Karimani Serial Climax Episode: 'ಕರಿಮಣಿ' ಧಾರಾವಾಹಿ ಕೊನೆಯ ದಿನದ ಸಂಚಿಕೆಯಲ್ಲಿ ಏನಾಗಲಿದೆ?

Published : Jul 22, 2025, 09:49 AM ISTUpdated : Jul 22, 2025, 09:58 AM IST

ವರ್ಷಗಳಿಗೂ ಅಧಿಕ ಕಾಲ ಪ್ರಸಾರವಾಗಿದ್ದ 'ಕರಿಮಣಿ' ಧಾರಾವಾಹಿ ಅಂತ್ಯವಾಗ್ತಿದೆ. ಈ ಧಾರಾವಾಹಿ ಕ್ಲೈಮ್ಯಾಕ್ಸ್‌ ಎಪಿಸೋಡ್‌ಗಳು ಪ್ರಸಾರವಾಗ್ತಿದ್ದು, ಕಲಾವಿದರು ಕೊನೆಯ ದಿನದ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. 

PREV
15

'ಕರಿಮಣಿ' ಧಾರಾವಾಹಿ ಅಂತ್ಯ ಆಗಲಿದೆ. ಈಗಾಗಲೇ ಕೊನೆಯ ಸಂಚಿಕೆಗಳು ಪ್ರಸಾರ ಆಗಲು ಶುರುವಾಗಿವೆ. ಹೀಗಾಗಿ ಕಲಾವಿದರು, ತಂತ್ರಜ್ಞರು ಕೂಡ ಭಾವುಕರಾಗಿದ್ದಾರೆ.

25

2024 ಫೆಬ್ರವರಿಯಲ್ಲಿ ʼಕರಿಮಣಿʼ ಧಾರಾವಾಹಿ ಶುರುವಾಗಿತ್ತು. ಈಗಾಗಲೇ 407 ಎಪಿಸೋಡ್‌ಗಳು ಪ್ರಸಾರ ಆಗಿವೆ. ಒಂದು ವರ್ಷಗಳಿಗೂ ಅಧಿಕ ಕಾಲ ವೀಕ್ಷಕರನ್ನು ರಂಜಿಸಿರುವ ಈ ಧಾರಾವಾಹಿ ಈಗ ಅಂತ್ಯವಾಗುವ ಸಮಯ ಬಂದಿದೆ.

35

ಕಲರ್ಸ್‌ ಕನ್ನ ವಾಹಿನಿಯ ಧಾರಾವಾಹಿಗಳಲ್ಲಿ ಹೋಲಿಕೆ ಮಾಡಿದರೆ, ಈ ಧಾರಾವಾಹಿಯ ಟಿಆರ್‌ಪಿ ಕಡಿಮೆ ಅಗಿತ್ತು. ಹೀಗಾಗಿಯೋ ಏನೋ ಈ ಸೀರಿಯಲ್‌ ಅಂತ್ಯ ಮಾಡಲಾಗ್ತಿದೆ. ಈ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ತಂಡವಾಗಲೀ ಪ್ರತಿಕ್ರಿಯೆ ಮಾಡಿಲ್ಲ.

45

'ಕರಿಮಣಿ' ಧಾರಾವಾಹಿಯಲ್ಲಿ ಅರುಂಧತಿ ಮುಖವಾಡವು ಕಳಚಿಬಿದ್ದಿದೆ. ಇನ್ನು ಕರ್ಣ ಮಾತ್ರ ಅರುಂಧತಿ ಮನುಷ್ಯಳಲ್ಲ, ನೀಚ ಹೆಣ್ಣು ಎನ್ನೋದು ಒಪ್ಪಿಕೊಳ್ಳಬೇಕಿದೆ. ಒಟ್ಟಿನಲ್ಲಿ ಅರುಂಧತಿ ಅಂತ್ಯದೊಂದಿಗೆ ಈ ಧಾರಾವಾಹಿ ಮುಕ್ತಾಯವಾಗಲಿದೆ.

55

ಈ ಧಾರಾವಾಹಿಯಲ್ಲಿ ಸ್ಪಂದನಾ ಸೋಮಣ್ಣ, ಅಶ್ವಿನ್‌ ಎಚ್, ಪ್ರಥಮಾ ಪ್ರಸಾದ್‌, ಅನುಷಾ ಹೆಗಡೆ, ಶ್ರೀಕಾಂತ್‌ ಮುಂತಾದವರು ನಟಿಸಿದ್ದಾರೆ. ಓರ್ವ ಮಲತಾಯಿ ಹೇಗೆ ಗಂಡನ ಮೊದಲ ಪತ್ನಿ ಮಗನನ್ನು ಬೆಳೆಸುತ್ತಾಳೆ? ಹೇಗೆ ಅವನು ತನ್ನ ಹೆತ್ತ ತಾಯಿ ವಿರುದ್ಧ ನಿಲ್ಲುವಂತೆ ಮಾಡ್ತಾಳೆ ಎನ್ನೋದು ಈ ಧಾರಾವಾಹಿಯಲ್ಲಿದೆ.

Read more Photos on
click me!

Recommended Stories