Karna Serial Update: ಸಂಸಾರ ಅಥವಾ ಒಂದು ಮನೆ ಎಂಬುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಅನುಮಾನದಿಂದ ಅಥವಾ ದ್ವೇಷದಿಂದ ನೋಡಿದರೆ ಮನೆ ಹೇಗೆ ನರಕವಾಗುತ್ತದೆ ಎಂಬುದಕ್ಕೆ ರಮೇಶ್ ಸಾಕ್ಷಿ. ಹೌದು, ಕರ್ಣ ಧಾರಾವಾಹಿಯಲ್ಲಿ ಕರ್ಣನ ಮೇಲಿನ ದ್ವೇಷದಿಂದಾಗಿ ರಮೇಶ್ ಇಡೀ ಮನೆಯನ್ನು ನರಕ ಮಾಡಿದ್ದಾನೆ.
ರಮೇಶ್‌ಗೆ ತನ್ನ ಮಗ ಕರ್ಣನಲ್ಲ ಎನ್ನೋದು ಗೊತ್ತಿದೆ, ತೊಟ್ಟಿಯಲ್ಲಿ ಬಿದ್ದಿದ್ದವನು ತನ್ನನ್ನು ಅಪ್ಪ ಎಂದು ಕರೆಯುತ್ತಾನೆ ಎಂದು ಸಿಟ್ಟು ಮಾಡಿಕೊಂಡಿದ್ದನು. ಹೀಗಾಗಿ ಇಷ್ಟು ವರ್ಷಗಳಿಂದ ರಮೇಶ್, ಕರ್ಣನನ್ನು ದೈಹಿಕವಾಗಿ, ಮಾನಸಿಕವಾಗಿ ನೋಯಿಸಿದ್ದನು.
25
ಹಿಂಸೆ ಕೊಡ್ತಿರೋ ಕರ್ಣ
ರಮೇಶ್‌ಗೆ ಕರ್ಣ ತನ್ನ ಮಗನಲ್ಲ ಎಂದು ಕೋಪವಿತ್ತು. ಕರ್ಣ ಪ್ರೀತಿಯಿಂದ 'ಅಪ್ಪ' ಎಂದು ಕರೆದಾಗಲೆಲ್ಲಾ ಅದು ರಮೇಶ್‌ಗೆ ಸಿಕ್ಕಾಪಟ್ಟೆ ಕಿರಿಕಿರಿ ಉಂಟುಮಾಡುತ್ತಿತ್ತು. ಹೀಗಾಗಿ ಅವನು ಪತ್ನಿ ಮಾಲತಿಗೆ ನಿತ್ಯವೂ ಕಿರುಕುಳ ಕೊಡುತ್ತಿದ್ದನು. ಅಷ್ಟೇ ಅಲ್ಲದೆ ಕರ್ಣ ಹಾಗೂ ನಿತ್ಯಾ-ನಿಧಿಯ ಜೀವನವನ್ನು ಹಾಳು ಮಾಡಿದ್ದಾನೆ. ಈ ಮೂವರ ಪ್ರತಿಯೊಂದು ಸಂತೋಷಕ್ಕೂ ಅಡ್ಡಿ ಮಾಡಿದ್ದಾನೆ. ಮಾನಸಿಕವಾಗಿ, ದೈಹಿಕವಾಗಿ ಹೇಗೆ ತೊಂದರೆ ಕೊಡಬೇಕು ಹಾಗೆ ಹಿಂಸೆ ಕೊಟ್ಟಿದ್ದನು.
35
ಮುಳ್ಳಿನಿಂದಲೇ ಮುಳ್ಳನ್ನು ತೆಗೆಯಬೇಕು
ಇಷ್ಟುದಿನ ರಮೇಶ್ ಏನೇ ಮಾಡಿದರೂ ಅಪ್ಪ ಎಂದು ಕರ್ಣ ನಂಬಿದ್ದನು. ಆದರೆ ಎಲ್ಲರಿಗೂ ರಮೇಶ್ ತೊಂದರೆ ಕೊಡುತ್ತಿರೋದು ಗೊತ್ತಾಗಿದೆ. ಈಗ ಕರ್ಣನ ಸಹನೆಯ ಕಟ್ಟೆ ಒಡೆದಿದೆ. ಈಗ ಅವನು ರಮೇಶ್ ವಿರುದ್ಧ ತಿರುಗಿ ಬಿದ್ದಿದ್ದಾನೆ. ಮುಳ್ಳಿನಿಂದಲೇ ಮುಳ್ಳನ್ನು ತೆಗೆಯಬೇಕು ಎಂದು ಕರ್ಣ ನಿರ್ಧಾರ ಮಾಡಿದ್ದನು.
ಈಗ ಕರ್ಣ ರಮೇಶನ ಮೈಮೇಲೆ ಬಿಸಿ ನೀರು ಸುರಿಯುತ್ತಾನೆ, ಊಟ ಸಿಗದಂತೆ ಮಾಡುತ್ತಾನೆ, ಯಾವುದೋ ಟೈಮ್‌ಗೆ ಆ ಅಡುಗೆ ಮಾಡಿಕೊಡಿ, ಈ ಅಡುಗೆ ಮಾಡಿಕೊಡಿ ಎಂದು ಹೇಳುತ್ತಾನೆ. ಇದು ರಮೇಶ್‌ಗೆ ಕಿರಿಕಿರಿ ಉಂಟು ಮಾಡುತ್ತಿದೆ. ರಮೇಶ್ ಎಲ್ಲರಿಗೂ ಕಷ್ಟಕೊಟ್ಟಿದ್ದು, ಇದಕ್ಕೆ ತಕ್ಕ ಶಾಸ್ತಿ ಮಾಡುತ್ತಿದ್ದಾನೆ. ವೀಕ್ಷಕರು ಇದನ್ನೆಲ್ಲ ಎಂಜಾಯ್ ಮಾಡುತ್ತಿದ್ದಾರೆ.
55
ರಮೇಶ್‌ಗೆ ಈಗ ಸರಿಯಾದ ಶಿಕ್ಷೆ ಸಿಗುತ್ತಿದೆ
ಅನ್ನವನ್ನು ಚೆಲ್ಲುವುದನ್ನೇ ದೊಡ್ಡ ಕೆಲಸ ಮಾಡುತ್ತಿದ್ದ ರಮೇಶ್‌ಗೆ ಈಗ ಸರಿಯಾದ ಶಿಕ್ಷೆ ಸಿಗುತ್ತಿದೆ. ಈಗ ರಮೇಶ್ ಬಳಿ ಪದೇ ಪದೇ ಅಡುಗೆ ಮಾಡಿಸುತ್ತಿದ್ದಾನೆ, ಇದು ಕೇವಲ ದೈಹಿಕ ಶ್ರಮವಲ್ಲ, ಬದಲಿಗೆ ರಮೇಶ್ ಅಹಂಕಾರವನ್ನು ತುಳಿಯುವ ತಂತ್ರವಾಗಿದೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.