Karna Kannada serial latest news: ಕರ್ಣನಿಗೆ ಜೋಗತವ್ವ ಕಾಲ ಕಾಲಕ್ಕೆ ಮುನ್ಸೂಚನೆ ಕೊಡುತ್ತಲೇ ಬಂದಿದ್ದಾಳೆ. ನಿತ್ಯಾ ಮದುವೆಗೋಸ್ಕರ ಹಗಲಿರುಳು ಕಷ್ಟಪಡುತ್ತಿರುವ ಕರ್ಣ-ನಿಧಿಗೆ ಈಗ ಸ್ವತಃ ಜೋಗತವ್ವನೇ ಬಂದು ಮುಂದಿನ ದಾರಿ ಬಗ್ಗೆ ಸುಳಿವು ನೀಡಿದ್ದಾಳೆ.
ನಿತ್ಯಾ ಮದುವೆ ತಯಾರಿ ನಡೆಯುತ್ತಿದ್ದಂತೆ ಒಂದೊಂದೇ ಸತ್ಯ ಆಚೆ ಬರುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿದೆ. ನಿತ್ಯಾ ಮದ್ವೆಯಾಗೋದು ತಾನಿಷ್ಟಪಟ್ಟ ಹುಡುಗನ ಜೊತೆಗಲ್ಲ, ಆದರೆ ನಿಧಿ ಮಾತ್ರ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡುವ ಕರ್ಣನ ಕೈ ಹಿಡಿತಾಳೆ ಎಂಬುದು ಜೋಗತವ್ವ ಮಾತಿನಿಂದ ಸ್ಪಷ್ಟವಾಗುತ್ತಿದೆ. ಅಷ್ಟೇ ಅಲ್ಲ, ಜೋಗತವ್ವ ಕೊಟ್ಟಿರೊ ಸೂಚನೆ ವೀಕ್ಷಕರ ತಲೆಗೆ ಹುಳ ಬಿಟ್ಟಂಗಾಗಿದೆ.
26
ಸುಳಿವು ನೀಡಿದ ಜೋಗತವ್ವ
ಹೌದು. ನಿತ್ಯಾ ಮದುವೆಗೋಸ್ಕರ ಹಗಲಿರುಳು ಕಷ್ಟಪಡುತ್ತಿರುವ ಕರ್ಣ-ನಿಧಿಗೆ ಸ್ವತಃ ಜೋಗತವ್ವನೇ ಬಂದು ಮುಂದಿನ ದಾರಿ ಬಗ್ಗೆ ಸುಳಿವು ನೀಡಿದ್ದಾಳೆ. ಇದಕ್ಕೂ ಮುನ್ನ ರಮೇಶ್ ಸ್ವಂತ ಮಗ ಸಂಜಯ್ ಹಾಗೂ ನಿಧಿ ನಡುವೆ ಜಗಳ ನಡೆದಿದೆ. ನಿಧಿ ಸಂಜಯ್‌ಗೆ ವಿಶ್ ಮಾಡಲು ಬಂದರೆ ಆತ ಆ ಕೇಕ್ ಅನ್ನ ಅವರ ಅಮ್ಮನ ಮುಖಕ್ಕೆ ಬಳಿಯುವ ಪ್ರಯತ್ನ ಮಾಡುವಾಗ ನಿಧಿ ಕಪಾಳಕ್ಕೆ ಹೊಡೆಯುತ್ತಾಳೆ. ಆಗ ರೊಚ್ಚಿಗೆದ್ದ ಸಂಜಯ್ ನಿಧಿಯನ್ನು ಹಿಡಿದುಕೊಂಡು ಆಕೆಗೆ ಮುತ್ತಿಡಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ಕರ್ಣ ಬಂದು ಸಂಜಯ್ ಮೇಲೆ ಕೈ ಮಾಡ್ತಾನೆ.
