ಲಕ್ಷ್ಮೀ ನಿವಾಸ (Lakshmi Nivasa) ಧಾರವಾಹಿ ಕುತೂಹಲಕಾರಿಯಾಗಿ ಮೂಡಿ ಬರ್ತಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನೂ ಸಹ ಜನ ತುಂಬಾನೆ ಇಷ್ಟ ಪಡ್ತಿದ್ದಾರೆ. ಅದರಲ್ಲೂ ಸಿದ್ದೇ ಗೌಡ್ರ ಪಾತ್ರ ವೀಕ್ಷಕರ ಫೇವರಿಟ್ ಅಂತಾನೆ ಹೇಳಬಹುದು. ಸಿದ್ದೇ ಗೌಡ್ರ ನಟನೆ, ಸ್ಟೈಲ್, ಲವ್ ಮಾಡೋ ರೀತಿ, ಭಾಷೆ ಎಲ್ಲವೂ ವೀಕ್ಷಕರಿಗೆ ಸಖತ್ ಇಷ್ಟ.
ಸೊಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವ ಸಿದ್ದೇ ಗೌಡ್ರು (Sidde Gowda) ಸೆಟ್ ನಲ್ಲಿ ಸಮಯ ಸಿಕ್ಕಾಗಲೆಲ್ಲಾ ತಮ್ಮ ಕೋ ಸ್ಟಾರ್ಸ್ ಜೊತೆ ರೀಲ್ಸ್ ಮಾಡುತ್ತಿರುತ್ತಾರೆ. ಲಕ್ಷ್ಮೀ ನಿವಾಸ ಸೀರಿಯಲ್ ಬಳಿಕ ಸಿದ್ದೇ ಗೌಡ್ರ ಇಮೇಜ್ ಚೇಂಜ್ ಆಗಿದೆ ಅಂತಾನೆ ಹೇಳಬಹುದು. ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಪಡೆದುಕೊಂಡಿರೋ ಗೌಡ್ರಿಗೆ ರಿಯಲ್ ಲೈಫಲ್ಲಿ ಮಹಿಳಾ ಅಭಿಮಾನಿಗಳೇ ಜಾಸ್ತಿ.
ಇನ್ನು ಸಿದ್ದೇ ಗೌಡರ ಪಾತ್ರದಲ್ಲಿ ಜನ ಮನ ಗೆದ್ದಿರುವ ನಟನ ಹೆಸರು ಧನಂಜಯ್ (Dhananjay). ಇವರು ನಟ, ನಾಟಕಗಳಲ್ಲೂ ಗುರುತಿಸಿಕೊಂಡವರು, ಡ್ಯಾನ್ಸರ್ ಕೂಡ ಹೌದು, ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಇವರಿಗೆ ಹೆಸರು ತಂದು ಕೊಟ್ಟದ್ದು ಮಾತ್ರ ಲಕ್ಷ್ಮೀ ನಿವಾಸದ ಸಿದ್ದೇ ಗೌಡರ ಪಾತ್ರ.
ನಿಮಗೆ ಸಿದ್ದೇ ಗೌಡ ಅಂದರೆ ಧನಂಜಯ್ ಅವರ ನಿಜವಾದ ತಾಯಿ ಯಾರು ಅನ್ನೋದು ಗೊತ್ತಾ? ಹೇಳ್ತೀವಿ ಕೇಳಿ. ಧನಂಜಯ್ ತಾಯಿ ಕೂಡ ನಟಿಯೇ. ಅವರು ಕೂಡ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದೂ ಕೂಡ ಕುರುಡಿಯ ಪಾತ್ರಕ್ಕೆ ತಕ್ಕಂತೆ ಅಭಿನಯಿಸುತ್ತಾ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ನಟಿ. ಅವರ ಹೆಸರು ಅನ್ನಪೂರ್ಣ (Annapoorna).
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚೆಲ್ವಿಯ ಕುರುಡಿ ತಾಯಿ ಇದ್ದಾರಲ್ಲ, ಅವರು ಸಿದ್ದೇ ಗೌಡರ ಅಂದರೆ ಧನಂಜಯ್ ಅವರ ನಿಜವಾದ ತಾಯಿ. ಧಾರಾವಾಹಿಯಲ್ಲಿ ಆಕೆಯ ತಾಯಿಗೆ ಕಣ್ಣು ಕಾಣಿಸುವುದಿಲ್ಲ. ದೇವಸ್ಥಾನ ಬಳಿ ಅವ್ವ ಮಗಳು ಹೂ ಮಾರುತ್ತಾ ಕೂರುತ್ತಾರೆ. ಸಿದ್ದೇ ಗೌಡರ ಬಗ್ಗೆ ಒಂದು ಮುಖ್ಯವಾದ ಮಾಹಿತಿ ರಿವೀಲ್ ಮಾಡುವಂತಹ ಕುರುಡಿ ಪಾತ್ರ ಇವರದ್ದು.
ಸೀರಿಯಲ್ ಕಥೆ ಬಗ್ಗೆ ಹೇಳೋದಾದ್ರೆ ಸಿದ್ದೇ ಗೌಡರು ದೇವಸ್ಥಾನದಲ್ಲಿ ಜಾತ್ರೆ ಸಮಯದಲ್ಲಿ ಎಲ್ಲರೂ ಮಲಗಿರುವಾಗ ದೇವಿಯ ತಾಳಿ ಕದ್ದು ತಂದು ಅದನ್ನ ಭಾವನಾ ಕುತ್ತಿಗೆ ಕಟ್ಟಿರುತ್ತಾನೆ. ಈ ಸಂದರ್ಭದಲ್ಲಿ ಚೆಲ್ವಿ ಅಮ್ಮ ಸಿದ್ದು ಕೈ ಹಿಡಿದಿರುತ್ತಾರೆ. ಹಾಗಾಗಿ ಅವರಿಗೆ ದೇವರ ತಾಳಿ ಕದ್ದೋರು ಇವನೇ ಅನ್ನೋದು ಗೊತ್ತಿದೆ. ಈಗ ಅದನ್ನ ವೆಂಕಿಗೆ ಹೇಳಿದ್ದೂ ಆಗಿದೆ. ವೆಂಕಿಗೆ ಈಗ ಭಾವನಾಗೆ ತಾಳಿ ಕಟ್ಟಿದ್ದು ಸಿದ್ದು ಅನ್ನೋದು ಗೊತ್ತಾಗಿದೆ.
ಸೀರಿಯಲ್ ನಲ್ಲಿ ಕುರುಡಿ ಪಾತ್ರದಲ್ಲಿ ಅಮೋಘವಾಗಿ ನಟಿಸುತ್ತಿರುವ ಧನಂಜಯ್ ಅಮ್ಮನ ನಟನೆಗೆ ಜನರು ಫಿದಾ ಆಗಿದ್ದಾರೆ, ಈ ಅಮ್ಮ ಮಗನ ಜೋಡಿ ಬೆಸ್ಟ್ ಎಂದು ಸಹ ಜನ ಹೇಳ್ತಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಈ ಅಮ್ಮ ಮಗನ ಕಾಂಬಿನೇಶನ್ ಹೇಗೆ ಮೂಡಿ ಬರಲಿದೆ. ಎಲ್ಲರೆದುರು ಸಿದ್ಧುವೇ ಕಳ್ಳ ಅನ್ನೋದನ್ನ ಅಮ್ಮ ಹೇಳ್ತಾರ ಅನ್ನೋದನ್ನ ಕಾದು ನೋಡೋಣ.