ಕೆಬಿಸಿ ಶೋನಲ್ಲಿ ಮಗಳ ಈ ರಹಸ್ಯ ಬಯಲು ಮಾಡಿದ ಅಮಿತಾಬ್!
First Published | Sep 30, 2021, 5:18 PM ISTಈ ದಿನಗಳಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ 13 (Kaun Banega Crorepati 13) ಅನ್ನು ನಡೆಸುತ್ತಿದ್ದಾರೆ. ಮಂಗಳವಾರದ ಸಂಚಿಕೆಯಲ್ಲಿ, ರಾಜಸ್ಥಾನದ ನರ್ಸ್ ಸವಿತಾ ಭಾಟಿ ಹಾಟ್ ಸೀಟಿನ ಮೇಲೆ ಕುಳಿತಿದ್ದರು. ನರ್ಸ್ ಆಗಿದ್ದರೂ, ಇಂಜೆಕ್ಷನ್ ಪಡೆಯಲು ತುಂಬಾ ಭಯವಾಗುತ್ತಿದೆ ಎಂದು ಸವಿತಾ ಹೇಳಿದರು. ಆವರ ಮಾತನ್ನು ಕೇಳಿ, ಅಮಿತಾಬ್ ತನ್ನ ಮಗಳು ಶ್ವೇತಾ ಬಚ್ಚನ್ (Shweta Bachchan) ಸಂಬಂಧಿಸಿದ ಒಂದು ತಮಾಷೆಯ ಪ್ರಸಂಗವನ್ನು ಕೂಡ ವಿವರಿಸಿದರು. ಮಗಳು ಶ್ವೇತಾ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿದ ಸಂಪೂರ್ಣ ಕಥೆಯನ್ನು ಕೆಳಗೆ ಓದಿ