ಕನ್ನಡತಿ ಖ್ಯಾತಿಯ ನಟ ಕಿರಣ್ ರಾಜ್ ಅವರಿಗೆ ಪರಿಚಯದ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಕಾಣುವ ಅತ್ಯಂತ ಬೇಡಿಕೆಯ ಮುಖಗಳಲ್ಲಿ ಅವರೂ ಒಬ್ಬರು.
210
ಮನರಂಜನಾ ಉದ್ಯಮದಲ್ಲಿ ಜನಪ್ರಿಯ ಮುಖವಾಗಿರುವುದರ ಜೊತೆಗೆ, ಕಿರಣ್ ರಾಜ್(Kiran Raj) ತನ್ನ ಹಿರಿಮೆಗೆ ಮತ್ತೊಂದು ಗರಿ ಸೇರಿಸಿದ್ದಾರೆ. ಏನದು ? ಯಾಕಾಗಿ ? ಇಲ್ಲಿದೆ ಡೀಟೆಲ್ಸ್
310
ನಟ ಈಗ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಗೂಗಲ್ ಸರ್ಚ್ ನಲ್ಲಿ ಟ್ರೆಂಡ್ ಮಾಡಿದ ಕನ್ನಡದ ಮೊದಲ ನಟ ಕಿರಣ್ ರಾಜ್.
410
ನಟ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದ ಹ್ಯಾಂಡಲ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕನ್ನಡ ಪ್ರದೇಶದಲ್ಲಿ ಗೂಗಲ್ ವೆಬ್ ಹುಡುಕಾಟದಲ್ಲಿ ಕಿರಣ್ ಅಗ್ರಸ್ಥಾನದಲ್ಲಿದ್ದಾರೆ.
510
ಗೂಗಲ್ ಸರ್ಚ್(Google Search) ನಲ್ಲಿ ಟ್ರೆಂಡ್ ಆಗಿರುವ ನಟನ ಸುದ್ದಿಯು ಅವರ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ ಖುಷಿ ತಂದುಕೊಟ್ಟಿದೆ . ಇದು ನಿಜಕ್ಕೂ ಅವರಿಗೆ ಸಂಭ್ರಮಿಸಲು ಒಂದು ರಿಯಲ್ ರೀಸನ್. ಕಿರಣ್ ಅವರ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಎಲ್ಲರೂ ಶುಭಾಶಯ ತಿಳಿಸಿದ್ದಾರೆ.
610
ಕಿರಣ್ ರಾಜ್ ಬಗ್ಗೆ ಮಾತನಾಡುತ್ತಾ ಅವರ ವೈಭವದ ಪ್ರಯಾಣವು ನಟನಿಗೆ ಕೇಕ್ ವಾಕ್ ಆಗಿರಲಿಲ್ಲ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಕಿರಣ್ ರಾಜ್ ಯಾವಾಗಲೂ ಯಶಸ್ವಿ ನಟನಾಗುವ ಕನಸುಗಳನ್ನು ಬೆನ್ನಟ್ಟಿದ್ದರು. ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ನಟ ಅನೇಕ ಚಿತ್ರಗಳಲ್ಲಿ ಕಿರಿಯ ಕಲಾವಿದನಾಗಿ ಕಾಣಿಸಿಕೊಂಡಿದ್ದರು.
810
ನಟ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲಿ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದ್ದಾರೆ. ಕಿರಣ್ ನಂತರ ಕೆಲವು ರಿಯಾಲಿಟಿ ಶೋ (Reality Show) ಗಳಲ್ಲಿ ಕಾಣಿಸಿಕೊಂಡರು
910
ಅಂತಿಮವಾಗಿ ಕನ್ನಡ ಮತ್ತು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದರು. ಅಂದಿನಿಂದ, ಅವರು ಮನರಂಜನಾ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಮುಖಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರಿಂದ ನಟ ಹಿಂತಿರುಗಿ ನೋಡಬೇಕಾಗಿ ಬರಲಿಲ್ಲ.
1010
ಪ್ರಸ್ತುತ ಕನ್ನಡದ ಪ್ರಸಿದ್ಧ ಕಿರುತೆರೆ ಧಾರವಾಹಿ 'ಕನ್ನಡತಿ'ಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ಕಿರಣ್ ರಾಜ್ ಕೆಲವು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿಯೂ ಬ್ಯುಸಿಯಾಗಿದ್ದಾರೆ.