Amruthadhaare Serial: ಬಾಣಂತಿ ಭೂಮಿಕಾಗೆ ಮಹಾಮಾರಿ ಕಾಯಿಲೆ, ಆ ಸತ್ಯ ಸ್ಫೋಟವಾದ್ರೆ ಪ್ರಾಣಕ್ಕೆ ಕಂಟಕ!

Published : Jul 22, 2025, 08:00 AM ISTUpdated : Jul 22, 2025, 09:57 AM IST

Amruthadhaare Kannada Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಮಗನ ಆರೈಕೆಯಲ್ಲಿ ಬ್ಯುಸಿಯಿರೋ ಭೂಮಿಗೆ ತನಗೆ ಮಗಳು ಹುಟ್ಟಿರೋದು ಗೊತ್ತಿಲ್ಲ. ಈಗ ಅವಳ ಪ್ರಾಣಕ್ಕೆ ಅಪಾಯ ಬರುವಂತೆ ಕಾಣುತ್ತಿದೆ. 

PREV
16
ಶಾಕಿಂಗ್‌ ವಿಷಯ ಗೊತ್ತಾದರೆ ಭೂಮಿ ಪ್ರಾಣಕ್ಕೆ ಸಂಚಕಾರ!

'ಅಮೃತಧಾರೆ' ಧಾರಾವಾಹಿಯಲ್ಲಿ ತನಗೆ ಅವಳಿ ಮಕ್ಕಳು ಹುಟ್ಟಿರೋದು ಭೂಮಿಗೆ ಗೊತ್ತಾಗಿಲ್ಲ. ಆದರೆ ಗೌತಮ್‌ ಯಾವುದೋ ವಿಷಯವನ್ನು ಮುಚ್ಚಿಡ್ತಿದ್ದಾನೆ ಅಂತ ಭೂಮಿಗೆ ಗೊತ್ತಾಗಿದೆ. ಈ ಮಧ್ಯೆ ಭೂಮಿಗೆ ಶಾಕಿಂಗ್‌ ವಿಷಯ ಗೊತ್ತಾದರೆ ಅವಳ ಪ್ರಾಣಕ್ಕೆ ಅಪಾಯ ಆಗುವುದಂತೆ.

26
ತುಂಬ ಪೊಸೆಸ್ಸಿವ್‌ ಆಗಿರೋ ಭೂಮಿಕಾ!

ಭೂಮಿ ಮಗನಿಗೆ ವ್ಯಾಕ್ಸಿನೇಶನ್‌ ಹಾಕಬೇಕಿತ್ತು. ಮಗನಿಗೆ ಇಂಜೆಕ್ಷನ್‌ ಕೊಟ್ಟರೆ ನೋವಾಗುತ್ತದೆ ಅಂತ ಭೂಮಿ ಅಳಲು ಶುರು ಮಾಡಿದಳು. ಡಾಕ್ಟರ್‌, ಸುಧಾ ಸೇರಿಕೊಂಡು ಅವಳನ್ನು ರೂಮ್‌ನಿಂದ ಹೊರಗಡೆ ಕಳಿಸಿ, ಮಗುವಿಗೆ ಇಂಜೆಕ್ಷನ್‌ ಕೊಟ್ಟರು. ಆಗ ಭೂಮಿ ಮಾತ್ರ ಸಿಕ್ಕಾಪಟ್ಟೆ ಒದ್ದಾಡಿದ್ದಳು.

36
ಭೂಮಿ ಬಳಿ ಸತ್ಯ ಮುಚ್ಚಿಟ್ಟಿರೋ ಗೌತಮ್!‌

ಇನ್ನು ಅದೇ ಆಸ್ಪತ್ರೆಗೆ ಡಾಕ್ಟರ್‌ ಕರ್ಣನನ್ನು ಭೇಟಿ ಮಾಡಲು ಗೌತಮ್‌ ಹಾಗೂ ಆನಂದ್‌ ಕೂಡ ಬಂದಿದ್ದರು. ಡೆಲಿವರಿ ಸರ್ಟಿಫಿಕೇಟ್‌ನಲ್ಲಿ ಭೂಮಿಗೆ ಅವಳಿ ಮಕ್ಕಳಾಗಿವೆ ಎಂದಿತ್ತು. ಅದು ಯಾರ ಕಣ್ಣಿಗೆ ಬೀಳಬಾರದು ಎಂದು ಗೌತಮ್‌ ಆ ಸೆರ್ಟಿಫಿಕೇಟ್‌ ಬದಲಾಯಿಸಲು ಪ್ಲ್ಯಾನ್‌ ಮಾಡಿದ್ದನು. ಮಗಳು ಕಾಣೆಯಾಗಿರೋ ವಿಷಯ ಏನಾದರೂ ಭೂಮಿಗೆ ಗೊತ್ತಾದರೆ ಅವಳು ಸಹಿಸೋದಿಲ್ಲ ಅಂತ ಅವನು ಈ ವಿಷಯವನ್ನು ಮುಚ್ಚಿಟ್ಟಿದ್ದನು.

