ಮಾಡರ್ನ್ ಡ್ರೆಸ್‌ ಹಾಕಿದ್ರೂ ಕತ್ತಲಿ ತಾಳಿ ಎದ್ದು ಕಾಣುತ್ತಿದೆ; 'ಕರಾವಳಿ ಹೆಣ್ಣು ಹುಲಿ'ಯನ್ನು ಮೆಚ್ಚಿದ ನೆಟ್ಟಿಗರು!

First Published | Sep 14, 2024, 8:11 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹೆಣ್ಣು ಹುಲಿ ಮಾಡರ್ನ್ ಲುಕ್. ಸಂಪ್ರದಾಯ ಪಾಲಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ನೆಟ್ಟಿಗರು......
 

ಪ್ಯಾಟೆ ಹುಡುಗಿ ಹಳ್ಳಿ ಲೈಫ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಕರಾವಳಿ ಸುಂದರಿ ಸುಷ್ಮಾ ರಾಜ್‌ ಈಗ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್.

ಮೇ 2024ರಲ್ಲಿ ಪ್ರೀತಿಸಿದ ಹುಡುಗನೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಷ್ಮಾ ರಾಜ್‌ ಈಗಲೂ ಹುಲಿ ಕುಣಿತದಲ್ಲಿ ತೊಡಗಿಸಿಕೊಂಡಿದ್ದಾರೆ.

Tap to resize

ಸುಮಾರು 35 ವರ್ಷಗಳಿಂದ ಸುಷ್ಮಾ ರಾಜ್ ಅವರ ತಂದೆ ಹುಲಿಕುಣಿತ ತರಬೇತಿ ನೀಡುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ತಂದೆಯನ್ನು ಸುಷ್ಮಾ ಕಳೆದುಕೊಂಡರು.

ಸ್ನೇಹಿತೆಯ ಜೊತೆ ಕಾಣಿಸಿಕೊಂಡಿರುವ ಸುಷ್ಮಾ ರಾಜ್ ಮಾಡರ್ನ್ ಡ್ರೆಸ್ ಧರಿಸಿದ್ದಾರೆ. ಸಿಂಪಲ್ ಮೇಕಪ್ ಮಾಡಿಕೊಂಡಿದ್ದ ಕಾರಣ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮಾಡರ್ನ್ ಡ್ರೆಸ್ ಆಗಿದ್ದರೂ ಸುಷ್ಮಾ ತಾಳಿ ಧರಿಸಿದ್ದಾರೆ. ಬ್ಲಾಕ್ ಟಾಪ್‌ಗೆ ನೀಲಿ ಬಣ್ಣದ ಜೀನ್ಸ್ ಧರಿಸಿದ್ದಾರೆ. ಈ ಡ್ರೆಸ್ ಮೇಲೆ ತಾಳಿ ಎದ್ದು ಕಾಣುವಂತೆ ಹಾಕಿದ್ದಾರೆ.

ನಮ್ಮ ಕರಾವಳಿಯ ಹೆಣ್ಣು ಹುಲಿ ನಮ್ಮ ಹೆಮ್ಮೆ...ಎಷ್ಟೇ ಎತ್ತರಕ್ಕೆ ಬೆಳೆದರೂ ಎಷ್ಟೇ ಹಣ ಸಂಪಾದನೆ ಮಾಡಿದ್ದರೂ ಸಂಪ್ರದಾಯವನ್ನು ಮರೆತಿಲ್ಲ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

Latest Videos

click me!