ಮಧು-ನಿಖಿಲ್ ಹನಿಮೂನ್ ಫೋಟೋ ವೈರಲ್; ಫ್ರೀ ಆಗಿ ಏನ್ ಏನ್ ನೋಡ್ಬೇಕೋ ಎಂದು ಕಾಲೆಳೆದ ನೆಟ್ಟಿಗರು!

First Published | Nov 26, 2024, 3:34 PM IST

ಮದುವೆ ನಂತರ ಶಾರ್ಟ್‌ ಹನಿಮೂನ್ ಹೊರಟ ಮಧು ಮತ್ತು ನಿಖಿಲ್. ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹಂಚಿಕೊಂಡ ನವ ಜೋಡಿ......
 

ಕನ್ನಡದ ಖ್ಯಾತ ಯೂಟ್ಯೂಬರ್‌ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಹಲವು ವರ್ಷಗಳ ಕಾಲ ಪ್ರೀತಿಸಿ ನವೆಂಬರ್‌ ತಿಂಗಳಿನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ.

ಲವ್ ರಿವೀಲ್‌ ಮಾಡುವ ವಿಚಾರದಿಂದ ಹಿಡಿದು ಮದುವೆಯಲ್ಲಿ ನಡೆಯುವ ಶಾಸ್ತ್ರ ಹಾಗೂ ನಂತರ ಬ್ಯುಸಿಯಾಗಿರುವ ಲೈಫ್‌ಸ್ಟೈಲ್‌ ಬಗ್ಗೆ ವ್ಲಾಗ್‌ಗಳ ಮೂಲಕ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

Tap to resize

ನವಜೋಡಿಗಳಿಗೆ ಎಲ್ಲರೂ ಕೇಳುವುದು ಒಂದೇ ಹನಿಮೂನ್ ಎಲ್ಲಿಗೆ? ಮಗು ಯಾವಾಗ? ಗುಡ್ ನ್ಯೂಸ್ ಯಾವಾಗ? ಎಂದು ಅದಕ್ಕೆ ಮಧು ಗೌಡ ನೇರವಾಗಿ ಉತ್ತರಿಸಿದ್ದಾರೆ.

ನಾವು ಹನಿಮೂನ್‌ಗೆಂದು ವಿದೇಶಕ್ಕೆ ಹೋಗುವ ಪ್ಲ್ಯಾನ್ ಮಾಡುತ್ತಿದ್ದೀವಿ ಅದು ಎರಡು ಮೂರು ತಿಂಗಳು ಕಳೆದ ಮೇಲೆ ಹೀಗಾಗಿ ಶಾರ್ಟ್‌ ಹನಿಮೂನ್‌ ಟ್ರಿಪ್ ಆಗಿ ಕೂರ್ಗ್‌ಗೆ ಹೋಗಿದ್ದೀವಿ ಎಂದಿದ್ದಾರೆ.

ಒಂದು ದಿನದ ಮಟ್ಟಿಗೆ ಕೂರ್ಗ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವುದಾಗಿ ತಮ್ಮ ಬೆಡ್‌ರೂಮ್, ಬಾತ್‌ರೂಮ್‌ ಹಾಗೂ ಇಡೀ ರೆಸಾರ್ಟ್‌ ವಿಡಿಯೋ ಮಾಡಿದ್ದಾರೆ.

ಹನಿಮೂನ್‌ಗೆ ಹೋಗುವ ಮುನ್ನವೂ ವಿಡಿಯೋ ಮಾಡಿದ್ದಾರೆ. ರೆಸಾರ್ಟ್‌ ಸಿಬ್ಬಂದಿಗಳು ಸಣ್ಣದೊಂದು ಕೇಕ್‌ ಕೊಟ್ಟು ಸರ್ಪ್ರೈಸ್ ಮಾಡಿದ್ದಾರೆ. ಪತಿ ಜೊತೆ ಕೇಕ್ ಕಟ್ ಮಾಡುತ್ತಿರುವುದನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಏನ್ ಬೇಕಿದ್ದರೂ ಹಾಕಬಹುದು ಅನ್ನೋ ಕಾರಣ ಎಲ್ಲಾ ಫ್ರೀ ಫ್ರೀ ಎಂದು ತಮ್ಮ ಪರ್ಸನಲ್ ಮ್ಯಾಟರ್‌ನ ಹಂಚಿಕೊಳ್ಳುವುದು ತಪ್ಪು. ಇನ್ನು ನಾವು ಏನ್ ಏನ್ ನೋಡ್ಬೇಕೋ ಗೊತ್ತಿಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

Latest Videos

click me!