ಸ್ನೇಹಿತ ಕಾರ್ತಿಕ್‌ ಮಹೇಶ್‌ಗೆ ಬಿಗ್ ಸರ್ಪೈಸ್ ನೀಡಿದ ನಮ್ರತಾ ಗೌಡ: ವಿಡಿಯೋ ವೈರಲ್

Published : Aug 17, 2026, 08:24 AM IST

'ಕರ್ಣ' ಸೀರಿಯಲ್‌ನಿಂದ ನಟಿ ನಮ್ರತಾ ಗೌಡ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಅವರು ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ.

PREV
15
ನಟಿ ನಮ್ರತಾ ಗೌಡ

ಕನ್ನಡ ಕಿರುತೆರೆ ಲೋಕದ ಬಹುಬೇಡಿಕೆಯ ನಟಿ ನಮ್ರತಾ ಗೌಡ ಸದ್ಯ ಕರ್ಣ ಸೀರಿಯಲ್‌ನಿಂದ ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ಹಲವು ದಿನಗಳಿಂದ ನಮ್ರತಾ ಗೌಡ ನಿರ್ವಹಿಸುತ್ತಿದ್ದ 'ನಿತ್ಯಾ' ಪಾತ್ರ ತೆರೆಯ ಮೇಲೆ ಬರುತ್ತಿಲ್ಲ. ಇದೀಗ ಸ್ನೇಹಿತ ಕಾರ್ತಿಕ್‌ ಮಹೇಶ್‌ ಅವರಿಗೆ ನಮ್ರತಾ ಗೌಡ ಸರ್ಪೈಸ್ ನೀಡಿದ್ದಾರೆ.

25
ನಟ ಕಾರ್ತಿಕ್ ಮಹೇಶ್ ಮತ್ತು ನಟಿ ನಮ್ರತಾ ಗೌಡ ಮದುವೆ?

ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಆಗಿರುವ ನಟ ಕಾರ್ತಿಕ್ ಮಹೇಶ್ ಮತ್ತು ನಟಿ ನಮ್ರತಾ ಗೌಡ ಮದುವೆ ಆಗ್ತಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳೋದುಂಟು. ಸೀತಾ ರಾಮ ರಾಜು ಸಿನಿಮಾ ಚಿತ್ರೀಕರಣದಲ್ಲಿ ಕಾರ್ತಿಕ್ ಮಹೇಶ್‌ ಬ್ಯುಸಿಯಾಗಿದ್ದಾರೆ.

35
ಶೂಟಿಂಗ್‌ ಸೆಟ್‌ಗೆ ಬಂದ ನಮ್ರತಾ ಗೌಡ

ಇದೀಗ ಕಾರ್ತಿಕ್ ಮಹೇಶ್ ನಟಿಸುತ್ತಿರುವ ಸಿನಿಮಾ ಶೂಟಿಂಗ್ ಸ್ಥಳಕ್ಕೆ ನಮ್ರತಾ ಗೌಡ ಭೇಟಿ ನೀಡುವ ಮೂಲಕ ಸರ್ಪೈಸ್ ನೀಡಿದ್ದಾರೆ. ಚಿತ್ರೀಕರಣ ಸ್ಥಳಕ್ಕೆ ನಮ್ರತಾ ಗೌಡ ಆಗಮಿಸಿರುವ ವಿಡಿಯೋವನ್ನು ಶೂಟಿಂಗ್ ಸಿಬ್ಬಂದಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

45
ನಿತ್ಯಾ ಪಾತ್ರ

ಶೂಟಿಂಗ್‌ ಸೆಟ್‌ಗೆ ಕಾರ್ತಿಕ್ ಅವರನ್ನ ಭೇಟಿಯಾಗಲು ನಮ್ರತಾ ಗೌಡ ಬಂದಿದ್ದರಾ ಅಥವಾ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದೀರಾ ಎಂಬುದರ ಬಗ್ಗೆ ಅಧಿಕೃತವಾಗಿ ತಿಳಿದು ಬಂದಿಲ್ಲ. ಇತ್ತ ಕರ್ಣ ಸೀರಿಯಲ್ ಬಗ್ಗೆಯೂ ನಮ್ರತಾ ಗೌಡ ಯಾವುದೇ ಮಾಹಿತಿಯನ್ನು ನೀಡಿಲ್ಲ. ನಿತ್ಯಾ ಪಾತ್ರ ಕೊನೆ ಆಯ್ತಾ ಅಥವಾ ಹೊಸ ಟ್ವಿಸ್ಟ್ ಜೊತೆ ನಿತ್ಯಾ ಬರಬಹುದು ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ.

55
ಮದುವೆ ಬಗ್ಗೆ ನಮ್ರತಾ ಮಾತು

ನನಗೆ ಮದುವೆಯಾಗುವುದು ಎಂದರೆ ತುಂಬಾ ಇಷ್ಟ. ಮದುವೆ ಬಗ್ಗೆ ಯಾರಾದ್ರೂ ಕೇಳಿದ್ರೆ ಸಹಜವಾಗಿ ಸಂಕೋಚ, ಮುಜುಗರ ಆಗುತ್ತದೆ. ಅಷ್ಟು ಓಪನ್​ ಅಪ್​ ಆಗಿ ಮಾತನಾಡಲು ನಾಚಿಕೆ ಆಗುತ್ತದೆ. ನನಗೂ ಮದುವೆ ಬಗ್ಗೆ ಕನಸು ಇದೆ. ಆದರೆ ಅದನ್ನು ಎಲ್ಲರ ಬಳಿಯೂ ಹೇಳಿಕೊಳ್ಳಲು ಆಗಲ್ವಲ್ಲಾ ಎಂದಿದ್ದಾರೆ ನಟಿ. ಅದೆಲ್ಲಾ ಸೀಕ್ರೇಟ್​ ಎಂದು ನಮ್ರತಾ ಗೌಡ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories