ಲಕ್ಷ್ಮೀ ಬಾರಮ್ಮ ನಟಿ ತನ್ವಿ ರಾವ್ ಇನ್ನೂ ಸಿಂಗಲ್ ಅಂತೆ! ಮದುವೆ ಬಗ್ಗೆ ಕೇಳಿದ್ರೆ ಇದೆಲ್ಲಾ ಡ್ರಾಮಾ ಅಂದ್ರು!

First Published | Nov 26, 2024, 12:26 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ ಮತ್ತೆ ಬಂದಿರುವ ಕೀರ್ತಿ ಖ್ಯಾತಿಯ ತನ್ವಿ ರಾವ್ ತಮ್ಮ ಮದ್ವೆ ಬಗ್ಗೆ, ಕೀರ್ತಿ ಪಾತ್ರದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದು, ಅವರು ಏನ್ ಹೇಳಿದ್ರು ನೋಡೋಣ ಬನ್ನಿ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ನಾಯಕ ಮತ್ತು ನಾಯಕಿಯರಾದ ವೈಷ್ಣವ್ ಮತ್ತು ಲಕ್ಷ್ಮಿಗಿಂತ ಹೆಚ್ಚು ಜನಪ್ರಿಯತೆ ಪಡೆದ, ಜನ ಮೆಚ್ಚಿದ ನಟಿ ಅಂದ್ರೆ, ಕೀರ್ತಿ ಪಾತ್ರದಲ್ಲಿ ನಟಿಸಿರುವ ತನ್ವಿ ರಾವ್ ಅವರು. ಇವರ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು, ನೆಗೆಟೀವ್ ಶೇಡ್ ಪಾತ್ರವಾದರೂ ಜನ ಇವರಲ್ಲೇ ನಾಯಕಿಯನ್ನು ಕಂಡಿದ್ದರು. 
 

ಒಂದೆರಡು ತಿಂಗಳ ಹಿಂದೆ ಕಾವೇರಿ ಕೀರ್ತಿಯನ್ನು ಬೆಟ್ಟದ ಮೇಲಿಂದ ಕೆಳಕ್ಕೆ ನೂಕುವ ಮೂಲಕ ಆ ಪಾತ್ರಕ್ಕೆ ಫುಲ್ ಸ್ಟಾಪ್ ಇಡಲಾಗಿತ್ತು, ಒಂದು ತಿಂಗಳಿಂದ ಕೀರ್ತಿ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಇದರಿಂದ ಅಭಿಮಾನಿಗಳು ತುಂಬಾನೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅಭಿಮಾನಿಗಳ ಕಾಯುವಿಕೆಗೆ ಉತ್ತರವಾಗಿ ಕೀರ್ತಿ ಸೀರಿಯಲ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ. 
 

Tap to resize

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಕೀರ್ತಿ ಖ್ಯಾತಿಯ ತನ್ವಿ ರಾವ್ (Tanvi Rao). ಕೀರ್ತಿ ಪಾತ್ರದ ಬಗ್ಗೆ ತುಂಬಾ ಖುಷಿ ಇದೆ ಎಂದಿದ್ದಾರೆ. ಆರಂಭದಲ್ಲಿ ಇದು ನೆಗೆಟೀವ್ ಪಾತ್ರ ಜನ ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಭಯ ಇತ್ತು, ಜನ ನೆಗೆಟಿವ್ ಆಗಿ ಮಾತನಾಡಿದ್ರೂ ಅದನ್ನ ಪಾಸಿಟೀವ್ ಆಗಿಯೇ ತೆಗೆದುಕೊಳ್ಳಬೇಕೆನ್ನುವ ನಿರ್ಧಾರ ಮಾಡಿದ್ದೆ, ಆದರೆ ಜನ ಇಷ್ಟೊಂದು ಪ್ರೀತಿ ಕೊಡ್ತಾರೆ ಅಂದುಕೊಂಡಿರಲಿಲ್ಲ ಎಂದಿದ್ದಾರೆ. 
 

ಯಾವ ರೀತಿ ಕೀರ್ತಿ ವಾಪಾಸ್ ಬರ್ತಾಳೆ ಅನ್ನೋ ಬಗ್ಗೆ ಕ್ಲಾರಿಟಿ ಇರಲಿಲ್ಲ, ರೈಟರ್ ಕೂಡ ನನ್ನ ಪಾತ್ರದ ಬಗ್ಗೆ ತುಂಬಾ ಸೀಕ್ರೇಟ್ ಆಗಿಟ್ಟಿದ್ದರು. ಅದರಲ್ಲೂ ಜನ ಇಷ್ಟು ಸಮಯ ಆದ್ರೂ ನನ್ನ ಪಾತ್ರವನ್ನು ಮರೆಯದೆ, ಕೀರ್ತಿ ವಾಪಾಸ್ ಬನ್ನಿ ಅಂತಾ ಹೇಳ್ತಿರೋದು ನೋಡಿ ಖುಷಿಯಾಗಿದೆ. ನಾವು ನಿರೀಕ್ಷೆ ಮಾಡಿ ಯಶಸ್ಸು ಸಿಕ್ಕಾಗ ಅದರಲ್ಲಿ ಸಿಗೋ ಸಂತೋಷ ಬೇರೆ, ಆದರೆ ನಿರೀಕ್ಷೆ ಮಾಡದೇ ಇರುವಾಗ ಸಿಗುವ ಆ ಖುಷಿಯನ್ನ ಎಕ್ಸ್ ಪ್ರೆಸ್ ಮಾಡೋದಕ್ಕೆ ಸಾಧ್ಯಾನೆ ಇಲ್ಲ ಎಂದಿದ್ದಾರೆ ತನ್ವಿ ರಾವ್. 
 

ಕೀರ್ತಿ ಪಾತ್ರದ ಕೊನೆಯಾದ ಬಳಿಕ ತನ್ವಿ ತಮ್ಮ ಹುಟ್ಟೂರಾದ ಮಂಗಳೂರಿಗೆ ತೆರಳಿ ಅಲ್ಲಿ ಬೀಚ್, ಡ್ಯಾನ್ಸ್ ಮಾಡ್ತಾ ಆರಾಮಾಗಿ ಇದ್ರಂತೆ. ತನ್ವಿ ರಾವ್ ಮಾಡಿರೋ ಡ್ಯಾನ್ಸ್ ವಿಡಿಯೋಗಳು ಇನ್’ಸ್ಟಾಗ್ರಾಂನಲ್ಲಿ ಬರೋಬ್ಬರಿ 4 ಮಿಲಿಯನ್ ವ್ಯೂವ್ಸ್ ಪಡೆದಿವೆ. ಜನ ಅಲ್ಲೂ ಕೀರ್ತಿ ಯಾವಾಗ ಬರ್ತೀರಾ ಅಂದಿದ್ದಾರೆ. ಜನರು ತನ್ವಿ ರಾವ್ ನ್ನೆ ಮರೆತಿದ್ದಾರೆ, ನಾನೀಗ ಕೀರ್ತಿಯಷ್ಟೇ ಆಗಿದ್ದೀನಿ ಎಂದಿದ್ದಾರೆ ತನ್ವಿ ರಾವ್. 
 

ಬೇರೆ ಬೇರೆ ಅವಕಾಶಗಳು ಸಿಗುತ್ತಿರುವ ಬಗ್ಗೆ ಕೂಡ ಮಾತನಾಡಿರುವ ತನ್ವಿ ರಾವ್, ಪಾತ್ರಗಳ ಆಯ್ಕೆ ಬಗ್ಗೆ ತುಂಬಾನೆ ಚೂಸಿಯಾಗಿದ್ದಾರಂತೆ, ಕೀರ್ತಿ ಪಾತ್ರಕ್ಕೆ ಹೆಚ್ಚು ತೂಕ ಇದ್ದಿರೋದ್ರಿಂದ, ಅಂತಹುದೇ ತುಂಬಾ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ತುಂಬಾನೆ ಪ್ರೀತಿ ಕೊಟ್ಟಂತಹ ವೀಕ್ಷಕರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ ತನ್ವಿ ರಾವ್.
 

ಪ್ರೀತಿ ಹಾಗೂ ಮದುವೆಯ ಬಗ್ಗೆ ಮಾತನಾಡುವಾಗ, ನಾನು ಕಮಿಟೆಡ್ ಅಲ್ಲ, ಇನ್ನೂ ಸಿಂಗಲ್ ಎಂದಿರುವ ತನ್ವಿ ರಾವ್, ಮದುವೆ (marriage) ಬಗ್ಗೆ ಈಗ ಯೋಚನೇನೆ ಮಾಡಲ್ಲ, ಸದ್ಯಕ್ಕೆ ವೈಷ್ಣವ್ ಮಾತ್ರ ಸಾಕು, ಇದಿಷ್ಟೇ ಡ್ರಾಮಾ ಸಾಕು ನಂಗೆ ಬೇರೆ ಯಾವುದೂ ಬೇಡ. ಮದುವೆ ಬಗ್ಗೆ, ಹುಡುಗನ ಕ್ವಾಲಿಟಿ ಬಗ್ಗೆ ಎಲ್ಲಾ ಯೋಚನೆ ಮಾಡಿಲ್ಲ ಎಂದಿದ್ದಾರೆ. 
 

Latest Videos

click me!