46
ಎಚ್ಚರಿಕೆ ಕೊಟ್ಟಿರೋ ಡಾಕ್ಟರ್!‌

ಡಾಕ್ಟರ್‌ ಬಳಿ ಮಗಳನ್ನು ಯಾರೋ ಕಿಡ್ನ್ಯಾಪ್‌ ಮಾಡಿದ್ದಾರೆ. ಈ ವಿಷಯ ಯಾರಿಗೂ ಗೊತ್ತಿಲ್ಲ, ದಯವಿಟ್ಟು ಸೆರ್ಟಿಫಿಕೇಟ್‌ ಅಲ್ಲಿರುವ ಅವಳಿ ಮಕ್ಕಳನ್ನು ಬದಲಾಯಿಸಿ ಎಂದು ಕೇಳಿಕೊಂಡನು. ಆಗ ಡಾಕ್ಟರ್‌ ಅವನಿಗೆ, “ತಾಯಿಗೆ ಮಗು ಬಗ್ಗೆ ಪೊಸೆಸ್ಸಿವ್‌ನೆಸ್‌ ಇರುತ್ತದೆ. ಆದರೆ ವಯಸ್ಸಾದ ಬಳಿಕ ಮಗು ಆಗಿರೋದಿಕ್ಕೋ ಏನೋ ಭೂಮಿ ಸಿಕ್ಕಾಪಟ್ಟೆ ಪೊಸೆಸ್ಸಿವ್‌ ಆಗಿದ್ದಾಳೆ. ಭೂಮಿಕಾ ತನ್ನ ಮಗುಗೆ ವ್ಯಾಕ್ಸಿನೇಶನ್‌ ಮಾಡೋವಾಗ ತುಂಬ ಭಯಪಟ್ಟಳು. ಭೂಮಿ ಮೆಂಟಲಿ ವೀಕ್‌ ಆಗಿದ್ದಾಳೆ. ಅವಳಿಗೆ ಶಾಕಿಂಗ್‌ ನ್ಯೂಸ್‌ ಹೇಳಿದರೆ ಪ್ರಾಣಕ್ಕೆ ಅಪಾಯ ಆಗಬಹುದು” ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

56
ಮುಂದೆ ಏನಾಗುವುದು?

ಇನ್ನೊಂದು ಕಡೆ ಭೂಮಿಗೆ ಆಸ್ಪತ್ರೆಯಲ್ಲಿದ್ದಾಗ ಶಕುಂತಲಾ ಹೇಳಿದ ಮಾತು ಆಗ ಕಿವಿಗೆ ಬಿದ್ದು, ಈಗ ನೆನಪಿಗೆ ಬರುತ್ತಿದ್ಯಾ ಏನೋ! ಹೊಸ ಪ್ರೋಮೋದಲ್ಲಿ ಶಕುಂತಲಾ ಆಸ್ಪತ್ರೆಯಲ್ಲಿದ್ದಾಗ ಜಯದೇವ್‌ಗೆ ಫೋನ್‌ ಮಾಡಿ ಭೂಮಿ ಹೊಟ್ಟೆಯಲ್ಲಿ ಇನ್ನೊಂದು ಮಗು ಇದೆಯಂತೆ ಎಂದು ಹೇಳಿದ ಮಾತು ಈಗ ಭೂಮಿಗೆ ನೆನಪಿಗೆ ಬಂದಂತಿದೆ. ಇನ್ನೊಂದು ಕಡೆ ಜಯದೇವ್‌ ಹೊತ್ತೊಯ್ದ ದೃಶ್ಯವನ್ನು ಮತ್ತೆ ಪ್ರಸಾರ ಮಾಡಲಾಗಿದೆ. ಒಟ್ಟಿನಲ್ಲಿ ಈ ವಿಷಯ ಭೂಮಿ ಕಿವಿಗೆ ಬಿದ್ದರೇ ಏನಾಗುವುದೋ ಏನೋ!

66
ಪಾತ್ರಧಾರಿಗಳು

ಭೂಮಿಕಾ ಸದಾಶಿವ- ಛಾಯಾ ಸಿಂಗ್‌

ಗೌತಮ್‌ ದಿವಾನ್- ರಾಜೇಶ್‌ ನಟರಂಗ‌

ಸುಧಾ- ಮೇಘನಾ ಶೆಣೋಯ್‌

ಆನಂದ್-‌ ಸಿಲ್ಲಿ ಲಲ್ಲಿ ಆನಂದ್‌

ಶಕುಂತಲಾ - ವನಿತಾ ವಾಸು

Read more Photos on
click me!

Recommended Stories