36
ಇಲ್ಲೇ ಇರೋದು ಟ್ವಿಸ್ಟ್
ಇಷ್ಟೆಲ್ಲಾ ನಡೆದದ್ದನ್ನು ಗಮನಿಸುವ ರಮೇಶ್, ಮಗನಿಗೆ ಸಮಾಧಾನ ಮಾಡುತ್ತಾನೆ. ಕರ್ಣನಿಗೆ ಖೆಡ್ಡಾ ತೋಡಿರುವುದಾಗಿ ಹೇಳುತ್ತಾನೆ. ರಮೇಶ್ ತಂಗಿ ನೀವು ಖೆಡ್ಡಾ ತೋಡಿದರೆ ಎತ್ತೋಕೆ ನಿಧಿ ಇದ್ದಾಳಾಲ್ಲ ಎಂದಾಗ ಕರ್ಣ-ನಿಧಿ ಒಂದಾಗಲ್ಲ, ಅವನು ನಿತ್ಯಾ ಮದ್ವೆಯಾಗ್ತಾನೆ ಅಂದಿದ್ದಾನೆ. ಇಲ್ಲೇ ಇರೋದು ಟ್ವಿಸ್ಟ್.
ಈ ಮೊದಲೇ ಹೇಳಿದ ಹಾಗೆ ಜೋಗತವ್ವ ಕಾಲ ಕಾಲಕ್ಕೆ ಮುನ್ಸೂಚನೆ ಕೊಡುತ್ತಲೇ ಬಂದಿದ್ದಾಳೆ. ಕರ್ಣನಿಗೂ-ಮಾರಿಗುಡಿಗೂ ಇರುವ ಸಂಬಂಧ. ಹಾಗೆಯೇ ಕರ್ಣನ ಹುಟ್ಟಿನ ಗುಟ್ಟಿನ ಬಗ್ಗೆಯೂ ಪರೋಕ್ಷವಾಗಿ ಮಾತನಾಡಿದ್ದಾಳೆ. ಸದ್ಯಕ್ಕೆ ಇದೆಲ್ಲ ಕರ್ಣನಿಗೆ ಅರ್ಥವಾಗದಿದ್ದರೂ ರಮೇಶ್ ತಂಗಿ ಕರ್ಣನಿಗೆ ಯಾವ ವಿಚಾರವೂ ತಿಳಿಯದಂತೆ ತಡೆಯುತ್ತಿದ್ದಾಳೆ.
56
ದೇವರು ಮಾಡಿದ ಜೋಡಿ ಶಾಶ್ವತ
ಸದ್ಯ ನಿಧಿ-ಕರ್ಣನ ಕುರಿತು ಮಾತನಾಡಿರುವ ಜೋಗತವ್ವ, ಕರ್ಣನಿಗೆ, ನಿಧಿಗೆ "ಕಷ್ಟಗಳಿಗೆ ನೀನು ಸಾಕ್ಷಿಯಾಗ್ತೀಯಾ, ನಿಮ್ಮಿಬ್ಬರ ದಾರಿಯಲ್ಲಿ ಹೃದಯ ಬೇರೆ ಐತೆ" "ಮನುಷ್ಯರು ಮಾಡಿದ ಜೋಡಿ ತಾತ್ಕಲಿಕ, ದೇವರು ಮಾಡಿದ ಜೋಡಿ ಶಾಶ್ವತ" ಎಂದಿದ್ದಾಳೆ. ಸದ್ಯ ಈ ಪ್ರೊಮೊ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ. ಯಾಕಂದ್ರೆ ಇಲ್ಲಿ ಮನುಷ್ಯರು ಮಾಡಿರೊ ಜೋಡಿ ಅಂದ್ರೆ ವಿಲನ್‌ಗಳು ಮಾಡಿದ ಜೋಡಿ, ದೇವರು ಮಾಡಿದ ಜೋಡಿ ನಿಧಿ-ಕರ್ಣ ಎನ್ನುತ್ತಿದ್ದಾರೆ ವೀಕ್ಷಕರು. ಇಲ್ಲಿ ಜೋಗತವ್ವ ಮಾತಿನ ಒಳಾರ್ಥದ ಕುರಿತು, ವೀಕ್ಷಕರ ಕಾಮೆಂಟ್ಸ್ ಹೀಗಿದೆ..
66
ಇಲ್ಲಿದೆ ನೋಡಿ ವಿಡಿಯೋ
*ಕರ್ಣ ಮತ್ತು ನಿಧಿ ನಿಜವಾದ ಜೋಡಿ ಎಂದು ಸ್ಪಷ್ಟವಾಗಿ ಸುಳಿವು ನೀಡಿದರು. ಆತ್ಮಸಂಬಂಧದಿಂದ ಬಂಧಿತರಾದ ಇವರು, ಎಲ್ಲಾ ಅಡೆತಡೆಗಳನ್ನು ಒಟ್ಟಿಗೆ ದಾಟಲು ವಿಧಿಯೇ ಉದ್ದೇಶಿಸಿದೆ. ಆರಂಭದಿಂದಲೂ ಅವರ ಬಾಂಧವ್ಯ. ಅವರ ಜೀವನದ ದಾರಿಯಲ್ಲಿ ಎಷ್ಟೇ ತಿರುವುಗಳು ಬಂದರೂ, ವಿಧಿ ಯಾವಾಗಲೂ ಅವರನ್ನು ಮತ್ತೆ ಮತ್ತೆ ಒಂದಾಗಿಸುತ್ತಿತ್ತು. ನಿಜವಾದ ಪ್ರೇಮಕಥೆ ಕರ್ಣನಿಧಿ ಎಂದೆಂದಿಗೂ. *ಆಲ್‌ಮೋಸ್ಟ್ ಬುದ್ದಿ ಇರೋರಿಗೆ..ನಾಲ್ಡೆಜ್ ಇರೋರಿಗೆ ಈ ಪ್ರೊಮೊ ಪಕ್ಕಾ ಅರ್ಥ ಆಗುತ್ತೆ. ಆದ್ರೂ ಸ್ವಲ್ಪ ಜನ್ರು ಇದನ್ನ ಅವರಿಗೆ ತಕ್ಕಂತೆ ಪ್ಲೇಟ್ ಚೇಂಜ್ ಮಾಡ್ಕೊಂಡು ಸೆಲ್ಫ್ ಸ್ಯಾಟಿಸ್‌ಫ್ಯಾಕ್ಷನ್ ಮಾಡ್ಕೊತಾ ಇದಾರೆ. ಎನೀ ವೇ ಕರ್ಣ ನಿಧಿ ಕೊನೆಗೆ ಒಂದಗ್ತಾರಾ ಅಷ್ಟೇ ಬೇಕಾಗಿರೋದು. ವಿಲನ್ ಮಾಡಿಡೊ ಜೋಡಿಗಿಂತ, ಗಾಡ್ಸ್ ಲಾಸ್ಟ್‌ಗೆ ಮಾಡೊ ಜೋಡಿ ಅದಕ್ಕಿಂತ ಇಂಪಾರ್ಟ್‌ಟೆಂಟ್. ಏನ್ ಅಂದ್ರೆ ಹೀರೋ-ಹೀರೋಯಿನ್ ಟ್ರು ಲವ್ ಇಂಪಾರ್ಟ್‌ಟೆಂಟ್. ಕರ್ಣ-ನಿಧಿ. *ಕರ್ಣ ಮತ್ತು ನಿಧಿ ನಿಜವಾದ ಜೋಡಿ ಎಂದು ಸ್ಪಷ್ಟವಾಗಿ ಸುಳಿವು ನೀಡಿದರು. *Finally confirmedನಮ್ಮ ಕರ್ಣನಿಧಿ ನಿಜವಾದ ಜೋಡಿ, ವಿಧಿಯೇ ಬರೆದ ಪ್ರೇಮಕಥೆ. *ಕರ್ಣ ನಿತ್ಯ ಜೋಡಿ ಅಲ್ಲಾ ಕರ್ಣ ನಿಧಿನೆ ನಿಜವಾದ ಜೋಡಿ. *ಹಾ ಅಮ್ಮ ಹೇಳುದಾಗಿ ನಿಧಿ ಕರ್ಣ ನೇ ಜೋಡಿ ಆಗಬೋದೇನೋ.... ವೈಟಿಂಗ್....… *ಕರ್ಣ ನಿಧಿ ಜೋಡಿ ಹೈಪ್ ಲೆವೆಲ್ ಬೇರೆ. *ಯಾರೆಲ್ಲಾ ಈ ಪ್ರೊಮೋನ 2ಸಲಕ್ಕಿಂತ ಜಾಸ್ತಿ ನೋಡಿದ್ರಿ ❤️ ನಮ್ಮ ಕರ್ಣ.