿ ಬರುತ್ತಿಲ್ಲ. ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

PREV
15
ಅಗ್ನಿ ಸಾಕ್ಷಿಯ ಸೂಪರ್ ಹಿಟ್ ಜೋಡಿ

ಕನ್ನಡ ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ ಅಂದ್ರೆ ಅದು ‘ಅಗ್ನಿ ಸಾಕ್ಷಿ’. ಈ ಧಾರಾವಾಹಿ ಬರೊಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿದೆ. ಅಷ್ಟೇ ಅಲ್ಲ, ಈ ಧಾರಾವಾಹಿಯ ಸಿದ್ದಾರ್ಥ್ ಮತ್ತು ಸನ್ನಿಧಿ ಜೋಡಿ ಸಹ ಸೂಪರ್ ಹಿಟ್. ಒಂದು ಕಾಲದಲ್ಲಿ ಜನಮನ ಗೆದ್ದ ಈ ಡಿಂಪಲ್ ಜೋಡಿಗಳು ಇದೀಗ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಒಂದೇ ಧಾರಾವಾಹಿ ಮೂಲಕ ಅಲ್ಲ.

25
ಸಿದ್ದಾರ್ಥ್-ಸನ್ನಿಧಿ ಕಂ ಬ್ಯಾಕ್

ಸಿದ್ಧಾರ್ಥ್ ಪಾತ್ರದ ಮೂಲಕ ಜನ ಮನಗೆದ್ದ ನಟ ವಿಜಯ್ ಸೂರ್ಯ ಮತ್ತು ನಾಯಕಿ ಸನ್ನಿಧಿ ಪಾತ್ರದ ಮೂಲಕ ಮನೆಮಾತಾದ ವೈಷ್ಣವಿ ಗೌಡ, ಇದೀಗ ವರ್ಷಗಳ ಬಳಿಕ ಕಿರುತೆರೆಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ‘ಅಗ್ನಿಸಾಕ್ಷಿ’ ಹೆಸರಲ್ಲಿ ಹೊಸ ಧಾರಾವಾಹಿ ಹೊರ ಬರುತ್ತಿರುವ ಹೊತ್ತಿಗೆ ಇದೀಗ ಈ ಜೋಡಿ ಕಂ ಬ್ಯಾಕ್ ಮಾಡುತ್ತಿದ್ದಾರೆ.

35
ಬೇರೆ ಬೇರೆ ಧಾರಾವಾಹಿ ಮೂಲಕ ಕಿರುತೆರೆಗೆ

ವಿಜಯ್ ಸೂರ್ಯ ಮತ್ತು ವೈಷ್ಣವಿ ಗೌಡ ವರ್ಷಗಳ ಹಿಂದೆ ಕೊನೆಯ ಸೀರಿಯಲ್ ಮಾಡಿದ್ದರು. ಇದೀಗ ಇಬ್ಬರು ಒಂದೇ ಸಮಯಕ್ಕೆ ಎರಡು ಬೇರೆ ಬೇರೆ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡುವ ಮಾಹಿತಿ ಇದೆ. ಈ ಮಾಹಿತಿ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇಬ್ಬರೂ ಕೂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

45
ಸನ್ ಉದಯ ಟಿವಿಯಲ್ಲಿ ವೈಷ್ಣವಿ ಗೌಡ

ವೈಷ್ಣವಿ ಗೌಡ ‘ಸನ್ ಉದಯ’ದಲ್ಲಿ ಶೀಘ್ರವೇ ಪ್ರಸಾರವಾಗಲಿರುವ ‘ಗೆಳತಿ ಗಾಯತ್ರಿ’ ಎನ್ನುವ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈ ಧಾರಾವಾಹಿಯಲ್ಲಿ ಕೃತಿಕಾ ರವೀಂದ್ರ ಕೂಡ ನಟಿಸುತ್ತಿದ್ದಾರೆ. ಆದರೆ ಈ ಧಾರಾವಾಹಿ ಬಗ್ಗೆ ಇಲ್ಲಿವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

55
ಜೀ ಕನ್ನಡದಲ್ಲಿ ವಿಜಯ್ ಸೂರ್ಯ

ಇನ್ನು ಎವರ್ ಗ್ರೀನ್ ನಟ ವಿಜಯ್ ಸೂರ್ಯ ಜೀ ಕನ್ನಡದಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ, ಈಗಾಗಲೇ ಪ್ರೊಮೋ ಮೂಲಕ ಸದ್ದು ಮಾಡುತ್ತಿರುವ ‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಈ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಹಾಗೂ ಕವಿತಾ ಗೌಡ ಕೂಡ ನಟಿಸುತ್ತಿದ್ದಾರೆ. ಧಾರಾವಾಹಿ ಪ್ರಸಾರವಾಗುತ್ತಿರುವ ದಿನಾಂಕ ಇನ್ನೂ ಪ್ರಕಟವಾಗಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories