Yes ಹೇಳಿ ವರ್ಷ ಒಂದು… ಆಮೇಲೆ ಆಗಿದ್ದೇ ಬೇರೆ ಎಂದ ವೈಷ್ಣವಿ ಗೌಡ ಪತಿ

Published : Apr 14, 2026, 03:50 PM IST

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರು ನಿಶ್ಚಿತಾರ್ಥವಾಗಿ ಒಂದು ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಪತಿ ಅನುಕೂಲ್ ಮಿಶ್ರಾ ವಿಶೇಷ ಫೋಟೊಗಳ ಮೂಲಕ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ. 

PREV
15
ವೈಷ್ಣವಿ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೂ ಒಂದೆರಡು ತಿಂಗಳು ಬಾಕಿ ಇದೆ. ಆದರೆ ನಟಿಯ ಪತಿ ಇವತ್ತಿನ ಸ್ಪೆಷಲ್ ಡೇ ನೆನಪಿಸಿಕೊಂಡು, ವಿಶೇಷವಾದ ಫೋಟೊ ಹಂಚಿಕೊಂಡು ಶುಭ ಕೋರಿದ್ದಾರೆ.

25
ಏನಿವತ್ತು ವಿಶೇಷ?

ಅಂದ ಹಾಗೆ ಕಳೆದ ವರ್ಷ ಇದೇ ದಿನ ಅಂದರೆ ಏಪ್ರಿಲ್ 14ರಂದು ವೈಷ್ಣವಿ ಗೌಡ, ಸಿಂಗಲ್ ಆಗಿದ್ದವರು, ಮಿಂಗಲ್ ಆಗೋದಕ್ಕೆ ಅಸ್ತು ಎಂದಿದ್ದರು. ಅಂದರೆ, ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಭಾರಿ ಸುದ್ದಿಯಾಗಿದ್ದರು. ಇದೀಗ ಆ ದಿನಕ್ಕೆ ಒಂದು ವರ್ಷ ತುಂಬಿದೆ.

35
ವೈಷ್ಣವಿಗೆ ವಿಶ್ ಮಾಡಿ ಕಾಲೆಳೆದ ಪರಿ

ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೊ ಗಳನ್ನು ಹಂಚಿಕೊಂಡಿರುವ ಅನುಕೂಲ್ ಮಿಶ್ರಾ “ಒಂದು ವರ್ಷದ ಹಿಂದೆ ಅವಳು yes ಎಂದಳು. ನನ್ನ ಜೀವನ ಇನ್ನಷ್ಟು ಸುಂದರವಾಯಿತು... ಮತ್ತು ನನಗೆ 'Yes Dear' ವಿಭಾಗಕ್ಕೆ ಬಡ್ತಿ ಸಿಕ್ಕಿತು. (1 year ago she said yes. My life got more beautiful… and I got promoted to ‘Yes Dear’ department.”) ಎಂದು ಪ್ರೀತಿಯಿಂದ ವಿಶ್ ಮಾಡಿ ಪತ್ನಿಯ ಕಾಲೆಳೆದಿದ್ದಾರೆ.

45
ಅನುಕೂಲ್ ಮಿಶ್ರಾ ಜೊತೆ ವಿವಾಹ

ವೈಷ್ಣವಿ ಗೌಡ ವಿವಾಹವು ಉತ್ತರ ಪ್ರದೇಶ ಮೂಲದ ವಾಯುಪಡೆ ಅಧಿಕಾರಿ ಅನುಕೂಲ್ ಮಿಶ್ರಾ ಜೊತೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದು ಅರೇಂಜ್ ಮ್ಯಾರೇಜ್, ಮನೆಯವರು ನೋಡಿ ಮಾಡಿದ ಬಂಧ ಎಂದು ವೈಷ್ಣವಿ ಈ ಹಿಂದೆ ಹೇಳಿದ್ದರು. ಈ ವಿವಾಹವು ಅದ್ಧೂರಿಯಾಗಿ ಉತ್ತರ ಭಾರತೀಯ ಶೈಲಿಯಲ್ಲಿಯೇ ನಡೆದಿತ್ತು.

55
ಮತ್ತೆ ಕಿರುತೆರೆಗೆ ಎಂಟ್ರಿ.

ಅಗ್ನಿ ಸಾಕ್ಷಿ ಮೂಲಕ ಜನಪ್ರಿಯತೆ ಪಡೆದು, ಸೀತಾ ರಾಮ ಧಾರಾವಾಹಿ ಮೂಲಕ ಜನಮನ ಗೆದ್ದ ವೈಷ್ಣವಿ ಗೌಡ, ಇದೀಗ ಹೊಸ ಧಾರಾವಾಹಿಯಲ್ಲಿ, ಹೊಸ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ನಟಿ ಈಗಾಗಲೇ ಹೇಳಿದ್ದಾರೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಜೊತೆ ಕೃತಿಕಾ ರವೀಂದ್ರ ಕೂಡ ನಟಿಸುತ್ತಿದ್ದಾರೆ. ಆದರೆ ಧಾರಾವಾಹಿ ಯಾವ ವಾಹಿನಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories