ಅಲ್ಪ ಕಾಲದಲ್ಲೇ ಮುರಿದುಬಿದ್ದ ದಾಂಪತ್ಯ: ಇತ್ತೀಚೆಗೆ ಡಿವೋರ್ಸ್‌ ಪಡೆದ ಕನ್ನಡ ಕಿರುತೆರೆ ನಟಿಯರಿವರು!

Published : Apr 14, 2026, 04:38 PM IST

Kannada Actress Divorce: ಇತ್ತೀಚೆಗೆ ಡಿವೋರ್ಸ್‌ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಕಿರುತೆರೆ ನಟಿಯರಲ್ಲಿ ಕೆಲವರು ಕೆಲವೇ ಕೆಲವು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾದರೆ ಯಾರು ಡಿವೋರ್ಸ್‌ ಪಡೆದಿದ್ದಾರೆ? ಏನಾಗಿತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ. 

PREV
14
ಅನುಷಾ ಹೆಗಡೆ

ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದ ಅನುಷಾ ಹೆಗಡೆ ಅವರು ತೆಲುಗು ನಟ ಪ್ರತಾಪ್‌ ಸಿಂಹ ಜೊತೆ ಮದುವೆಯಾಗಿದ್ದರು. ಹೈದರಾಬಾದ್‌ನಲ್ಲಿ ಈ ಮದುವೆ ನಡೆದಿತ್ತು. 2020ರಲ್ಲಿ ಮದುವೆ ನಡೆದಿತ್ತು. ಇತ್ತೀಚೆಗೆ ಅವರು ಡಿವೋರ್ಸ್‌ ಪಡೆದುಕೊಂಡಿರೋದಾಗಿ ಹೇಳಿಕೊಂಡಿದ್ದಾರೆ.

24
ಮಯೂರಿ

ಅಶ್ವಿನಿ ನಕ್ಷತ್ರ ಧಾರಾವಾಹಿ ನಟಿ ಮಯೂರಿ ಅವರು ಡಿವೋರ್ಸ್‌ ಪಡೆದುಕೊಂಡಿದ್ದಾರೆ ಎಂಬ ವದಂತಿ ಇತ್ತು. ಆದರೆ ಈ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಹನ್ನೊಂದು ವರ್ಷಗಳ ಕಾಲ ಮಯೂರಿ, ಅರುಣ್‌ ಅವರು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮಗನಿದ್ದಾನೆ. ಕೊರೊನಾ ಲಾಕ್‌ಡೌನ್‌ ವೇಳೆ ಮದುವೆ ಆಗಿತ್ತು. ಈಗ ಸಂಬಂಧದಲ್ಲಿ ಬಿರುಕು ಶುರು ಆಗಿ ಎರಡು ವರ್ಷಗಳಾಗಿವೆ ಎನ್ನಲಾಗ್ತಿದೆ.

34
ಚೈತ್ರಾ ವಾಸುದೇವನ್‌

ಚೈತ್ರಾ ವಾಸುದೇವನ್‌ ಅವರು ಎರಡು ವರ್ಷದ ಹಿಂದೆ ಡಿವೋರ್ಸ್‌ ಪಡೆದಿದ್ದರು. ಇವರು ಮದುವೆಯಾಗಿ ಐದು ವರ್ಷಗಳಾಗಿತ್ತು ಎನ್ನಲಾಗ್ತಿದೆ. ಪರಸ್ಪರ ಒಪ್ಪಿಕೊಂಡು ಡಿವೋರ್ಸ್‌ ಪಡೆದಿದ್ದಾರೆ. ಈಗ ಚೈತ್ರಾ ವಾಸುದೇವನ್‌ ಅವರು ಎರಡನೇ ಮದುವೆ ಆಗಿದ್ದಾರೆ.

44
ದಿವ್ಯಾ ಶ್ರೀಧರ್

ಆಕಾಶ ದೀಪ ಧಾರಾವಾಹಿ ನಟಿ ದಿವ್ಯಾ ಶ್ರೀಧರ್ ಅವರು ತಮಿಳು ನಟ ಅರ್ನವ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರು ಸೀಕ್ರೆಟ್‌ ಆಗಿ ಮದುವೆಯಾದ ಬಳಿಕ ಈ ವಿಷಯವನ್ನು ರಿವೀಲ್‌ ಮಾಡಿದ್ದರು. ದಿವ್ಯಾ ಪ್ರಗ್ನೆಂಟ್‌ ಆದ ಬಳಿಕ ಅರ್ನವ್‌ ಅವರು ಮೋಸ ಮಾಡಿದ್ದಾರೆ, ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪ ಮಾಡಿದ್ದರು. ಆ ಬಳಿಕ ಡಿವೋರ್ಸ್‌ಗೋಸ್ಕರ ಒಂದಿಷ್ಟು ಜಗಳ ಆಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories