ಸಿಹಿ ಸಾವಿನಿಂದ ಹುಚ್ಚಿಯಾದ ಸೀತಾ… ಕಥೆ ಹೀಗೆ ಇದ್ರೆ ಸೀತಾ ಅಲ್ಲ ನಮಗೆ ಹುಚ್ಚು ಹಿಡಿಯೋದು ಗ್ಯಾರಂಟಿ ಅಂದ್ರು ಜನ!

First Published | Nov 26, 2024, 1:12 PM IST

ಸೀತಾ ರಾಮ ಧಾರಾವಾಹಿಯ ಹೊಸ ಪ್ರೊಮೋ ಬಿಡುಗಡೆಯಾಗಿದ್ದು ಸಿಹಿ ಸಾವನ್ನಪ್ಪಿದ್ದು, ಸೀತಾ ಆ ನೋವಿನಲ್ಲಿ ಹುಚ್ಚಿಯಾಗಿದ್ದಾಳೆ, ಇನ್ನೊಂದು ಕಡೆ ಆತ್ಮ ಆಗಿರೋ ಸಿಹಿಗೆ ಸುಬ್ಬಿ ಸಿಕ್ಕಿದ್ದಾಳೆ. ಮುಂದೇನಾಗುತ್ತೆ ನೋಡೋಣ. 
 

ಕನ್ನಡ ಕಿರುತೆರೆಯ ಬಹು ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ. ಸದ್ಯ ಸೀರಿಯಲ್ ನಲ್ಲಿ ಮಹಾ ತಿರುವು ಸಿಕ್ಕಿದೆ. ಇದೀಗ ಪ್ರಸಾರವಾಗಿರೋ ಸೀರಿಯಲ್ ಪ್ರೊಮೋ ನೋಡಿದ್ರೆ, ಮತ್ತಷ್ಟು ಮಾಹಿತಿ ಅನಾವರಣ ಆಗ್ತಿರೋದನ್ನ ನಾವು ನೋಡಬಹುದು. 
 

ಅಷ್ಟಕ್ಕೂ ಸೀರಿಯಲ್ ನಲ್ಲಿ ಏನಾಗ್ತಿದೆ. ಈಗಾಗಲೇ ಶ್ಯಾಮ್ ಹಾಗೂ ಶಾಲಿನಿ ಕೈಯಿಂದ ಕಾನೂನಾತ್ಮಕವಾಗಿ ಮಗಳು ಸಿಹಿಯನ್ನು ರಾಮ ಮತ್ತು ಸೀತೆ ಪಡೆದುಕೊಂಡಿದ್ದಾರೆ. ಮತ್ತೆ ಸಂಸಾರ ಒಂದಾಗಿರುವ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ ಸಿಹಿಯ ಮುದ್ದಾದ ಕುಟುಂಬ. ಈಗಾಗಲೆ ಸೀತಾಗೆ ಹುಟ್ಟಿದ್ದು ಒಂದಲ್ಲ, ಎರಡು ಮಕ್ಕಳು ಅನ್ನೋದು ಗೊತ್ತಾಗಿದೆ. ಇನ್ನೊಂದು ಮಗುವಿನ ಎಂಟ್ರಿ ಕೂಡ ಆಗಿದೆ. 
 

Tap to resize

ಇನ್ನು ಮುಂದೆ ಏನಾಗಬಹುದು ಅನ್ನೋದನ್ನ ಪ್ರೊಮೋದಲ್ಲಿ ತೋರಿಸಲಾಗಿದೆ. ಅಂದ್ರೆ ಅಪಘಾತದಲ್ಲಿ ಸಿಹಿ ಸಾವನ್ನಪ್ಪುತ್ತಾಳೆ. ಸಿಹಿಯ ಸಾವಿನ ಅಘಾತದಲ್ಲಿ ಸೀತಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಹುಚ್ಚಿಯಾಗಿದ್ದಾಳೆ. ಮತ್ತೊಂದೆಡೆ ಮಗಳನ್ನು ಕಳೆದುಕೊಂಡು, ಹೆಂಡ್ತಿಯನ್ನು ಹುಚ್ಚಿಯಾಗಿ ನೋಡಿ ರಾಮ್ ತುಂಬಾನೆ ನೊಂದಿದ್ದಾನೆ. 
 

ಸಾವನ್ನಪ್ಪಿರೋ ಸಿಹಿ ಆತ್ಮ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ, ಆದ್ರೆ ಅಲ್ಲಿ ಯಾಕೆ ತನ್ನ ಫೋಟೊಗೆ ಹಾರ ಹಾಕಿದ್ದಾರೆ, ಯಾಕೆ ಯಾರಿಗೂ ನನ್ನನ್ನು ನೋಡೋದಕ್ಕೆ ಸಾಧ್ಯ ಆಗ್ತಿಲ್ಲ, ಅಪ್ಪನಿಗೆ ಎರಡನೇ ಮದುವೆ ಮಾಡೋ ಬಗ್ಗೆ ಭಾರ್ಗವಿ ಸೂರ್ಯಪ್ರಕಾಶ್ ಜೊತೆ ಮಾತಾಡ್ತಿರೋದು ಎಲ್ಲವೂ ಸಿಹಿಗೆ ಗೊತ್ತಾಗಿ,  ಅದನ್ನೆ ಯೋಚನೆ ಮಾಡುತ್ತಾ, ಅಮ್ಮನಿಗೆ ಹೇಗಾದ್ರು ಮಾಡಿ ನಾನು ಕಾಣಿಸ್ಕೋಬೇಕು ಎಂದು ಯೋಚ್ನೆ ಮಾಡ್ತಾ ರಸ್ತೆ ಹೋಗ್ತಿರ್ಬೇಕಾದ್ರೆ, ಅಲ್ಲಿ ಸಿಹಿಗೆ ತನ್ನ ಹಾಗೇ ಇರುವ ಮತ್ತೊಬ್ಬ ಹುಡುಗಿಯ ಪರಿಚಯ ಆಗುತ್ತೆ. 
 

ತನ್ನನ್ನು ಯಾರೂ ಕಂಡು ಹೀಡಿತಾ ಇಲ್ಲ, ಯಾರಿಗೂ ನಾನು ಕಾಣಿಸ್ತಿಲ್ಲ, ನನ್ನ ಮಾತನ್ನು ಯಾರೂ ನೋಡ್ತಾ ಇಲ್ಲ ಎಂದು ಸಿಹಿ ಅಂದುಕೊಳ್ಳುತ್ತಿರೋವಾಗ್ಲೇ, ಸಿಹಿಯನ್ನ ನೋಡಿ, ಸರ್ಕಸ್ ಮಾಡೊ ಹುಡುಗಿ ಮಾತು ಕತೆ ನಡೆಸ್ತಾಳೆ, ಆ ಹುಡುಗಿ ಹೆಸರು ಸುಬ್ಬಿ ಅನ್ನೋದು ಕೂಡ ಗೊತ್ತಾಗುತ್ತೆ. ಸಿಹಿಗೆ ಆಕೆ ತನ್ನನ್ನು ನೋಡ್ತಿದ್ದಾಳೆ ಅನ್ನೋದೆ ದೊಡ್ಡ ಖುಶಿ. ಇನ್ನು ಮುಂದೆ ಸುಬ್ಬಿ ಸೀತಾ - ರಾಮರ ಮಡಿಲನ್ನು ಹೇಗೆ ಸೇರುತ್ತಾಳೆ ಅನ್ನೋದೆ ಸ್ಟೋರಿ. 
 

ಸಿಹಿಯ ಸಾವಿನ ಹಿಂದೆ ಖಂಡಿತವಾಗಿಯೂ ಭಾರ್ಗವಿಯ ಕೈವಾಡ ಇದ್ದೆ ಇದೆ. ಹಾಗಿದ್ರೆ, ಸಿಹಿ ಸುಬ್ಬಿ ಜೊತೆ ಮನೆಗೆ ಎಂಟ್ರಿ ಕೊಟ್ಟು, ಭಾರ್ಗವಿಯ ಎಲ್ಲಾ ನಾಟಕಗಳನ್ನು ಬಯಲು ಮಾಡ್ತಾಳ ಅನ್ನೋದನ್ನ ಕಾದು ನೋಡಬೇಕು. ಆದ್ರೆ ಇದನ್ನೆಲ್ಲಾ ನೋಡಿ ವೀಕ್ಷಕರು ಮಾತ್ರ ಕಿಡಿ ಕಾರುತ್ತಿದ್ದಾರೆ. ಚೆನ್ನಗಿರೋ ಸೀರಿಯಲ್ ನ ಯಾಕೆ ಈಗೇ ಹಾಳು ಮಾಡ್ತಿದೀರಾ?  ಹೀಗೆ ಕಥೆ ಮಾಡ್ತಾ ಇದ್ರೆ ಸೀತಾ ಅಲ್ಲ ನೋಡೋ ಜನ ಹುಚ್ಚುರಾಗ್ತಾರೆ ಅಷ್ಟೇ , ಹುಚ್ಚು ಬಿದ್ದು ನಾವ್ ನೋಡ್ತಿವಲ್ಲ, ನಮಿಗ್ ಹುಚ್ಚು ಅಂತೆಲ್ಲಾ ಹೇಳ್ತಿದ್ದಾರೆ ಜನ. 
 

ಅಷ್ಟೇ ಅಲ್ಲ ಅಯ್ಯೋ ದೇವಾ ಸೀತಾ ದೇವಿಗೂ ಇಷ್ಟೊಂದು ಕಷ್ಟ ಬಂದಿರ್ಲಿಲ್ಲ ಅನ್ಸತ್ತೆ, ಈ ಸೀತೆಗೆ ಎಷ್ಟೊಂದು ಕಷ್ಟಾನಪ್ಪ, ಅಯ್ಯೋ ದೇವ್ರೆ ಎಲ್ಲಾ ಸಿನಿಮಾಗಳನ್ನು ಮಿಕ್ಸ್ ಮಾಡಿ ಒಂದು ಧಾರಾವಾಹಿ ಮಾಡ್ತಾ ಇದ್ದಾರೆ. ಚೆನ್ನಾಗಿ ಇದ್ದ ಸೀರಿಯಲ್ ಸಿಹಿ ಸಿಹಿ ಸಿಹಿ ಅಂದ್ಕೊಂಡು ವೀಕ್ಷಕರ ಪಾಲಿಗೆ ಕಹಿ ಆಗ್ತಿದೆ ಹೇಳ್ತಿದ್ದಾರೆ ಜನ. .

ಪಾತ್ರ ಅದೆಷ್ಟು ಚೆನ್ನಾಗಿ ಇತ್ತು, ಅದು ಇಲ್ಲವೇ ಇಲ್ಲಾ. ಆಫೀಸ್ ಸೀನ್ ಇಲ್ಲಾ,  ರಾಮ ನ ತಾಯಿ ಬಗ್ಗೆ ಏನೂ ವಿಷಯ ಇಲ್ಲಾ, ಭಾರ್ಗವಿ ಅದೇ ನೋಟ, ರಾಮ ಸೀತಾ ಸಿಹಿ ಸಿಹಿ ಅನ್ನೋದು ಇಷ್ಟೇ ಈ ಧಾರಾವಾಹಿ ಕತೆ. ಕೊನೆಯವರೆಗೂ ಡೈರೆಕ್ಟರ್ ಅವ್ರು ರಿಸ್ಕ್ ತಗೋತೀಲ್ಲಾ ಕತೆಗಾರರು ಹೊಸತನ ಬರೆಯುತ್ತಿಲ್ಲಾ ಅಂತ ಕಂಪ್ಲೇಂಟ್ ಕೂಡ ಮಾಡಿದ್ದಾರೆ. 
 

Latest Videos

click me!