ತುಂಬಾ ನೆಗೆಟಿವಿಟಿಯಿಂದ ಹೊರಬಂದ ಹಿಂದಿನ ಸ್ಪರ್ಧಿ ಶೋಭಾ ಶೆಟ್ಟಿ. ಸೀಸನ್ 7ರಲ್ಲಿ ಸ್ಪರ್ಧಿಸಿದ್ದ ಶೋಭಾ ಶೆಟ್ಟಿ ಫೈರ್ ಬ್ರ್ಯಾಂಡ್ ಆಗಿ ಹೆಸರು ಗಳಿಸಿದ್ದರು. ಎದುರು ಯಾರಿದ್ದರೂ ಅವರಿಗೆ ಹೆದರುತ್ತಿರಲಿಲ್ಲ. ಒಂದು ರೇಂಜ್‌ನಲ್ಲಿ ತಿರುಗೇಟು ನೀಡುತ್ತಿದ್ದರು. ಶೋಭಾ ಶೆಟ್ಟಿ ಮಾತನಾಡುವ ರೀತಿ, ದೇಹ ಭಾಷೆ ವಿವಾದಕ್ಕೆ ಕಾರಣವಾಗಿದ್ದವು.
ಶೋಭಾ ಶೆಟ್ಟಿಯವರನ್ನು ಹೊರ ಹಾಕಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೂ ಶೋಭಾ ಶೆಟ್ಟಿ 14 ವಾರಗಳ ಕಾಲ ಮನೆಯಲ್ಲಿ ಇದ್ದರು. ಶೋಭಾ ಶೆಟ್ಟಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎನ್ನಲಾಗ್ತಿದೆ. ಸೀಸನ್ 8ರಲ್ಲಿ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರಂತೆ.