ಕೈ ತುಂಬಾ ಸಂಬಳ ಸಿಗೋ ಕೆಲಸ ಬಿಟ್ಟು ಸೀರಿಯಲ್ ಒಪ್ಪಿದ್ದಕ್ಕೆ 'ಕರಿಮಣಿ' ನಟಿ ಸ್ಪಂದನಾ ಮನೆಯಲ್ಲಿ ಗರಂ!

Published : Nov 16, 2024, 09:07 AM IST

ಇಂಜಿನಿಯರಿಂಗ್ ಮಾಡಿರುವ ಸ್ಪಂದನಾ ಸೋಮಣ್ಣ....ಸೀರಿಯಲ್ ಮಾತ್ರವಲ್ಲ ಸಿನಿಮಾ ಆಫರ್‌ಗಳು ಹರಿದು ಬರುತ್ತಿದೆ....  

PREV
16
ಕೈ ತುಂಬಾ ಸಂಬಳ ಸಿಗೋ ಕೆಲಸ ಬಿಟ್ಟು ಸೀರಿಯಲ್ ಒಪ್ಪಿದ್ದಕ್ಕೆ 'ಕರಿಮಣಿ' ನಟಿ ಸ್ಪಂದನಾ ಮನೆಯಲ್ಲಿ ಗರಂ!

'ಕರಿಮಣಿ' ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದಲ್ಲಿ ಮಿಂಚುತ್ತಿರುವ ಸ್ಪಂದನಾ ಸೋಮಣ್ಣ ಇದೀಗ ಬೆಳ್ಳಿ ತೆರೆಯಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಕಾಶಿನಾಥ್ ಪುತ್ರ ಅಭಿಮನ್ಯು ಜೊತೆ'ಅಭಿಮನ್ಯು ಸನ್ ಆಫ್‌ ಕಾಶೀನಾಥ್‌' ಚಿತ್ರದಲ್ಲಿ ನಟಿಸಿದ್ದಾರೆ.

26

ತೆಲುಗಿನ ಅಭಿಲಾಷಾ ಧಾರಾವಾಹಿಯಲ್ಲಿ ನಟಿಸುತ್ತಾ 'ನಚ್ಚಾವೆ' ಎಂಬ ವೆಬ್ ಸೀರಿಸ್‌ನಲ್ಲೂ ಮಿಂಚಿದ್ದಾರೆ. ಆದರೆ ಐಟಿ ಕೆಲಸ ಬಿಟ್ಟು ಬಣ್ಣದ ಪ್ರಪಂಚಕ್ಕೆ ಬರಲು ಸಾಹಿತ್ಯ ಮನೆಯಲ್ಲಿ ಒಪ್ಪಿಗೆ ಇರಲಿಲ್ಲವಂತೆ.

36

ಚಿಕ್ಕವಯಸ್ಸಿನಿಂದ ಹೆಚ್ಚಾಗಿ  ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದ ಸ್ಪಂದನಾ ನಟನೆಯ ಮೇಲೆ ವಿಶೇಷ ಒಲವು ಹೊಂದಿದ್ದರು. ಆಗಾಗ ಸಣ್ಣ ಪುಟ್ಟ ಆಡಿಷನ್‌ಗಳನ್ನು ನೀಡುತ್ತಿದ್ದರಂತೆ. 

46

ಆಡಿಷನ್ ನೀಡುತ್ತಾ ನೀಡುತ್ತಾ ನಟನೆ ಮೇಲೆ ಆಸಕ್ತು ಹೆಚ್ಚಾಗಿದೆ. ಇಂಜಿನಿಯರಿಂಗ್ ಓದಿದ ಕಾರಣ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಕೈ ತುಂಬಾ ಸಂಬಳ ಸಿಗುವ ಕೆಲಸ ಆಗಿದ್ದರು ಸ್ಪಂದನಾ ಒಪ್ಪಿಕೊಂಡಿಲ್ಲ.

56

 'ನನಗೆ ನಟನೆ ಇಷ್ಟವಿದ್ದ ಕಾರಣ ಇಷ್ಟಪಟ್ಟ ಕೆಲಸದಲ್ಲಿ ಮುಂದುವರಿಸೋಣ ಎಂದು ಗಟ್ಟಿ ನಿರ್ಧಾರ ಮಾಡಿದೆ. ಇದಕ್ಕೆ ಮನೆಯವರು ಒಪ್ಪಿಗೆ ಇರಲಿಲ್ಲ ಈಗ ನನಗೆ ಸಿಕ್ಕ ಜನಪ್ರಿಯತೆಯಿಂದ  ಮನೆಯಲ್ಲಿ ಖುಷಿಯಾಗಿದ್ದಾರೆ' ಎಂದು ಖಾಸಗಿ ವೆಬ್ ಸಂದರ್ಶನದಲ್ಲಿ ಸ್ಪಂದನಾ ಹೇಳಿದ್ದಾರೆ.

66

ಸ್ಪಂದನಾ ಮೊದಲು ನಟಿಸಿದ ಚಿತ್ರದ ಹೆಸರು ದಿಲ್‌ಖುಷ್‌. ಆನಂತರ ವಿಜಯ್ ರಾಘವೇಂದ್ರ ಜೊತೆ ಮರೀಚಿ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗಳಿಂದ ಸಾಕಷ್ಟು ಆಫರ್‌ಗಳು ಬರುತ್ತಿದೆ ಡೇಟ್ಸ್‌ ಸಮಸ್ಯೆ ಕೂಡ ಎದುರಿಸುತ್ತಿದ್ದಾರೆ. 

Read more Photos on
click me!

Recommended Stories